ನಿರ್ಬಂಧ ತೆರವು ಬೆನ್ನಲ್ಲೇ ವಿಶ್ವವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡು

ನಿರ್ಬಂಧ ತೆರವು ಬೆನ್ನಲ್ಲೇ ವಿಶ್ವವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡು

ವಿಜಯನಗರ: ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಆಗಿದ್ದು, ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.

ಕೊರೊನಾ 2ನೇ ಅಲೆ ಹೆಚ್ಚಾದ ಬೆನ್ನಲ್ಲೇ ಕಳೆದ ಏ.15 ರಂದು ಹಂಪಿ ವೀಕ್ಷಿಸಲು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದ್ರೀಗ ಕೊರೊನಾ ಕಡಿಮೆಯಾದ ಹಿನ್ನಲೆ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ‌. ಹೀಗಾಗಿ ಬೆಳಗ್ಗೆಯಿಂದಲೇ ಹಂಪಿ ವೀಕ್ಷಣೆ ಮಾಡಲು ಜನ ಬರ್ತಿದ್ದಾರೆ.

ಮುಂಜಾನೆ 6 ಗಂಟೆಯಿಂದ ಸಂಜೆ 5ವರೆಗೂ ಪ್ರವಾಸಿಗರ ಭೇಟಿಗೆ ಅವಕಾಶ ಮಾಡಿ ಕೊಡಲಾಗಿದೆ‌‌. ಇನ್ನೂ ಪ್ರವಾಸಿಗರು ಆಫ್ಲೈನ್ ಸೇರಿದಂತೆ ಆಫ್‌ಲೈನ್​ನಲ್ಲಿಯೂ ಟಿಕೆಟ್ ಪಡೆದು ಹಂಪಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

 

The post ನಿರ್ಬಂಧ ತೆರವು ಬೆನ್ನಲ್ಲೇ ವಿಶ್ವವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡು appeared first on News First Kannada.

Source: newsfirstlive.com

Source link