ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್​​ಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ಇಂದು ನಗರದಲ್ಲಿ ಮೊಬೈಲ್ ಆಕ್ಸಿಜನ್ ವಾಹನಗಳಿಗೆ ಚಾಲನೆ ನೀಡಲಾಗಿದೆ.

ಮಹಾಲಕ್ಷ್ಮೀ ಲೇಔಟ್​ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದ ಮುಂಭಾಗ, ಇಂದು ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರು ಉಚಿತ ಮೊಬೈಲ್ ಆಕ್ಸಿಜನ್ ವಾಹನಗಳನ್ನು ಉದ್ಘಾಟಿಸಿದರು.  ಇದೇ ಸಂದರ್ಭದಲ್ಲಿ ಕೆಂಪೇಗೌಡ ಸಮುದಾಯದ ಭವನದಲ್ಲಿ ಸಿದ್ಧಪಡಿಸಿರುವ 90 ಹಾಸಿಗೆಯುಳ್ಳ ಕೋವಿಡ್ 19 ಸೆಂಟರ್ ವೀಕ್ಷಿಸಿದರು.

ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ, ಬಿಬಿಎಂಪಿ ಮಾಜಿ ಉಪ ಮಹಾಪೌರ ಎಂ.ಎಸ್.ಹರೀಶ್, ಬಿಬಿಎಂಪಿ ಮಾಜಿ ಸದಸ್ಯ ಕೆ.ವಿ ರಾಜೇಂದ್ರ ಕುಮಾರ್, ಬಿಬಿಎಂಪಿ ವಲಯ ಆಯುಕ್ತರಾದ ಬಸವರಾಜು, ವಲಯ ಸಂಯೋಜಕ ಉಜ್ವಲ್ ಘೋಷ್, ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ವಲಯ ಆರೋಗ್ಯ ಅಧಿಕಾರಿಗಳಾದ ಡಾ, ಮನೋರಂಜನ್ ಹೆಗ್ಡೆ ಸೇರಿದಂತೆ ಬಿಬಿಎಂಪಿಯ ಹಲವು ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

The post ನಿರ್ಮಲಾನಂದ ಸ್ವಾಮೀಜಿಯಿಂದ ಮೊಬೈಲ್​ ಆಕ್ಸಿಜನ್​ ವಾಹನ ಉದ್ಘಾಟನೆ appeared first on News First Kannada.

Source: newsfirstlive.com

Source link