
ವಿರೂಪಗೊಂಡ
ವಿಗ್ರಹಗಳನ್ನು
ಐತಿಹಾಸಿಕ ಮಾಲೇಕಲ್ಲು ತಿರುಪತಿ ಬೆಟ್ಟದ ಬಳಿ, ನಿರ್ಮಾಣ ಹಂತದಲ್ಲಿರುವ ದೇವರ ವಿಗ್ರಹಗಳನ್ನು ದುಷ್ಕರ್ಮಿಗಳು ನಿನ್ನೆ ಸಂಜೆ ದಾಳಿ ವಿರೂಪಗೊಳಿಸಿದ್ದಾರೆ.
ಹಾಸನ: ನಿರ್ಮಾಣ ಹಂತದಲ್ಲಿದ್ದ ದೇವರ ವಿಗ್ರಹಗಳ ಮೇಲೆ ದಾಳಿ ಮಾಡಿ ಕಿಡಿಗೇಡಿಗಳು ವಿರೂಪಗೊಳಿಸಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ಗ್ರಾಮದಲ್ಲಿ ನಡೆದಿದೆ. ಐತಿಹಾಸಿಕ ಮಾಲೇಕಲ್ಲು ತಿರುಪತಿ ಬೆಟ್ಟದ ಬಳಿ, ನಿರ್ಮಾಣ ಹಂತದಲ್ಲಿರುವ ದೇವರ ವಿಗ್ರಹಗಳನ್ನು ದುಷ್ಕರ್ಮಿಗಳು ನಿನ್ನೆ ಸಂಜೆ ದಾಳಿ ವಿರೂಪಗೊಳಿಸಿದ್ದಾರೆ. ಬೆಟ್ಟದ ಈಜುಕೊಳ ಹಿಂಭಾಗ, ಶ್ರೀನಿವಾಸ ಕಲ್ಯಾಣ ಮ್ಯೂಸಿಯಂ ನಿರ್ಮಾಣಕ್ಕೆಂದು ನಿರ್ಮಾಣ ಹಂತದಲ್ಲಿದ್ದ ದೇವರ ವಿಗ್ರಹಗಳನ್ನ ಭಗ್ನಗೊಳಿಸಲಾಗಿದೆ. ವಿಗ್ರಹಗಳ ಕೈ, ಕಾಲು ಸೇರಿದಂತೆ ಹಲವು ಭಾಗಗಳನ್ನು ವಿರೂಪಗೊಳಿಸಿ ಪರಾರಿಯಾಗಿದ್ದು, ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ಗೌಡ, ಡಿವೈಎಸ್ಪಿ ಅಶೋಕ್, ಗ್ರಾಮಾಂತರ ವೃತ್ತ ಸಿಪಿಐ ವಸಂತ್.ಕೆ.ಎಂ. ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅರಸೀಕೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.