ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಪೂರ್ವ ಕೃಷ್ಣ ಟಾಕೀಸ್ ನಲ್ಲಿ ಅಜೇಯ್ ರಾವ್ ಗ ಜೋಡಿಯಾಗಿದ್ದು, ಸಿನಿಮಾ ಏಪ್ರಿಲ್ 16 ರಂದು ರಿಲೀಸ್ ಆಗಲಿದೆ.

ಥಿಯೇಟರ್ ಗಳಲ್ಲಿ ಶೇ. 50 ರಷ್ಟು ಸೀಟು ನಿಯಮವಾದ ನಂತರ ಬಿಡುಗಡೆಯಾಗುತ್ತಿರುವ  ಮತ್ತೊಂದು ಸಿನಿಮಾ ದಾಗಿದೆ.  ಸಿನಿಮಾ ರಿಲೀಸ್ ಆಗುವ ಬಗ್ಗೆ ನಿರ್ಮಾಪಕರು ವಿಶ್ವಾಸದಲ್ಲಿದ್ದಾರೆ ಎಂದು ನಟಿ ಅಪೂರ್ವ ಹೇಳಿದ್ದಾರೆ.ಕೃಷ್ಣ ಟಾಕೀಸ್ ಥ್ರಿಲ್ಲರ್ ಮಿಸ್ಟ್ರಿ ಕಥೆ ಹೊಂದಿದ್ದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂದು ವಿವರಿಸಿದ್ದಾರೆ.

ನಾನು ಆಕಸ್ಮಿಕವಾಗಿ ಸಿನಿಮಾರಂಗಕ್ಕೆ ಬಂದೆ, ಮೊದಲ ಸಿನಿಮಾ ನಂತರ ಬಹ ಸಮಯದ ವರೆಗೆ ಚಿತ್ರರಂಗದಿಂದ ದೂರಉಳಿದಿದ್ದೆ, ಇಲ್ಲಿನ ಆಗಿ ಹೋಗುಗಳ ಬಗ್ಗೆ ನನಗೆ ಅರಿವಿರಲಿಲ್ಲ, ನನ್ನ ವಿಧ್ಯಾಭ್ಯಾಸದ ಕಡೆ ನಾನು ಗಮನ ಹರಿಸಿದ್ದೆ,  ಆದರೆ ವಿಧಿ ಮತ್ತೆ ನನ್ನನ್ನು ಕಲಾ ಪ್ರಪಂಚಕ್ಕೆ ಎಳೆದು ತಂದಿದೆ ಎಂದು ಅಪೂರ್ವ ಹೇಳಿದ್ದಾರೆ.

ನಾನು ನಿಧಾನವಾಗಿ ನನ್ನ ವೃತ್ತಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇನೆ, ನನಗೆ ಅಪಾರ ಪ್ರಮಾಣದಲ್ಲಿ ಅವಕಾಶಗಳು ಬಂದವು, ಆದರೆ ದುರಾದಷ್ಟವಶಾತ್ ಕೊರೋನಾ ಲಾಕ್ ಡೌನ್ ನಿಂದಾಗಿ ನನ್ನ ಪ್ರಾಜೆಕ್ಟ್ ವಿಳಂಬವಾಯಿತು ಎಂದಿದ್ದಾರೆ. 

ಅಜಯ್ ರಾವ್ ಜೊತೆ ಇದು ನನ್ನ ಮೊದಲ ಸಿನಿಮಾವಾಗಿದೆ,  ಇದುವರೆಗೆ ಕೃಷ್ಣ ಎಂಬ ಟೈಟಲ್ ನಲ್ಲಿ ಅಜೇಯ್ ರಾವ್ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಹೀಗಾಗಿ ಮತ್ತೆ ತಮ್ಮ ಸಕ್ಸಸ್ ಟೈಟಲ್ ಮೊರೆ ಹೋಗಿದ್ದಾರೆ ಅಜೇಯ್ ರಾವ್.
 
ಈಗಾಗಲೇ ಇದರ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ ಚಿತ್ರ ತಂಡ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಸರ್ಕಾರದ ನಿಯಮದಂತೆ ಶೇ.50 ಪ್ರೇಕ್ಷಕರ ಉಪಸ್ಥಿತಿಯಲ್ಲಿ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಅಜಯ್ ರಾವ್ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ.  ಸಸ್ಪೆನ್ಸ್‌, ಥ್ರಿಲ್ಲರ್‌ ಶೈಲಿಯಲ್ಲೇ ಇದೊಂದು ಹೊಸ ಪ್ರಯತ್ನ, ನಿಮಾದಲ್ಲಿ ಹಾರರ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಷನ್‌, ಆಕ್ಷನ್‌ ಎಲ್ಲವೂ ಇದೆ. ಅಜಯ್‌ ರಾವ್‌ ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಫ‌ಸ್ಟ್‌ ಟೈಮ್‌ ಇಂಥದ್ದೊಂದು ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಮಿಡಿ ಪಾತ್ರಕ್ಕೆ ಮೊದಲ ಬಾರಿ ಅಜಯ್ ರಾವ್ ಸಿನಿಮಾದಲ್ಲಿ ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶೋಭರಾಜ್‌, ಪ್ರಮೋದ್‌ ಶೆಟ್ಟಿ, ಮಂಡ್ಯ ರಮೇಶ್, ನಿರಂತ್, ಪ್ರಕಾಶ್ ತುಮಿನಾಡು ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಕೃಷ್ಣ ಟಾಕೀಸ್’ ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯಿದ್ದು, ಈ ಸಿನಿಮಾ ಮೂಲಕ ಕೃಷ್ಣ ಸೀರೀಸ್ ಐದು ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ಇವರದ್ದಾಗಿದೆ. ಚಿತ್ರಕ್ಕೆ ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣವಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More