ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕು ತಡೆಗಟ್ಟಲು ದೇಶದ ಒಂದಷ್ಟು ರಾಜ್ಯಗಳಲ್ಲಿ ಲಾಕ್​​ಡೌನ್​ ಹೇರಲಾಗಿದ್ದು, ಕಾರ್ಮಿಕರು, ಚಿತ್ರೋದ್ಯಮದ ಸದಸ್ಯರು, ಇನ್ನೂ ಹಲವಾರು ವರ್ಗದವರು ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ಹಲವಾರು ಮಂದಿ ಸಹಾಯಹಸ್ತ ಚಾಚುತ್ತಿದ್ದಾರೆ.

ಇದೀಗ ನಿರ್ಮಾಪಕ ಭರತ್​ ಗೌಡ ಟ್ರಸ್ಟ್​ ವತಿಯಿಂದ ಕಷ್ಟದಲ್ಲಿರುವ ಚಿತ್ರರಂಗಕ್ಕೆ, ಚಿತ್ರರಂಗದ ಕಲಾವಿದರಿಗೆ ಫುಡ್​ ಕಿಟ್​ ನೀಡಲಾಗಿದೆ. ರೇಸ್​ ಕೋರ್ಸ್​​ ಬಳಿಯಿರುವ ಗೃಹ ಕಚೇರಿಯಲ್ಲಿ ಡಿಸಿಎಂ ಡಾ.ಸಿ.ಎನ್​ ಅಶ್ವತ್ಥ್ ನಾರಾಯಣ್ ಈ ಫುಡ್​ ಕಿಟ್​ಗಳನ್ನ ವಿತರಿಸಿದ್ದಾರೆ. ಕಟ್ಲೆ ಸಿನಿಮಾ ನಿರ್ಮಾಪಕ ಭರತ್ ಗೌಡ್ ಟ್ರಸ್ಟ್ ವತಿಯಿಂದ ಒಟ್ಟು 200 ಕಲಾವಿದರಿಗೆ ಫುಡ್ ಕಿಟ್ ವಿತರಣೆ ಮಾಡಲಾಗಿದೆ.

ಇದೇ ವೇಳೆ ಮಾತನಾಡಿದ ಅಶ್ವತ್ಥ್ ನಾರಾಯಣ್, ಸರ್ಕಾರ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಬಗ್ಗೆ ಸುಳ್ಳು ಹೇಳಿಲ್ಲ. ಸಾವಿನ ಕಾರಣ‌ ಎಲ್ಲವೂ ದಾಖಲಾಗುತ್ತಿದೆ. ಯುವಕರೇ ಅತಿ ಹೆಚ್ಚು ಬಲಿಯಾಗಿರುವ ವಿಚಾರವೂ ನಿಜ. ಜೊತೆಗೆ ಚಿಕಿತ್ಸೆ, ಅಂತ್ಯಕ್ರಿಯೆ ಎಲ್ಲದರ ಮಾಹಿತಿಯೂ ಇದೆ ಎಂದರು. ಸಿದ್ದರಾಮಯ್ಯ ಅವರ ಆರೋಪದಲ್ಲಿ ಹುರುಳಿಲ್ಲ. ಮರಣ ಹಾಗೂ ಜನನ ಸಂಖ್ಯೆ ನಿಖರವಾಗಿದೆ. ಯಾವುದನ್ನೂ ಮರೆಮಾಚುವ ಅವಶ್ಯಕತೆ ಇಲ್ಲ. ರಾಜಕೀಯ ಮಾಡೋದಕ್ಕೆ ಬೇರೆ ಸಮಯ ಇದೆ, ಈಗೇನಿದ್ರೂ ಜನರ ಪರವಾಗಿ ಇರೋದು ಒಂದೇ ಅಂತ ಹೇಳಿದ್ರು.

ನಾನು ಬ್ಲ್ಯಾಕ್ ಫಂಗಸ್‌ಗೆ ಔಷಧ ಇದೆ ಅಂತ ಹೇಳಿಲ್ಲ. ಸ್ಟಾಕ್ ಲಭ್ಯವಿದೆ ಅಂತಾನೂ ನಾನು ಹೇಳಿಕೆ ನೀಡಿಲ್ಲ. ಆದರೆ ಅದಕ್ಕೆ ಪರ್ಯಾಯ ಔಷಧದ ಬಗ್ಗೆ ಹೇಳಿದ್ದೇನೆ. ಬ್ಲ್ಯಾಕ್ ಫಂಗಸ್ ಹೊಸ ರೋಗವಲ್ಲ. ನನ್ನ ಹೇಳಿಕೆಗೂ ಸುಧಾಕರ್ ಹೇಳಿಕೆಗೂ ವ್ಯತ್ಯಾಸವಿಲ್ಲ. ಲಸಿಕೆಯ ಬೇಡಿಕೆ ಅಪಾರವಾಗಿದೆ. ಇದರ ಬಗ್ಗೆ ಎರಡು ಮಾತಿಲ್ಲ. ಹಾಗೇ ಆ ಬೇಡಿಕೆ ಪೂರೈಸೋದಕ್ಕೆ ಸಮಸ್ಯೆಗಳೂ ತುಂಬಾ ಇದೆ. ಆದ್ಯತೆಯ ಮೇಲೆ ಜನರಿಗೆ ಲಸಿಕೆಯನ್ನ ಕೊಡಲಾಗುವುದು ಅಂತ ಅಶ್ವತ್ಥ್ ನಾರಾಯಣ್ ಹೇಳಿದ್ರು.

The post ನಿರ್ಮಾಪಕ ಭರತ್ ಗೌಡ ಟ್ರಸ್ಟ್​ನಿಂದ ಫುಡ್​ ಕಿಟ್​; ಕಲಾವಿದರಿಗೆ ವಿತರಿಸಿದ ಡಿಸಿಎಂ appeared first on News First Kannada.

Source: newsfirstlive.com

Source link