ಬೆಂಗಳೂರು: ‘ಕೊರೊನಾದ ಎರಡನೇ ಅಲೆ ಮಾರಣಾಂತಿಕವಾಗಿದೆ.. ಯಾರೂ ಸುಖಾಸುಮ್ಮನೆ ಅಲ್ಲಿ, ಇಲ್ಲಿ ಓಡಾಡಬೇಡಿ..’ ಅಂತಾ ಸರ್ಕಾರ, ವೈದ್ಯರು, ಪೊಲೀಸರು ಪದೇ ಪದೇ ಮನವಿ ಮಾಡಿಕೊಳ್ತಿದ್ದಾರೆ. ಹೀಗಿದ್ದೂ ಜನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ರೋಸಿ ಹೋಗಿರುವ ಬೆಂಗಳೂರು ಪೊಲೀಸರು ರೂಲ್ಸ್​ ಬ್ರೇಕ್​ ಮಾಡ್ತಿರೋರಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡ್ತಿದ್ದಾರೆ.

ಹೌದು.. ಮಾದನಾಯಕನಹಳ್ಳಿ ಪೊಲೀಸರು.. ಅನಗತ್ಯವಾಗಿ ಓಡಾಡೋರನ್ನ ತಡೆದು ಹೂವಿನ ಹಾರ ಹಾಕಿ, ಮಂಗಳಾರತಿ ಎತ್ತಿ, ‘ದಯಮಾಡಿ ಇನ್ಮೆಲಾದ್ರೂ ರಸ್ತೆಗೆ ಬರಬೇಡ್ರಪ್ಪ.. ದಮ್ಮಯ್ಯ ಅಂತೀವಿ’ ಅಂತಾ ಪರಿಪರಿಯಾಗಿ ಬೇಡಿಕೊಳ್ತಿದ್ದಾರೆ.

ಅದರಂತೆ ಅನಗತ್ಯವಾಗಿ ಓಡಾಟ ನಡೆಸುತ್ತಿರುವ ವಾಹನ ಸವಾರರಿಗೆ ಹೋವಿನ ಹಾರ, ಅರಿಸಿಣ ಕುಂಕುಮ ಹಚ್ಚಿ ಮಂಗಳಾರತಿ ಎತ್ತುತ್ತಿರುವ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೇಳಿದ ಮಾತನ್ನ ಕೇಳದವರಿಗೆ ಪೊಲೀಸರು ಈ ರೀತಿಯ ವಿಭಿನ್ನ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನಾದರೂ ಜನರು ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕ್ತಾರಾ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

The post ನಿಲ್ಲದ ಅನಗತ್ಯ ಓಡಾಟ.. ಬೇಸತ್ತ ಪೊಲೀಸರಿಂದ ಹಾರ ಹಾಕಿ ‘ಮಂಗಳಾರತಿ’ appeared first on News First Kannada.

Source: newsfirstlive.com

Source link