ಬೆಂಗಳೂರು: ದೇಶದಲ್ಲಿ ಮಾರಕ ಕೊರೊನಾ ಹೊಸ ವೈರಸ್ ಒಮಿಕ್ರಾನ್ ಅಟ್ಟಹಾಸ ಮುಂದುವರೆದಿದೆ. ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಕೊರೊನಾ ಮಹಾಮಾರಿ ಕೇಕೆ ಹಾಕುತ್ತಿದೆ. ಪ್ರತಿನಿತ್ಯ ಹತ್ತಾರು ಸಾವಿರ ಕೇಸ್ ವರದಿಯಾಗುತ್ತಿವೆ. ಇತ್ತ ರಾಜಧಾನಿ ಬೆಂಗಳೂರಲ್ಲಿ ಕೂಡ ದಿನದಿಂದ ದಿನಕ್ಕೆ ಕೇಸ್ಗಲ ಸಂಖ್ಯೆ ವೇಗ ಪಡೆಯುತ್ತಿದ್ದು ಸಾಕಷ್ಟು ಆತಂಕ ತಂದಿಟ್ಟಿದೆ.
ಕಳೆದ 10 ದಿನಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಸೋಂಕು ಹೆಚ್ಚಳ ಹಿನ್ನೆಲೆ ಸಮುದಾಯ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಕಸರತ್ತು ನಡೆಸಿದೆ. ಪರಿಣಾಮ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಗಳು, ಅಪಾರ್ಟ್ಮೆಂಟ್, ಹೌಸಿಂಗ್ ಸೊಸೈಟಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿ ಹಲವು ಸಲಗೆಗಳನ್ನು ಪಾಲಿಸಲು ಕೋರಿದೆ.
ಮಾರ್ಗಸೂಚಿಯಲ್ಲಿರೋ ಅಂಶಗಳೇನು..?
- ಪ್ರವೇಶ ದ್ವಾರದಲ್ಲಿ ಎಲ್ಲಾ ನಿವಾಸಿಗಳಿಗೆ, ಮನೆ ಸಹಾಯಕರು ಮತ್ತು ವಿಸಿಟರ್ಸ್ ಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
- ಪ್ರವೇಶದ್ವಾರದಲ್ಲಿ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸೇಶನ್ ಪರಿಶೀಲನೆ ಮಾಡಿ ಒಳಬಿಡಬೇಕು
- ಪದೇ ಪದೇ ಮುಟ್ಟುವ ಸಾಮಾನ್ಯ ಪ್ರದೇಶಗಳನ್ನ ಸೋಡಿಯಂ ಹೈಪೋಕ್ಲೋರೈಡ್, ಬ್ಲೀಚಿಂಗ್ ಪೌಡರ್, ಅಥವಾ ಯಾವುದೇ ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಬೇಕು.
- ವಾಕಿಂಗ್, ಜಾಗಿಂಗ್, ವಾಕ್ ವೇ ಮತ್ತು ಉದ್ಯಾನವನಗಳಂತಹ ಸಾಮಾನ್ಯ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.
- ವ್ಯಾಕ್ಸಿನೇಶನ್ ಕವರೇಜ್ ಉತ್ತೇಜಿಸಲು ಮತ್ತು ಜಾಗೃತಿ ಮೂಡಿಸಲು ಸಲಹೆ. ಹಾಗೂ ಕೋವಿಡ್ ಬಗೆಗಿನ ಆತಂಕಕಾರಿ ವದಂತಿಗಳನ್ನ ಗ್ರೂಪ್ ಗಳಲ್ಲಿ ಫಾರ್ವರ್ಡ್ ಮಾಡದಂತೆ ಸಲಹೆ
- ಜಿಮ್ ಗಳು, ಕ್ರೀಡಾ ಸೌಲಭ್ಯಗಳು, ಈಜು ಕೊಳಗಳ ಬಳಕೆ ತಪ್ಪಿಸಬೇಕು. ಮಾರ್ಗಸೂಚಿ ಪ್ರಕಾರ ಕ್ರಮ ವಹಿಸಬೇಕು.
- ತೆರೆದ ಸ್ಥಳಗಳು ಮತ್ತು ಆಟವಾಡುವ ಪ್ರದೇಶಗಳಲ್ಲಿ ಮಕ್ಕಳು ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿರುವುದನ್ನ ಪೋಷಕರು ಮತ್ತು ಸಂಘದ ಸದಸ್ಯರು ಖಚಿತಪಡಿಸಿಕೊಳ್ಳಬೇಕು.
- ಪೋಷಕರು ತಮ್ಮ ಮಕ್ಕಳಿಗೆ ಕೋವಿಡ್-19 ಪರಿಸ್ಥಿತಿ ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯನ್ನ ಅರ್ಥೈಸಬೇಕು
- ಕ್ಲಬ್ ಹೌಸ್ ಅಥವಾ ಸಮುದಾಯ ಸಭಾಂಗಣದಲ್ಲಿ ಕಾರ್ಯಕ್ರಮ, ಕೂಟಗಳಲ್ಲಿ 50 ಮಂದಿ ಮೀರಬಾರದು.
- ಹೌಸಿಂಗ್ ಸೊಸೈಟಿಗಳ ತ್ಯಾಜ್ಯ ವಿಲೇವಾರಿಯನ್ನು ಪ್ರತ್ಯೇಕವಾಗಿ ಮಾಡಬೇಕು. ಒಂದು ಸೂಕ್ತ ಸ್ಥಳವನ್ನು ಗುರುತಿಸಿ ಪ್ರತ್ಯೇಕ ತೊಟ್ಟಿಗಳಲ್ಲಿ ತ್ಯಾಜ್ಯವನ್ನು ಎಸೆಯಲು ಬಳಸಬೇಕು.
- ಲಿಫ್ಟ್ ಮತ್ತು ಆಪರೇಟಿಂಗ್ ಬಟನ್ಗಳ ಸ್ಚಚ್ಛವಾಗಿಟ್ಟುಕೊಳ್ಳಬೇಕು
- ಸಾರ್ವಜನಿಕ ಆರೋಗ್ಯ ಅಧಿಕಾರಿಗಳೊಂದಿಗೆ ಅಸೋಸಿಯೇಷನ್ ಸಹಕರಿಸಬೇಕು
- ಪಾಸಿಟಿವ್ ಕಾಣಿಸಿಕೊಂಡ್ರೆ ಆರೋಗ್ಯಾಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ನಿವಾಸಿಗಳು ಸಹಕರಿಸಬೇಕು
- ಮೂರು ಅದಕ್ಕಿಂತ ಹೆಚ್ಚಿನ ಕೇಸ್ ಗಳು ಈ ಒಂದೇ ಕಡೆ ಕಾಣಿಸಿಕೊಂಡ್ರೆ ಕಂಟೈನ್ಮೆಂಟ್ ಜೋನ್ ಮಾಡಲಾಗುತ್ತೆ. ಬ್ಲಾಕ್, ಸಂಕೀರ್ಣವನ್ನ ನಿಷೇಧಿತ ಪ್ರದೇಶ ಮಾಡಲಾಗುತ್ತೆ.
- ಕಂಟೈನ್ಮೆಂಟ್ ಜೋನ್ ಘೋಷಿಸಿದ್ರೆ ಎಲ್ಲಾ ನಿವಾಸಿಗಳನ್ನು ಪರೀಕ್ಷಿಸಲಾಗುತ್ತೆ
- ಎಲ್ಲಾ ಪ್ರಾಥಮಿಕ ಸಂಪರ್ಕಿತರು ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಕಡ್ಡಾಯಎಲ್ಲರ ರಿಸಲ್ಟ್ ಬರುವವರೆಗೂ ಪ್ರತಿಯೊಬ್ಬರೂ ಕ್ವಾರಂಟೀನ್ ನಲ್ಲಿರಬೇಕು
- ಹೋಮ್ ಕ್ವಾರಂಟೀನ್ಗೆ ಸಲಹೆ ನೀಡಲಾದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರಬೇಕು. ವೆಲ್ಪೇರ್ ಅಸೋಸಿಯೇಷನ್ ಅವರ ಮೇಲೆ ನಿಗಾ ಇಡಬೇಕು
- ಕ್ವಾರಂಟೀನ್ ಗೆ ಶಿಫಾರಸು ಮಾಡಲಾದ ಮನೆಗಳಿಗೆ ಆರೋಗ್ಯ ಅಧಿಕಾರಿಗಳು ಹೋಮ್ ಕ್ವಾರಂಟೀನ್ ಪೋಸ್ಟರ್ಗಳನ್ನು ಅಂಟಿಸುತ್ತಾರೆ.
- ಕೋವಿಡ್ ರೋಗಲಕ್ಷಣಗಳನ್ನ ಹೊಂದಿರುವ ನಿವಾಸಿಗಳು ಅಥವಾ ಪಾಸಿಟಿವ್ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವ ಶಂಕಿತರನ್ನು ಆರೋಗ್ಯಾಧಿಕಾರಿಗಳು ಟ್ರ್ಯಾಕಿಂಗ್ ಮಾಡಲಿದ್ದಾರೆ. ಆಗ ನಿವಾಸಿಗಳು ಸಹಕರಿಸಬೇಕು
- ಕೋವಿಡ್ ಪಾಸಿಟಿವ್ ಆದ ನಿವಾಸಿಗಳು ಮೊಬೈಲ್, ವಾಟ್ಸಾಪ್ ಮೂಲಕ ನೆರೆಹೊರೆಯವರ ಸಂಪರ್ಕದಲ್ಲಿರಬೇಕು
- ಯಾವುದೇ ನಿವಾಸಿ ಅಂತರಾಷ್ಟ್ರೀಯ/ಅಂತರರಾಜ್ಯ ಪ್ರಯಾಣವನ್ನು ಕೈಗೊಂಡಿದ್ದರೆ, ಅವರ RTPCR ನೆಗೆಟಿವ್ ರಿಪೋರ್ಟ್ ಉಚಿತಪಡಿಸಿಕೊಳ್ಳಬೇಕು
- ಪೋಷಕರು ತಮ್ಮ ಮಕ್ಕಳಿಗೆ COVID 19 ರ ಪರಿಸ್ಥಿತಿ ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯ ಕುರಿತು ಸಲಹೆ ನೀಡಬೇಕು. ವಿಧಿಸಲಾದ ನಿರ್ಬಂಧಗಳನ್ನ ಅರ್ಥ ಮಾಡಿಸಬೇಕು.
- ಗರ್ಭಿಣಿಯರು, ತಾಯಂದಿರು, ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಕಾಲಾ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕೋವಿಡ್ ಲಕ್ಷಣಗಳು ಇದ್ರೆ ಪರೀಕ್ಷೆಗಾಗಿ ಬಿಬಿಎಂಪಿಗೆ ಮಾಹಿತಿ ನೀಡಬೇಕು
- ಸಾಕುಪ್ರಾಣಿಗಳನ್ನು ಹೊಂದಿರುವ ನಿವಾಸಿಗಳು ಸಾಕುಪ್ರಾಣಿಗಳನ್ನು ವಾಕಿಂಗ್ ಗೆ ಕೊಂಡೊಯ್ಯಬಹುದು ಮತ್ತು ಸಾಮಾನ್ಯ ಸ್ಥಳಗಳು ಅಥವಾ ತೆರೆದ ಪ್ರದೇಶಗಳಲ್ಲಿ ಇರುವಾಗ ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಬೇಕು
- ಕೊರಿಯರ್ಗಳು ಮತ್ತು ವಿತರಣಾ ಸೇವೆಗಳನ್ನ ಮುಖ್ಯ ದ್ವಾರದವರೆಗೆ ಸೀಮಿತ ಮಾಡಬೇಕು.ವಿಸಿಟರ್ಸ್ ಪೂರ್ಣ ಲಸಿಕೆ ಹಾಕಿಸಿಕೊಂಡಿರೋದನ್ನ ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಸಲಹೆ.
- ವೈದ್ಯಕೀಯ, ಕೊಳಾಯಿ, ಎಲೆಕ್ಟ್ರಿಕಲ್, ಅಡುಗೆ ಅನಿಲ, ನೀರು ಸರಬರಾಜು ಮುಂತಾದ ತುರ್ತು ಅಗತ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಪಡೆಯಬೇಕು.
- ಎಲ್ಲಾ ನಿವಾಸಿಗಳು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು
- ಮನೆಕೆಲಸದವರು, ಸೆಕ್ಯುರಿಟಿ ಮತ್ತು ಇತರ ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು
- BBMP ಮಾರ್ಷಲ್ಗಳು ಮತ್ತು ಪ್ರಾದೇಶಿಕ ಆರೋಗ್ಯ ಅಧಿಕಾರಿಗಳಿಗೆ ನಗರದಾದ್ಯಂತ ಕೋವಿಡ್ ಸೂಕ್ತ ನಡವಳಿಕೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಅವರು ಪೂರ್ವ ಸೂಚನೆಯಿಲ್ಲದೆ ಅಪಾರ್ಟ್ಮೆಂಟ್ ಸಂಕೀರ್ಣಗಳು ಅಥವಾ ವಸತಿ ಸಂಘಗಳಿಗೆ ಭೇಟಿ ನೀಡಬಹುದು, RWAಗಳು ಮತ್ತು ನಿವಾಸಿಗಳು ಅದಕ್ಕೆ ಅನುಗುಣವಾಗಿ ಸಹಕರಿಸಬೇಕು.
- ಕೋವಿಡ್ 19 ಪರಿಣಾಮಕಾರಿ ಕಾರ್ಯಾಚರಣೆ, ಕಣ್ಗಾವಲು ಮತ್ತು ನಿಯಂತ್ರಣಕ್ಕಾಗಿ RWAಗಳು ಆಂತರಿಕ ಸಮಿತಿಗಳು ಅಥವಾ ಕಾರ್ಯಪಡೆಗಳನ್ನು ರಚಿಸಬಹುದು.
- RWA ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಗತ್ಯ ವೈದ್ಯಕೀಯ ಬೆಂಬಲದೊಂದಿಗೆ ಕ್ವಾರಂಟೈನ್/ಐಸೋಲೇಶನ್ ಸೌಲಭ್ಯಗಳನ್ನು ಹೊಂದಬಹದು
- RWAS, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳು, ಹೌಸಿಂಗ್ ಸೊಸೈಟಿಗಳು ಬಿಬಿಎಂಪಿ ಆರೋಗ್ಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ಒಬ್ಬರನ್ನ ನೇಮಿಸಬೇಕು.