ನಿಲ್ಲದ ಕೊರೊನಾ ಕ್ವಾಟ್ಲೆ; ಅಪಾರ್ಟ್​​​ಮೆಂಟ್​ಗಳಿಗೆ ಹೊಗ ಮಾರ್ಗಸೂಚಿ ಏನ್​​ಗೊತ್ತಾ?


ಬೆಂಗಳೂರು: ದೇಶದಲ್ಲಿ ಮಾರಕ ಕೊರೊನಾ ಹೊಸ ವೈರಸ್​​ ಒಮಿಕ್ರಾನ್​​ ಅಟ್ಟಹಾಸ ಮುಂದುವರೆದಿದೆ. ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಕೊರೊನಾ ಮಹಾಮಾರಿ ಕೇಕೆ ಹಾಕುತ್ತಿದೆ. ಪ್ರತಿನಿತ್ಯ ಹತ್ತಾರು ಸಾವಿರ ಕೇಸ್​​ ವರದಿಯಾಗುತ್ತಿವೆ. ಇತ್ತ ರಾಜಧಾನಿ ಬೆಂಗಳೂರಲ್ಲಿ ಕೂಡ ದಿನದಿಂದ ದಿನಕ್ಕೆ ಕೇಸ್​ಗಲ ಸಂಖ್ಯೆ ವೇಗ ಪಡೆಯುತ್ತಿದ್ದು ಸಾಕಷ್ಟು ಆತಂಕ ತಂದಿಟ್ಟಿದೆ.

ಕಳೆದ 10 ದಿನಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಸೋಂಕು ಹೆಚ್ಚಳ ಹಿನ್ನೆಲೆ ಸಮುದಾಯ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಕಸರತ್ತು ನಡೆಸಿದೆ. ಪರಿಣಾಮ ರೆಸಿಡೆಂಟ್ ವೆಲ್​ಫೇರ್​ ಅಸೋಸಿಯೇಷನ್‌ಗಳು, ಅಪಾರ್ಟ್‌ಮೆಂಟ್, ಹೌಸಿಂಗ್ ಸೊಸೈಟಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿ ಹಲವು ಸಲಗೆಗಳನ್ನು ಪಾಲಿಸಲು ಕೋರಿದೆ.

ಮಾರ್ಗಸೂಚಿಯಲ್ಲಿರೋ ಅಂಶಗಳೇನು..?

 • ಪ್ರವೇಶ ದ್ವಾರದಲ್ಲಿ ಎಲ್ಲಾ ನಿವಾಸಿಗಳಿಗೆ, ಮನೆ ಸಹಾಯಕರು ಮತ್ತು ವಿಸಿಟರ್ಸ್ ಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
 • ಪ್ರವೇಶದ್ವಾರದಲ್ಲಿ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸೇಶನ್ ಪರಿಶೀಲನೆ ಮಾಡಿ ಒಳಬಿಡಬೇಕು
 • ಪದೇ ಪದೇ ಮುಟ್ಟುವ ಸಾಮಾನ್ಯ ಪ್ರದೇಶಗಳನ್ನ ಸೋಡಿಯಂ ಹೈಪೋಕ್ಲೋರೈಡ್, ಬ್ಲೀಚಿಂಗ್ ಪೌಡರ್, ಅಥವಾ ಯಾವುದೇ ಸೋಂಕು ನಿವಾರಕ ಬಳಸಿ ಸ್ವಚ್ಛಗೊಳಿಸಬೇಕು.
 • ವಾಕಿಂಗ್, ಜಾಗಿಂಗ್‌, ವಾಕ್‌ ವೇ ಮತ್ತು ಉದ್ಯಾನವನಗಳಂತಹ ಸಾಮಾನ್ಯ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.
 • ವ್ಯಾಕ್ಸಿನೇಶನ್ ಕವರೇಜ್ ಉತ್ತೇಜಿಸಲು ಮತ್ತು ಜಾಗೃತಿ‌ ಮೂಡಿಸಲು ಸಲಹೆ. ಹಾಗೂ ಕೋವಿಡ್ ಬಗೆಗಿನ ಆತಂಕಕಾರಿ ವದಂತಿಗಳನ್ನ ಗ್ರೂಪ್ ಗಳಲ್ಲಿ ಫಾರ್ವರ್ಡ್ ಮಾಡದಂತೆ ಸಲಹೆ
 • ಜಿಮ್ ಗಳು, ಕ್ರೀಡಾ ಸೌಲಭ್ಯಗಳು, ಈಜು ಕೊಳಗಳ ಬಳಕೆ ತಪ್ಪಿಸಬೇಕು. ಮಾರ್ಗಸೂಚಿ ಪ್ರಕಾರ ಕ್ರಮ ವಹಿಸಬೇಕು.
 • ತೆರೆದ ಸ್ಥಳಗಳು ಮತ್ತು ಆಟವಾಡುವ ಪ್ರದೇಶಗಳಲ್ಲಿ ಮಕ್ಕಳು ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿರುವುದನ್ನ ಪೋಷಕರು ಮತ್ತು ಸಂಘದ ಸದಸ್ಯರು ಖಚಿತಪಡಿಸಿಕೊಳ್ಳಬೇಕು.
 • ಪೋಷಕರು ತಮ್ಮ ಮಕ್ಕಳಿಗೆ ಕೋವಿಡ್-19 ಪರಿಸ್ಥಿತಿ ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯನ್ನ ಅರ್ಥೈಸಬೇಕು
 • ಕ್ಲಬ್ ಹೌಸ್ ಅಥವಾ ಸಮುದಾಯ ಸಭಾಂಗಣದಲ್ಲಿ ಕಾರ್ಯಕ್ರಮ,‌ ಕೂಟಗಳಲ್ಲಿ 50 ಮಂದಿ ಮೀರಬಾರದು.
 • ಹೌಸಿಂಗ್ ಸೊಸೈಟಿಗಳ ತ್ಯಾಜ್ಯ ವಿಲೇವಾರಿಯನ್ನು ಪ್ರತ್ಯೇಕವಾಗಿ ಮಾಡಬೇಕು. ಒಂದು ಸೂಕ್ತ ಸ್ಥಳವನ್ನು ಗುರುತಿಸಿ ಪ್ರತ್ಯೇಕ ತೊಟ್ಟಿಗಳಲ್ಲಿ ತ್ಯಾಜ್ಯವನ್ನು ಎಸೆಯಲು ಬಳಸಬೇಕು.
 • ಲಿಫ್ಟ್ ಮತ್ತು ಆಪರೇಟಿಂಗ್ ಬಟನ್‌ಗಳ ಸ್ಚಚ್ಛವಾಗಿಟ್ಟುಕೊಳ್ಳಬೇಕು
 • ಸಾರ್ವಜನಿಕ ಆರೋಗ್ಯ ಅಧಿಕಾರಿಗಳೊಂದಿಗೆ ಅಸೋಸಿಯೇಷನ್ ಸಹಕರಿಸಬೇಕು
 • ಪಾಸಿಟಿವ್ ಕಾಣಿಸಿಕೊಂಡ್ರೆ ಆರೋಗ್ಯಾಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ನಿವಾಸಿಗಳು ಸಹಕರಿಸಬೇಕು
 • ಮೂರು ಅದಕ್ಕಿಂತ ಹೆಚ್ಚಿನ ಕೇಸ್ ಗಳು ಈ ಒಂದೇ ಕಡೆ ಕಾಣಿಸಿಕೊಂಡ್ರೆ ಕಂಟೈನ್ಮೆಂಟ್ ಜೋನ್ ಮಾಡಲಾಗುತ್ತೆ. ಬ್ಲಾಕ್, ಸಂಕೀರ್ಣವನ್ನ ನಿಷೇಧಿತ ಪ್ರದೇಶ ಮಾಡಲಾಗುತ್ತೆ.
 • ಕಂಟೈನ್ಮೆಂಟ್ ಜೋನ್ ಘೋಷಿಸಿದ್ರೆ ಎಲ್ಲಾ ನಿವಾಸಿಗಳನ್ನು ಪರೀಕ್ಷಿಸಲಾಗುತ್ತೆ
 • ಎಲ್ಲಾ ಪ್ರಾಥಮಿಕ ಸಂಪರ್ಕಿತರು ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಕಡ್ಡಾಯಎಲ್ಲರ ರಿಸಲ್ಟ್ ಬರುವವರೆಗೂ ಪ್ರತಿಯೊಬ್ಬರೂ ಕ್ವಾರಂಟೀನ್ ನಲ್ಲಿರಬೇಕು
 • ಹೋಮ್ ಕ್ವಾರಂಟೀನ್‌ಗೆ ಸಲಹೆ ನೀಡಲಾದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರಬೇಕು. ವೆಲ್ಪೇರ್ ಅಸೋಸಿಯೇಷನ್ ಅವರ ಮೇಲೆ‌ ನಿಗಾ ಇಡಬೇಕು
 • ಕ್ವಾರಂಟೀನ್ ಗೆ ಶಿಫಾರಸು ಮಾಡಲಾದ ಮನೆಗಳಿಗೆ ಆರೋಗ್ಯ ಅಧಿಕಾರಿಗಳು ಹೋಮ್ ಕ್ವಾರಂಟೀನ್ ಪೋಸ್ಟರ್‌ಗಳನ್ನು ಅಂಟಿಸುತ್ತಾರೆ.
 • ಕೋವಿಡ್ ರೋಗಲಕ್ಷಣಗಳನ್ನ ಹೊಂದಿರುವ ನಿವಾಸಿಗಳು ಅಥವಾ ಪಾಸಿಟಿವ್ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವ ಶಂಕಿತರನ್ನು ಆರೋಗ್ಯಾಧಿಕಾರಿಗಳು ಟ್ರ್ಯಾಕಿಂಗ್ ಮಾಡಲಿದ್ದಾರೆ. ಆಗ ನಿವಾಸಿಗಳು ಸಹಕರಿಸಬೇಕು
 • ಕೋವಿಡ್ ಪಾಸಿಟಿವ್ ಆದ ನಿವಾಸಿಗಳು ಮೊಬೈಲ್​, ವಾಟ್ಸಾಪ್‌ ಮೂಲಕ ನೆರೆಹೊರೆಯವರ ಸಂಪರ್ಕದಲ್ಲಿರಬೇಕು
 • ಯಾವುದೇ ನಿವಾಸಿ ಅಂತರಾಷ್ಟ್ರೀಯ/ಅಂತರರಾಜ್ಯ ಪ್ರಯಾಣವನ್ನು ಕೈಗೊಂಡಿದ್ದರೆ, ಅವರ RTPCR‌‌ ನೆಗೆಟಿವ್ ರಿಪೋರ್ಟ್ ಉಚಿತಪಡಿಸಿಕೊಳ್ಳಬೇಕು
 • ಪೋಷಕರು ತಮ್ಮ ಮಕ್ಕಳಿಗೆ COVID 19 ರ ಪರಿಸ್ಥಿತಿ ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯ ಕುರಿತು ಸಲಹೆ ನೀಡಬೇಕು. ವಿಧಿಸಲಾದ ನಿರ್ಬಂಧಗಳನ್ನ ಅರ್ಥ ಮಾಡಿಸಬೇಕು.
 • ಗರ್ಭಿಣಿಯರು, ತಾಯಂದಿರು, ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಕಾಲಾ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕೋವಿಡ್ ಲಕ್ಷಣಗಳು ಇದ್ರೆ ಪರೀಕ್ಷೆಗಾಗಿ ಬಿಬಿಎಂಪಿಗೆ ಮಾಹಿತಿ ನೀಡಬೇಕು
 • ಸಾಕುಪ್ರಾಣಿಗಳನ್ನು ಹೊಂದಿರುವ ನಿವಾಸಿಗಳು ಸಾಕುಪ್ರಾಣಿಗಳನ್ನು ವಾಕಿಂಗ್ ಗೆ ಕೊಂಡೊಯ್ಯಬಹುದು ಮತ್ತು ಸಾಮಾನ್ಯ ಸ್ಥಳಗಳು ಅಥವಾ ತೆರೆದ ಪ್ರದೇಶಗಳಲ್ಲಿ ಇರುವಾಗ ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಬೇಕು
 • ಕೊರಿಯರ್‌ಗಳು ಮತ್ತು ವಿತರಣಾ ಸೇವೆಗಳನ್ನ ಮುಖ್ಯ ದ್ವಾರದವರೆಗೆ ಸೀಮಿತ ಮಾಡಬೇಕು.ವಿಸಿಟರ್ಸ್ ಪೂರ್ಣ ಲಸಿಕೆ ಹಾಕಿಸಿಕೊಂಡಿರೋದನ್ನ ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಸಲಹೆ.

 • ವೈದ್ಯಕೀಯ, ಕೊಳಾಯಿ, ಎಲೆಕ್ಟ್ರಿಕಲ್, ಅಡುಗೆ ಅನಿಲ, ನೀರು ಸರಬರಾಜು ಮುಂತಾದ ತುರ್ತು ಅಗತ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಪಡೆಯಬೇಕು.
 • ಎಲ್ಲಾ ನಿವಾಸಿಗಳು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು
 • ಮನೆಕೆಲಸದವರು, ಸೆಕ್ಯುರಿಟಿ ಮತ್ತು ಇತರ ಸಿಬ್ಬಂದಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು
 • BBMP ಮಾರ್ಷಲ್‌ಗಳು ಮತ್ತು ಪ್ರಾದೇಶಿಕ ಆರೋಗ್ಯ ಅಧಿಕಾರಿಗಳಿಗೆ ನಗರದಾದ್ಯಂತ ಕೋವಿಡ್ ಸೂಕ್ತ ನಡವಳಿಕೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಅವರು ಪೂರ್ವ ಸೂಚನೆಯಿಲ್ಲದೆ ಅಪಾರ್ಟ್ಮೆಂಟ್ ಸಂಕೀರ್ಣಗಳು ಅಥವಾ ವಸತಿ ಸಂಘಗಳಿಗೆ ಭೇಟಿ ನೀಡಬಹುದು, RWAಗಳು ಮತ್ತು ನಿವಾಸಿಗಳು ಅದಕ್ಕೆ ಅನುಗುಣವಾಗಿ ಸಹಕರಿಸಬೇಕು.
 • ಕೋವಿಡ್ 19 ಪರಿಣಾಮಕಾರಿ ಕಾರ್ಯಾಚರಣೆ, ಕಣ್ಗಾವಲು ಮತ್ತು ನಿಯಂತ್ರಣಕ್ಕಾಗಿ RWAಗಳು ಆಂತರಿಕ ಸಮಿತಿಗಳು ಅಥವಾ ಕಾರ್ಯಪಡೆಗಳನ್ನು ರಚಿಸಬಹುದು.
 • RWA ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಗತ್ಯ ವೈದ್ಯಕೀಯ ಬೆಂಬಲದೊಂದಿಗೆ ಕ್ವಾರಂಟೈನ್/ಐಸೋಲೇಶನ್ ಸೌಲಭ್ಯಗಳನ್ನು ಹೊಂದಬಹದು
 • RWAS, ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳು, ಹೌಸಿಂಗ್ ಸೊಸೈಟಿಗಳು ಬಿಬಿಎಂಪಿ ಆರೋಗ್ಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ಒಬ್ಬರನ್ನ ನೇಮಿಸಬೇಕು.

News First Live Kannada


Leave a Reply

Your email address will not be published. Required fields are marked *