ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಜೋರಾಗಿದ್ದು ಇದುವರೆಗೂ 15 ಮಂದಿಯನ್ನು ಸಾವನ್ನಪ್ಪಿದ್ದಾರೆ.

ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ 74 ಜನರಿಗೆ ಬ್ಲ್ಯಾಕ್ ಫಂಗಸ್ ದೃಢವಾಗಿದ್ದು.. ಇದುವರೆಗೂ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ನ್ಯೂಸ್ ಫಸ್ಟ್‌ಗೆ ಬಳ್ಳಾರಿ ಡಿಎಚ್‌ಒ ಡಾ.ಜನಾರ್ಧನ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಬ್ಬರ ಕಡಿಮೆಯಾದರೂ ಬ್ಲ್ಯಾಕ್ ಫಂಗಸ್ ಕಾಟ ಜೋರಾಗಿದ್ದು, ಜಿಲ್ಲಾಡಾಳಿತಕ್ಕೆ ತಲೆ ನೋವು ತಂದಿದೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು 74 ಕ್ಕೂ ಹೆಚ್ಚು ರೋಗಿಗಳು ಬ್ಲ್ಯಾಕ್​ ಫಂಗಸ್​​ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಅಗತ್ಯವಿರುವ ಔಷಧಿಯ ಅಭಾವ ಎದುರಾಗಿದ್ದು, ನಿನ್ನೆ ಮಧ್ಯಾಹ್ನವರೆಗೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ರಾಜ್ಯ ಸರ್ಕಾರ ಕೇವಲ 84 ಡೋಸ್ ಔಷಧ ಪೂರೈಕೆ ಮಾಡಿದೆ. ಬ್ಲ್ಯಾಕ್ ಫಂಗಸ್ ಔಷಧಿ ಬಂದಿರುವ ಬಗ್ಗೆ ವಿಮ್ಸ್ ಆಸ್ಪತ್ರೆ ವೈದ್ಯ ಮೂಲಗಳಿಂದ ಮಾಹಿತಿ ಲಭಿಸಿದೆ.

The post ನಿಲ್ಲದ ಬ್ಲ್ಯಾಕ್ ಫಂಗಸ್ ಕಾಟ: ಬಳ್ಳಾರಿ ಜಿಲ್ಲೆಯೊಂದರಲ್ಲೇ 15 ಮಂದಿ ಸಾವು appeared first on News First Kannada.

Source: newsfirstlive.com

Source link