ದೊಡ್ಡಬಳ್ಳಾಪುರ: ಹಾಡು ಹಗಲೇ ಕಳ್ಳರು ಕೈ ಚಳಕ ತೋರಿಸಿ ಬೈಕ್​ ಡಿಕ್ಕಿಯಲ್ಲಿಟ್ಟಿದ್ದ ನಾಲ್ಕು ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ರಮೇಶ್ ಎಂಬಾತ ನಗರದ ಕರ್ನಾಟಕ ಬ್ಯಾಂಕ್​ನಿಂದ ಹಣವನ್ನು ಡ್ರಾ ಮಾಡಿಕೊಂಡು ತನ್ನ ಗೆಳೆಯನಿಗೆ ನೀಡಬೇಕೆಂದು ಕೋರ್ಟ್‌ ರಸ್ತೆಯ ಹೀರೋ ಶೋರೂಂ ಮುಂದೆ ನಿಲ್ಲಿಸಿ ಟೀ ಕುಡಿಯುವುದಕ್ಕೆ ಅಂಗಡಿಗೆ ಹೋದಾಗ ಬೈಕ್​ಗೆ ಡಿಕ್ಕಿ ಹೊಡೆದು ಕಳ್ಳರು ಕರಾಮತ್ತು ತೋರಿಸಿದ್ದಾರೆ. ದಿನದಿಂದ ದಿನಕ್ಕೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಹಾಡಹಗಲೇ ಜನದಟ್ಟಣೆ ಇರುವ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವುದು ಜನರ ಆತಂಕಕ್ಕೂ ಕಾರಣವಾಗಿದೆ.

ಇನ್ನು, ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಡಿವೈಎಸ್​ಪಿ ರಂಗಪ್ಪ, ನಗರ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಗೋವಿಂದ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಹಣ ಕಳೆದುಕೊಂಡ ರಮೇಶ್‌ ಹಾಗೂ ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಸುತ್ತಮುತ್ತಲಿನ ಸಿಸಿಟಿವಿ ಆಧರಿಸಿ ಕಳ್ಳರ ಬಂಧಿಸುತ್ತೇವೆ ಎಂದು ಪೋಲಿಸರು ತಿಳಿಸಿದ್ದಾರೆ.

 

The post ನಿಲ್ಲಿಸಿದ್ದ ಬೈಕ್​ಗೆ ಡಿಕ್ಕಿ ಹೊಡೆದ್ರು.. ಡಿಕ್ಕಿಯಲ್ಲಿಟ್ಟಿದ್ದ 4 ಲಕ್ಷ ಹಣವನ್ನೂ ಕದ್ದುಬಿಟ್ರು appeared first on News First Kannada.

Source: newsfirstlive.com

Source link