ನಿವೇದಿತಾ ಗೌಡ ತುಟಿಗೆ ಚಂದನ್ ಶೆಟ್ಟಿ ಮುತ್ತಿಟ್ಟ ವಿಡಿಯೋ ವೈರಲ್; ನೆಟ್ಟಿಗರಿಂದ ಟೀಕೆ | Chandan Shetty Lip Kiss to Nivedhitha Gowda Video go viral


ನಿವೇದಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಅವರು ರೀಲ್ಸ್ ಮಾಡುತ್ತಾರೆ. ಅವರು ಹಂಚಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳನ್ನು ನೋಡೋಕೆ ಫ್ಯಾನ್ಸ್​ಗೂ ಸಾಕಷ್ಟು ಇಷ್ಟ.

ನಿವೇದಿತಾ ಗೌಡ ತುಟಿಗೆ ಚಂದನ್ ಶೆಟ್ಟಿ ಮುತ್ತಿಟ್ಟ ವಿಡಿಯೋ ವೈರಲ್; ನೆಟ್ಟಿಗರಿಂದ ಟೀಕೆ

ಚಂದನ್​-ನಿವೇದಿತಾ

ಬಿಗ್ ಬಾಸ್ (Bigg Boss)​ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ‘ಬಿಗ್ ಬಾಸ್’ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಇಬ್ಬರಿಗೂ ಪ್ರೀತಿ ಹುಟ್ಟೋಕೆ ಬಿಗ್ ಬಾಸ್ ವೇದಿಕೆ ಆಯಿತು. ‘ನಿವೇದಿತಾ ಚಿಕ್ಕ ಮಕ್ಕಳಂತೆ ಆಡುತ್ತಾರೆ’ ಎಂಬುದು ಕೆಲವರ ಅಭಿಪ್ರಾಯ. ಚಂದನ್ ಶೆಟ್ಟಿ ಅವರ ಮನಸ್ಥಿತಿ ಬೇರೆ ತರಹದ್ದು. ‘ಇಬ್ಬರೂ ಮದುವೆ ಆದರೆ ಸುಖವಾಗಿ ಇರುವುದಿಲ್ಲ’ ಎಂದು ಅನೇಕರು ಭವಿಷ್ಯ ನುಡಿದಿದ್ದೂ ಇದೆ. ಆದರೆ, ಈ ಜೋಡಿ ಅದನ್ನು ಸುಳ್ಳು ಮಾಡಿದೆ. ಮದುವೆ ಆಗಿ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ನಿವೇದಿತಾ ಹಂಚಿಕೊಂಡಿರುವ ಹೊಸ ವಿಡಿಯೋ ಸಖತ್ ವೈರಲ್ ಆಗಿದೆ.

ನಿವೇದಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಅವರು ರೀಲ್ಸ್ ಮಾಡುತ್ತಾರೆ. ಅವರು ಹಂಚಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳನ್ನು ನೋಡೋಕೆ ಫ್ಯಾನ್ಸ್​ಗೂ ಸಾಕಷ್ಟು ಇಷ್ಟ. ಆದರೆ, ಒಂದು ವರ್ಗದ ಜನರು ಈ ಬಗ್ಗೆ ಟೀಕೆ ಮಾಡುತ್ತಾರೆ. ಈಗ ನಿವೇದಿತಾ ಹೊಸ ರೀಲ್ಸ್​ ಹಂಚಿಕೊಂಡಿದ್ದಾರೆ. ಇದರಲ್ಲಿ ಚಂದನ್ ಅವರು ನಿವೇದಿತಾ ತುಟಿಗೆ ಮುತ್ತಿಟ್ಟಿದ್ದಾರೆ.

ನಿವೇದಿತಾ ಹಾಗೂ ಚಂದನ್ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡುತ್ತಾ ಚಂದನ್ ಅವರು ನಿವೇದಿತಾ ತುಟಿಗೆ ಕಿಸ್ ಮಾಡುತ್ತಾರೆ. ಆ ರೀತಿಯಲ್ಲಿ ರೀಲ್ಸ್ ಇದೆ. ಕೆಲವರು ನಿವೇದಿತಾ ಹಾಗೂ ಚಂದನ್ ಅವರ ಡ್ಯಾನ್ಸ್​ ಅನ್ನು ಹೊಗಳಿದ್ದಾರೆ. ಇನ್ನೂ ಕೆಲವರು ತೆಗಳಿದ್ದಾರೆ. ‘ಈ ರೀತಿಯ ವಿಡಿಯೋಗಳನ್ನು ಆನ್​ಲೈನ್​ಲ್ಲಿ ಪೋಸ್ಟ್ ಮಾಡುವ ಅವಶ್ಯಕತೆ ಏನಿದೆ’ ಎಂದು ಪ್ರಶ್ನೆ ಮಾಡಿದ್ದಾರೆ.

TV9 Kannada


Leave a Reply

Your email address will not be published.