ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ ವಿಶ್ವನಾಥ್ ಹಾವೇರಿ ಮೊನ್ನೆ ಮೊನ್ನೆಯಷ್ಟೆ ತಾವೂ ಕಿಚ್ಚ ಸುದೀಪ್ ಮುಂದೆ ಅಂದ್ರೆ ಬಿಗ್ಬಾಸ್ ಲಾಂಚ್ ದಿನ ಹಾಡಿದ ನೀನಿಲ್ಲದೆ ಹಾಡನ್ನೂ ಸದ್ಯ ಕಂಪೊಸ್ ಮಾಡಿದ್ದಾರೆ. ಮೊನ್ನೆ ಅಂದ್ರೆ 25ನೇ ತಾರೀಖು ಈ ಹಾಡಿನ ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು..
ಇದೀಗ ನೀನಿಲ್ಲದೆ ಈ ಜೀವನ ಶೂನ್ಯ ಹಾಡು ರಿಲೀಸ್ ಆಗಿದೆ.. ಮಾತ್ರವಲ್ಲದೆ ರಿಲೀಸ್ ಆದ ಕಲವೇ ಗಂಟೆಗಳಲ್ಲಿ ಸಖತ್ ವ್ಯೂವ್ಸ್ನ ಕೂಡ ಪಡೆದುಕೊಂಡಿದೆ.. ಹಾಡಿಗೆ ಕಮೆಂಟ್ಸ್ಗಳ ಸುರಿಮಳೆಯೇ ಹರಿದು ಬಂದಿದೆ..
ಇನ್ನೂ ಈ ವಿಶ್ವ ಈ ಹಾಡನ್ನು ಹಾಡುವುದು ಮಾತ್ರವಲ್ಲದೆ ಆ್ಯಕ್ಟ್ ಕೂಡ ಮಾಡಿದ್ದಾರೆ.. ಈ ಹಾಡಿನಲ್ಲಿ ವಿಶ್ವನಿಗೆ ಜೋಡಿಯಾಗಿ ಸ್ಯಾಮ್ವೆಲ್ ಕಾಣಿಸಿಕೊಂಡಿದ್ದಾರೆ.. ಇಬ್ಬರ ನಟನೆ ಕೂಡ ಸಖತ್ ಆಗಿ ಮೂಡಿಬಂದಿದೆ..ಹಾಡಿನ ಮೇಕಿಂಗ್ ಕೂಡ ನೋಡಗರಿಗೆ ಇಷ್ಟವಾಗಿದೆ..
ಇದು ಒಂದು ಲವ್ ಬೇಸ್ಡ್ ಸಾಂಗ್ ಆಗಿದ್ದು.. ವಿಶ್ವ ಅವ್ರು ಸಂಗೀತದ ಮೇಲೆ ಇನ್ನೂ ಕಾನ್ಸ್ಂಟ್ರೇಟ್ ಮಾಡ್ಲಿ ಅಂತಾ ಬ್ರೇಕಪ್ ಮಾಡಿಕೊಳ್ತಾಳೆ.. ಆದೇ ರೀತಿ ವಿಶ್ವ ಅವಳ ಆಸೆಯಂತೆ ಒಬ್ಬ ದೊಡ್ಡ ಸಿಂಗರ್ ಆಗ್ತಾನೆ.. ಇದು ಇವ್ರ ಹಾಡಿನ ಮುಖ್ಯ ಎಳೆಯಾಗಿದೆ..
ಇನ್ನೂ 18 ಕಂಟೆಸ್ಟೆಂಟ್ಗಳ ಪೈಕಿ ವಿಶ್ವನಾಥ್ ಹಾವೇರಿ ಕೂಡ ಒಬ್ಬರು.. ಬಿಗ್ಬಾಸ್ ಮನೆಯಲ್ಲಿ ಬಹಳ ಚಿಕ್ಕವಯ್ಯಸಿನ ಸ್ಪರ್ಧಿ ಅಂದ್ರೆ ವಿಶ್ವನಾಥ್.ಬಿಗ್ಬಾಸ್ ಮನೆಯಲ್ಲಿ ಒಂದಿಷ್ಟು ಹಾಡುಗಳನ್ನು ಬರೆದು ಅವ್ರ ಧ್ವಿನಿಯಲ್ಲಿ ಹಾಡಿ ಎಂಟರ್ಟೈನ್ ಮಾಡಿದ್ದರು.. ವಿಶ್ವ ಮಾತ್ರವಲ್ಲದೆ ಅವ್ರ ಸಾಂಗ್ ಹುಡುಗಿಯರಿಗೆ ಸಖತ್ ಇಷ್ಟವಾಗಿತ್ತು.. ವಿಶ್ವ ತಾವು 3 ವರ್ಷವಿರುವಾಗಲೆ ಹಾಡು ಹಾಡ್ತಾಯಿದ್ರು.. ಹಾಗೂ ಕಳೆದೆ 6 ವರ್ಷಗಳಿಂದ ಕಂಪೊಸ್ ಕೂಡ ಮಡ್ತಾಯಿದ್ರಂತೆ..
ಪ್ರತಿ ಇಂಟರ್ವ್ಯೂವ್ನಲ್ಲೂ ವಿಶ್ವ ಹೇಳಿದಂತೆ ದೊಡ್ಡ ಸಿಂಗರ್ ಹಾಗೂ ಕಂಪೊಸರ್ ಆಗಬೇಕು ಅನ್ನುವ ಕನಸಿನೆಡೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಹಾಡಿನಲ್ಲಿ ತೋರಿಸಿದಂತೆ ನಿಜ ಜೀವನದಲ್ಲಿ ವಿಶ್ವನಾಥ್ ಅವ್ರ ಕನಸು ನನಸಾಗಲಿ ಎಂಬುವುದು ಎಲ್ಲರ ಆಶಯ.