ಬೆಂಗಳೂರು: ಸದನದಲ್ಲಿ ಸಚಿವ ಕೆ.ಎಸ್, ಈಶ್ವರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ತೀವ್ರತರವಾದ ಮಾತಿನ ಚಕಮಕಿ ನಡೆದಿದ್ದು, ಉಭಯ ನಾಯಕರು ಕೈಕೈ ಮಿಲಾಯಿಸೋ ಹಂತಕ್ಕೆ ಮುಂದಾದ ಪ್ರಸಂಗ ನಡೆಯಿತು.
ಜೈಲಿಗೆ ಹೋಗಿ ಬಂದವನು ನೀನು ದೇಶದ್ರೋಹಿ ಎಂದು ಈಶ್ವರಪ್ಪ ಹೇಳುತ್ತಿದ್ದಂತೆ ಕೆಂಡಾಮಂಡಲರಾದ ಶಿವಕುಮಾರ್, ನಿಮ್ಮಪ್ಪ ದೇಶದ್ರೋಹಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೇಲ್ ಮೇಲೆ ಹೊರಗಡೆ ಬಂದಿರುವನು ನೀನು ದೇಶದ್ರೋಹಿ. ಮತ್ತೆ ಯಾವಾಗ ಜೈಲಿಗೆ ಹೋಗ್ತಿಯೋ ನೋಡಿಕೋ ಎಂದು ಈಶ್ವರಪ್ಪ ಮತ್ತೇ ತೀರಾ ಕೆಳಮಟ್ಟದ ಹೇಳಿಕೆ ಬಳಸಿದರು. ಬಳಿಕ ಇಬ್ಬರು ನಾಯಕರು ಜಟಪಾಪಟಿಗೆ ಬಿದ್ದಿದ್ದಾರೆ. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕೈ ಮಿಲಾಯಿಸೋ ಹಂತಕ್ಕೆ ಮುಂದಾಗಿದ್ದರು.
ಈ ನಡುವೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಕಾಗೇರಿ ಇಬ್ಬರು ನಾಯಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.