ಅಲಿಗಢ: ಕಾಲುವೆಗೆ ಬಿದ್ದು ಮುಳುಗುತ್ತಿದ್ದ ವ್ಯಕ್ತಿಯನ್ನ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶದ ಎಸ್​ಐ ಸಾಹಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಅಲಿಗಢ ಕಾಲುವೆ ಒಂದರಲ್ಲಿ ವ್ಯಕ್ತಿಯೊಬ್ಬ ಮುಳುಗುತ್ತಿದ್ದ. ಈ ವಿಚಾರವನ್ನ ಸಬ್​​ಇನ್​ಸ್ಪೆಕ್ಟರ್​ ಆಶಿಶ್ ಕುಮಾರ್​​ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲಿಂದಲೇ ಓಡಿದ ಆಶಿಶ್ ಕುಮಾರ್ ನೇರವಾಗಿ ಕಾಲುವೆಗೆ ಹಾರುತ್ತಾರೆ. ತಾವು ತೊಟ್ಟಿದ್ದ ಯುನಿಫಾರ್ಮ್​​ನಲ್ಲೇ ಹಾರಿ, ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.

ಕುಮಾರ್ ಸಾಹಸಕ್ಕೆ ಅಲಿಗಢ ಪೊಲೀಸ್ ಮುಖ್ಯಸ್ಥರು ಶ್ಲಾಘಿಸಿದ್ದಾರೆ. ಇನ್ನು ಆಶಿಶ್ ಕುಮಾರ್​ ಅವರು, ಬಾಲ್ಯದಲ್ಲೇ ಈಜುವುದನ್ನ ಕಲಿತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಅವರು ಸ್ವಿಮ್ಮಿಂಗ್ ಮಾಡಿರಲಿಲ್ಲ. ಆದರೆ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಲು ನೀರಿಗೆ ಹಾರಿ, ಸಾಹಸ ಮಾಡಿ ರಕ್ಷಿಸಿದ್ದಾರೆ.

The post ನೀರಲ್ಲಿ ಮುಳುಗ್ತಿದ್ದ ವ್ಯಕ್ತಿ ರಕ್ಷಿಸಲು ಪೊಲೀಸ್ ಅಧಿಕಾರಿ ಮಾಡಿದ ಈ ಸಾಹಸ ಎದೆ ಝಲ್ ಎನಿಸುತ್ತೆ appeared first on News First Kannada.

Source: newsfirstlive.com

Source link