ನೀರಿಗೆ ಬಿದ್ದ ಬಾಲಕನನ್ನು ಕಾಪಾಡಿ ತನ್ನ ಪ್ರಾಣ ಕಳೆದುಕೊಂಡ ಬಾಲಕಿ

ನೀರಿಗೆ ಬಿದ್ದ ಬಾಲಕನನ್ನು ಕಾಪಾಡಿ ತನ್ನ ಪ್ರಾಣ ಕಳೆದುಕೊಂಡ ಬಾಲಕಿ

ಯಾದಗಿರಿ: ನೀರಲ್ಲಿ ಕಾರು ಜಾರಿ ಬಿದ್ದ ಕುರಿಗಾಯಿ ಬಾಲಕನನ್ನು ರಕ್ಷಿಸಲು ಹೋದ ಬಾಲಕಿಯೊಬ್ಬಳು ಜೀವ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ರಾಜಮ್ಮ(16) ಹೆಸರಿನ ಬಾಲಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.

ಜೋಳದಡಗಿ ಗ್ರಾಮದ ಅಡಕಲ್ ಬಂಡೆಯಲ್ಲಿ ಕುರಿಗಾಯಿ ಬಾಲಕನೋರ್ವ ನೀರು ಕುಡಿಯಲು ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಕೂಡಲೇ ಬಂಡೆ ಸಮೀಪ ದೌಡಾಯಿಸಿದ 16 ವರ್ಷದ ಬಾಲಕಿ, ಬಾಲಕನ ಕೈ ಹಿಡಿದು ಮೇಲೆ ಎತ್ತಲು ಹೋಗಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ.

ಇನ್ನು, ಈಜುಬಾರದ ಕಾರಣ ರಾಜಮ್ಮ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ವಡಗೇರಾ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಕೇಸ್​ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

The post ನೀರಿಗೆ ಬಿದ್ದ ಬಾಲಕನನ್ನು ಕಾಪಾಡಿ ತನ್ನ ಪ್ರಾಣ ಕಳೆದುಕೊಂಡ ಬಾಲಕಿ appeared first on News First Kannada.

Source: newsfirstlive.com

Source link