ರಾಮನಗರ : ನೀರಿನ ಪೈಪ್​ನಲ್ಲಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಜಿಲ್ಲೆಯ ಕೊಂಕಣಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ರಾಜಣ್ಣ (50) ಎಂಬಾತ ಹಳ್ಳದಲ್ಲಿ ನೀರು ಹೋಗಲು ನಿರ್ಮಿಸಿದ್ದ ಪೈಪ್ ನಲ್ಲಿ ಸಿಲುಕಿಕೊಂಡಿದ್ದರು.. ಒಂದು ಗಂಟೆಗೂ ಹೆಚ್ಚಿನ ಸಮಯದ ಕಾರ್ಯಾಚರಣೆಯ ಬಳಿಕ ಪೈಪ್​ನಿಂದ ವ್ಯಕ್ತಿಯನ್ನ ಹೊರತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

The post ನೀರಿನ ಪೈಪ್​ನಲ್ಲಿ ಸಿಲುಕಿದ ವ್ಯಕ್ತಿ.. ಗಂಟೆಗೂ ಹೆಚ್ಚು ಕಾಲ ಸಾವು-ಬದುಕಿನ ಹೋರಾಟ appeared first on News First Kannada.

Source: newsfirstlive.com

Source link