ರಾಯಚೂರು: ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್​ವೊಂದರಲ್ಲಿ ವಾಹನಗಳಿಗೆ ನೀರು ಮಿಶ್ರಿತ ಡಿಸೇಲ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಡೀಸಲ್​ಗೆ ನೀರು ಬೆರೆಸಿ ಹಾಕಿದ್ರಿಂದ ವಾಹನಗಳು ಸೀಜ್ ಆಗಿವೆ ಎನ್ನಲಾಗಿದೆ. ಹೀಗಾಗಿ ವಾಹನ ಮಾಲೀಕರು ಪೆಟ್ರೋಲ್ ಬಂಕ್​ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮುದಗಲ್ ಪಟ್ಟಣದ ಎಸ್.ಆರ್ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್​ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಎರಡು ಕಾರುಗಳಿಗೆ ಹಾಕಿಸಿದ್ದ ಡೀಸಲ್​​ನಲ್ಲಿ ನೀರು ಪತ್ತೆಯಾಗಿದೆ. ಮುದಗಲ್ನಿಂದ ರಾಯಚೂರಿಗೆ ಹೋಗುವಾಗ ನಿನ್ನೆ ಎರಡು ಕಾರುಗಳು ಮಧ್ಯಾಹ್ನ ಸೀಜ್ ಆಗಿವೆ ಎಂದು ಮಾಲೀಕರು ಹೇಳಿದ್ದಾರೆ.

ಇದರಿಂದ ಆಕ್ರೋಶಗೊಂಡ ಕಾರ್​ ಚಾಲಕರು ಇಂದು ಬಂಕ್​ಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

 

The post ನೀರು ಮಿಶ್ರಿತ ಡೀಸಲ್​ನಿಂದ ಕಾರುಗಳ ಇಂಜಿನ್ ಸೀಜ್: ಬಂಕ್​ ವಿರುದ್ಧ ಆಕ್ರೋಶ appeared first on News First Kannada.

Source: newsfirstlive.com

Source link