ನೀವು ಅತಿಯಾಗಿ ಮದ್ಯಪಾನ ಮಾಡುತ್ತೀರಾ? ನಿಮ್ಮ ಚರ್ಮದಲ್ಲಿ ಉಂಟಾಗುವ ಕೆಲವು ಬದಲಾವಣೆಗಳಿಂದ ತಿಳಿಯಬಹುದು | Drinking too much of alcohol signs skin problem check in Kannada


ನೀವು ಅತಿಯಾಗಿ ಮದ್ಯಪಾನ ಮಾಡುತ್ತೀರಾ? ನಿಮ್ಮ ಚರ್ಮದಲ್ಲಿ ಉಂಟಾಗುವ ಕೆಲವು ಬದಲಾವಣೆಗಳಿಂದ ತಿಳಿಯಬಹುದು

ಸಂಗ್ರಹ ಚಿತ್ರ

ಮದ್ಯಪಾನ ಧೂಮಪಾನಗಳೆಲ್ಲಾ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ತಿಳಿದಿದೆ. ಆದರೂ ಕೆಲವು ಆಲ್ಕೋಹಾಲ್​ಗೆ ಅತಿಯಾಗಿ ಹೊಂದಿಕೊಂಡಿರುತ್ತಾರೆ. ಅತಿಯಾದ ಮದ್ಯಪಾನದಿಂದ ಸ್ಥೂಲಕಾಯದ ಅಪಾಯ ಹೆಚ್ಚುವುದರ ಜೊತೆಗೆ ಹೃದಯ (Heart Health) ಮತ್ತು ಯಕೃತ್ತಿನ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ. ಅದಾಗ್ಯೂ ಕೆಲವು ರೋಗ ಲಕ್ಷಣಗಳು ಚರ್ಮದ (Skin Problems) ಮೇಲೆ ಕಾಣಿಸಿಕೊಳ್ಳತ್ತದೆ. ಯಾವುದೇ ಪೌಷ್ಟಿಕಾಂಶವನ್ನು ಹೊಂದಿರದ ಮದ್ಯಪಾನವು ನಿಮ್ಮ ಸುಂದರ ಕಾಂತಿಯುಕ್ತ ಚರ್ಮದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ನೀವು ಹೆಚ್ಚು ಮದ್ಯಪಾನ (Alcohol) ಮಾಡುತ್ತಿದ್ದೀರಿ ಎಂಬುದಕ್ಕೆ ನಿಮ್ಮ ಚರ್ಮವೇ ಸಾಕ್ಷಿ ಎಂಬಂತೆ ಮುಖದ ಮೇಲೆ ಗುಳ್ಳೆಗಳು, ಕೆನ್ನೆ ಕೆಂಪಾಗುವುದು ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ.

ದೀರ್ಘಕಾಲದ ಆಲ್ಕೋಹಾಲ್ ಸೇವನೆಯು ಪುರುಷರಲ್ಲಿ ದುರ್ಬಲತೆ ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಆಲ್ಕೋಹಾಲ್​ ಸೇವನೆ ನರಮಂಡಲವನ್ನು ಹಾನಿಗೊಳಿಸಬಹುದು. ಜೊತೆಗೆ ದೀರ್ಘಕಾಲದ ಆಲ್ಕೋಹಾಲ್ ಮೆದುಳಿನ ಕಾರ್ಯವನ್ನು ನಿಧಾನಗೊಳಿಸುತ್ತದೆ. ಮೆದುಳಿನ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ.

ಚರ್ಮ ಕೆಂಪಾಗುವುದು
ಆಲ್ಕೋಹಾಲ್ ಸೇವನೆಯು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ದಿರ್ಘಕಾಲದ ಉರಿಯೂತದಿಂದ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತವೆ. ದೀರ್ಘಕಾಲದ ಮದ್ಯಪಾನವು ಮುಖದ ಟೆಲಂಜಿಯೆಕ್ಟಾಸಿಯಾವನ್ನು ಪ್ರಚೋದಿಸಬಹುದು. ಮುಖದ ಮೇಲೆ ರಾಶಿಗಟ್ಟಲೆ ಮೊಡವೆಗಳು ಮತ್ತು ಬಿರಿಯುವ ಚರ್ಮ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ.

ಮಂದ ಚರ್ಮ
ಅತಿಯಾದ ಆಲ್ಕೋಹಾಲ್ ಸೇವನೆಯು ನಿಮ್ಮ ಚರ್ಮದ ಹೊಳಪು, ಟೋನ್ಅನ್ನು ಹಾಳು ಮಾಡುತ್ತದೆ. ಜೊತೆಗೆ ನಿಮ್ಮ ಮೈ ಬಣ್ಣ ಮಂದವಾಗುತ್ತದೆ ಅಂದರೆ ಹೊಳಪು ಕಳೆದುಕೊಳ್ಳುತ್ತದೆ. ಇದರಿಂದ ನೀವು ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತೀರಿ.

ಸುಕ್ಕುಗಳು
ಆಲ್ಕೋಹಾಲ್ ಅತಿಯಾದ ಬಳಕೆ ನಿಮ್ಮ ಚರ್ಮವನ್ನು ತುಂಬಾ ಬೇಗ ಹಾನಿಗೊಳಿಸುತ್ತದೆ. ನೀವು ಬೇಗ ವಯಸ್ಸಾದವರಂತೆ ಕಾಣಿಸಲು ಕಾರಣವಾಗುತ್ತದೆ. ಸುಕ್ಕುಗೆಟ್ಟ ಚರ್ಮ, ಮಂದ ಚರ್ಮ, ಮುಖದಲ್ಲಿ ಗುಳ್ಳೆಗಳು ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲದ ಆಲ್ಕೋಹಾಲ್ ಸೇವನೆಯು ರೋಗಲಕ್ಷಣಗಳನ್ನು ಉಲ್ಭಣಗೊಳಿಸುತ್ತದೆ.

TV9 Kannada


Leave a Reply

Your email address will not be published. Required fields are marked *