ನೀವು ಆನ್ಲೈನ್ ಶಾಪಿಂಗ್ ಮಾಡುವವರಾಗಿದ್ದರೆ ಓ ಎನ್ ಡಿ ಸಿ ಬಗ್ಗೆ ತಿಳಿದುಕೊಳ್ಳುವ ಜರೂರತ್ತಿದೆ | All online shoppers need to know about Open Network for Digital Commerceಆದರೆ ಸಮಸ್ಯೆಯೇನೆಂದರೆ ಅಮೇಜಾನ್, ಫ್ಲಿಪ್ ಕಾರ್ಟ್ ನಂಥ ದೊಡ್ಡ ಮಿಕಗಳದ್ದೇ ಪ್ರಾಬಲ್ಯ ಇರುವ ಇ-ಕಾಮರ್ಸ್ ಸೈಟ್ ಗಳಲ್ಲಿ ನಿಮಗೆ ಅತ್ಯಗತ್ಯವಾಗಿರುವ ಸಣ್ಣಪುಟ್ಟ ಸಾಮಾನುಗಳು (ಚೆಲ್ಲರೆ ಅಂಗಡಿಯಲ್ಲಿ ಸಿಗುವಂಥವು) ಸಿಗುವುದಿಲ್ಲ.

TV9kannada Web Team


| Edited By: Arun Belly

Jul 30, 2022 | 2:59 PM
ಬೆಂಗಳೂರು: ಆನ್ಲೈನ್ ಶಾಪಿಂಗ್ (online shopping) ಮಾಡದವರು ಯಾರಿದ್ದಾರೆ ಈ ಜಮಾನಾದಲ್ಲಿ? ಸಣ್ಣಪುಟ್ಟ ಊರುಗಳಲ್ಲೂ ಜನ ಈಗ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಈ ಶಾಪಿಂಗ್ ನಿಮ್ಮ ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ. ಆದರೆ ಸಮಸ್ಯೆಯೇನೆಂದರೆ ಅಮೇಜಾನ್ (Amazon), ಫ್ಲಿಪ್ ಕಾರ್ಟ್ ನಂಥ (Flipkart) ದೊಡ್ಡ ಮಿಕಗಳದ್ದೇ ಪ್ರಾಬಲ್ಯ ಇರುವ ಇ-ಕಾಮರ್ಸ್ ಸೈಟ್ ಗಳಲ್ಲಿ ನಿಮಗೆ ಅತ್ಯಗತ್ಯವಾಗಿರುವ ಸಣ್ಣಪುಟ್ಟ ಸಾಮಾನುಗಳು (ಚೆಲ್ಲರೆ ಅಂಗಡಿಯಲ್ಲಿ ಸಿಗುವಂಥವು) ಸಿಗುವುದಿಲ್ಲ. ಹಾಗಾಗೇ, ಭಾರತ ಸರ್ಕಾರ ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒ ಎನ್ ಡಿಸಿ) (Open Network for Digital Commerce) ಎಂಬ ಪ್ಲಾಟ್ ಫಾರ್ಮ್ ಆರಂಭಿಸಿದೆ. ಅದರ ಪ್ರಯೋಜನಗಳನ್ನು ಈ ವಿಡಿಯೋನಲ್ಲಿ ಕೇಳಿ ತಿಳಿದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ Money9 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ಏನಿದು Money9 ಆ್ಯಪ್?

Money9 ಒಂದು ಒಟಿಟಿ ಌಪ್ ಆಗಿದ್ದು ಗೂಗಲ್ ಪೇ ಮತ್ತು iOS ನಲ್ಲಿ ಲಭ್ಯವಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿ ಏಳು ಬಾಷೆಗಳಲ್ಲಿ ಚರ್ಚೆಗೊಳಗಾಗುತ್ತದೆ. ಇದೊಂದು ವಿನೂತನ ಮತ್ತು ವಿಶಿಷ್ಟ ಪ್ರಯೋಗವಾಗಿದೆ. ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಸ್, ಆಸ್ತಿ, ತೆರಿಗೆ, ಆರ್ಥಿಕ ನೀತಿಗಳು ಮೊದಲಾದ ವಿಷಯಗಳ ಜೊತೆಗೆ ಯಾವ ಅಂಶ ನಿಮ್ಮ ಪರ್ಸ್ ಮತ್ತು ಬಜೆಟ್ ಮೇಲೆ ಪ್ರಭಾವ ಬೀರುತ್ತದೆ ಅನ್ನೋದನ್ನು ಸಹ ಚರ್ಚಿಸಲಾಗುತ್ತದೆ.
ಹಾಗಾಗಿ ತಡಮಾಡದೆ Money9 ಌಪ್ ಅನ್ನು ಇಂದೇ ಡೌನ್ ಲೋಡ್ ಮಾಡಿಕೊಂಡು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಮ್ಮ ಗ್ರಹಿಕೆಯನ್ನು ವೃದ್ಧಿಸಿಕೊಳ್ಳಿ. ಯಾಕೆಂದರೆ Money9 ಗೆ ವಿಷಯಗಳನ್ನು ಅರ್ಥ ಮಾಡಿಕೊಂಡಾಗಲೇ ಅವು ಸುಲಭವೆನಿಸುತ್ತವೆ (Knowing Makes it Easy) ಎಂಬ ತತ್ವದಲ್ಲಿ ನಂಬಿಕೆ ಇದೆ.


TV9 Kannada


Leave a Reply

Your email address will not be published. Required fields are marked *