ನವದೆಹಲಿ: ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಎದುರಾದ ಹಿನ್ನೆಲೆ ದೆಹಲಿ ಹೈಕೋರ್ಟ್​ ಇಂದು ಈ ಸಂಬಂಧ ಕೋರ್ಟ್​ಗೆ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ದೆಹಲಿ ಸರ್ಕಾರಕ್ಕೆ ತರಾಟೆ ತೆಗೆದುಕೊಂಡ ಹೈಕೋರ್ಟ್ ಛೀಮಾರಿ ಹಾಕಿದೆ.

ಮಹಾರಾಜ ಅಗ್ರಸೇನ ಆಸ್ಪತ್ರೆಗೆ ಸೆಥ್ ಏರ್ ಕಂಪನಿ ಆಕ್ಸಿಜನ್ ಪೂರೈಸದ ವಿಚಾರವಾಗಿ ಸಿಟ್ಟಾದ ಕೋರ್ಟ್ ಸೆಥ್ ಏರ್ ಕಂಪನಿಯನ್ನು ದೆಹಲಿ ಸರ್ಕಾರ ತನ್ನ ಕೈಗೆ ತೆಗೆದುಕೊಳ್ಳುವಂತೆ ಹೇಳಿತು.

ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಹೇಳಿದ್ದೇನು..?

  • ಈವರೆಗೆ ಆಗಿದ್ದು ಸಾಕು, ನಿಮ್ಮಿಂದ ನಿರ್ವಹಣೆ ಮಾಡಲಾಗಲಿಲ್ಲ ಅಂದ್ರೆ ಹೇಳಿ.. ನಾವು ಕೇಂದ್ರ ಸರ್ಕಾರವನ್ನು ಕೈಗೆತ್ತಿಕೊಳ್ಳುವಂತೆ ಕೇಳ್ತೇವೆ. ಜನರು ಸಾಯುತ್ತಿದ್ದಾರೆ.
  • ನಾವು ಮತ್ತೆ ಮತ್ತೆ ನೋಡುತ್ತಿದ್ದೇವೆ. ನೀವು ಕೇವಲ ಲಾಲಿಪಾಪ್​ಗಳನ್ನಷ್ಟೇ ಹಂಚುತ್ತಿದ್ದೀರಿ. ಈ ವ್ಯಕ್ತಿ ತಮ್ಮ ಬಳಿ 20 ಟನ್​ ಆಕ್ಸಿಜನ್ ಇದೆ ಎಂದು ಹೇಳ್ತಿದ್ದಾರೆ. ಆದ್ರೆ ಇವರಿಗೆ ಯಾರಿಗೆ ಹಂಚಿಕೆ ಮಾಡಬೇಕೆಂದು ತಿಳಿದಿಲ್ಲ. ನೀವು ನೋಡಿದ್ರೆ ನಮ್ಮ ಬಳಿ ಆಕ್ಸಿಜನ್ ಇಲ್ಲವೇ ಇಲ್ಲ ಎನ್ನುತ್ತಿದ್ದೀರಿ.
  • ಮಿಸ್ಟರ್ ಸೇಠ್ ಅವರು ಆಕ್ಸಿಜನ್​ನ್ನು ಡೈವರ್ಟ್ ಮಾಡುತ್ತಿದ್ದಾರೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರಬಹುದು. ನಾವು ಜಿಎನ್​ಸಿಟಿಡಿಗೆ ಅವರ ಯೂನಿಟ್​ನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸುತ್ತೇವೆ.
  • ನಾಳೆಯೊಳಗೆ ದೆಹಲಿ ಸರ್ಕಾರ ಈ ಯೂನಿಟ್​​ನ್ನು ತನ್ನ ಕೈಗೆ ತೆಗೆದುಕೊಳ್ಳಬೇಕು. ಇದೊಂದು ಉದಾಹರಣೆಯಾಗಲಿ. ಜಿಎನ್​ಸಿಟಿಡಿ ಕೇವಲ ದೊಡ್ಡ ಆಸ್ಪತ್ರೆಗಳಿಗಷ್ಟೇ ಅಲ್ಲ ಸಣ್ಣ ಸಣ್ಣ ಆಸ್ಪತ್ರೆಗಳಿಗೂ ಸಹ ಲಿಕ್ವಿಡ್ ಆಕ್ಸಿಜನ್​ನ್ನು ಪೂರೈಸಬೇಕು.
  • ಇಂದು ಪತ್ತೆಯಾದ ಅಂಶದಿಂದ ನಾವು ಎಚ್ಚೆತ್ತಿದ್ದೇವೆ. ಎಸ್​ಜಿ ಮೆಹ್ತಾ ಅಲ್ಲಿ ಆಕ್ಸಿಜನ್ ಇದೆ ಎಂದಾಗ ನಾವು ನಂಬಿರಲಿಲ್ಲ. ನಿಮ್ಮ ಆದೇಶದಿಂದ ಹೊರಗಿರುವ ವ್ಯಕ್ತಿಯ ಬಳಿಯೇ 20 ಟನ್ ಆಕ್ಸಿಜನ್ ಇದೆ.
  • ಅಲ್ಲದೇ ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟವಾಗುತ್ತಿರುವ ಕುರಿತು ಇದು ಅತಿದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟಿದೆ.

The post ನೀವು ಕೇವಲ ಲಾಲಿಪಾಪ್​ಗಳನ್ನಷ್ಟೇ ಹಂಚುತ್ತಿದ್ದೀರಿ.. ಕೇಜ್ರಿವಾಲ್ ಸರ್ಕಾರಕ್ಕೆ ಹೈಕೋರ್ಟ್ ತರಾಟೆ appeared first on News First Kannada.

Source: newsfirstlive.com

Source link