ನೀವು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ತಿಂಡಿಗಳು ಇಲ್ಲಿವೆ – Here some delicious and homemade food prepare under the 10 mintues Kannada news


ಈ ಎಲ್ಲಾ ಸುಂದರ ಕ್ಷಣದಲ್ಲಿ ನೀವು ತಿನ್ನುವ ಆಹಾರವು ಪ್ರಮುಖವಾಗಿರುತ್ತದೆ. ನೀವು ತ್ವರಿತ ಮತ್ತು ಸುಲಭವಾದ 10 ನಿಮಿಷಗಳಲ್ಲಿ ಮಾಡಬಹುದಾದ ತಿಂಡಿಗಳ ಪಾಕ ವಿಧಾನ ಇಲ್ಲಿದೆ.

ನೀವು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ತಿಂಡಿಗಳು ಇಲ್ಲಿವೆ

Bangbang Batata

Image Credit source: Cooking LSL

ಯಾವುದೇ ಹಬ್ಬಗಳ ಸಮಯದಲ್ಲಿ ಅಥವಾ ಪ್ರತಿ ದಿನ ಅತ್ಯಂತ ತ್ವರಿತವಾಗಿ ತಯಾರಿಸಬಹುದಾದ ಗರಿ ಗರಿಯಾದ ತಿಂಡಿಯ ಪಾಕ ವಿಧಾನ ಇಲ್ಲಿದೆ. ಪ್ರತಿ ಮನೆಯಲ್ಲಿ ನಡೆಯುವ ಸಂಭ್ರಮ ಸಡಗರಗಳು ಬಹಳಷ್ಟು ಮಾತುಕತೆ, ಆಟಗಳು ಮತ್ತು ವಿನೋದದಿಂದ ತುಂಬಿರುತ್ತವೆ. ಜೊತೆಗೆ ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ, ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ, ಗಾಸಿಪ್‌ನಲ್ಲಿ ಭಾಗವಹಿಸುತ್ತೀರಿ ಮತ್ತು ಬಹಳಷ್ಟು ನಗು ಮತ್ತು ಸಂತೋಷದಿಂದ ಮನೆಗೆ ಹಿಂತಿರುಗುತ್ತೀರಿ. ಈ ಎಲ್ಲಾ ಸುಂದರ ಕ್ಷಣದಲ್ಲಿ ನೀವು ತಿನ್ನುವ ಆಹಾರವು ಪ್ರಮುಖವಾಗಿರುತ್ತದೆ.

ನೀವು ತ್ವರಿತ ಮತ್ತು ಸುಲಭವಾದ 10 ನಿಮಿಷಗಳಲ್ಲಿ ಮಾಡಬಹುದಾದ ತಿಂಡಿಗಳ ಪಾಕ ವಿಧಾನ ಇಲ್ಲಿದೆ.

ಬ್ಯಾಂಗ್‌ಬಂಗ್ ಬಟಾಟಾ(Bangbang Batata):

ಇದು ಉತ್ತರದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದು ಆಲೂಗಡ್ಡೆಯಿಂದ ಮಾಡುವ ಒಂದು ರೀತಿಯ ತಿಂಡಿಯಾಗಿದೆ. ಈ ಪಾಕ ವಿಧಾನಕ್ಕಾಗಿ ನೀವು ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ, ಅದರ ಸಿಪ್ಪೆಯನ್ನು ತೆಗೆಯಿರಿ. ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಉಪ್ಪು (ರುಚಿಗೆ), ಸಕ್ಕರೆ, ಮೆಣಸಿನ ಕಾಯಿ, ಚಕ್ಕೆಗಳು, ಅರಿಶಿನ ಪುಡಿ ಮತ್ತು ರವೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 6-8 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಬೇಯಿಸಿ. ಬ್ಯಾಂಗ್‌ಬಂಗ್ ಬಟಾಟಾ ಸವಿಯಲು ಸಿದ್ದವಾಗಿದೆ.

ಈರುಳ್ಳಿ ಬ್ರೆಡ್ ಪಕೋಡ(Onion Bread Pakoda):

ಅತ್ಯಂತ ತ್ವರಿತವಾಗಿ ಹಾಗೂ ಸುಲಭವಾಗಿ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ತಿಂಡಿಗಳಲ್ಲಿ ಈರುಳ್ಳಿ ಬ್ರೆಡ್ ಪಕೋಡವು ಒಂದಾಗಿದೆ. ಇದು ಕಡಿಮೆ ಸಮಯದಲ್ಲಿ ತಯಾರಿಸಿದರೂ ಉತ್ತಮ ರುಚಿಯನ್ನು ನೀಡುತ್ತದೆ. ಇದರ ರೆಸಿಪಿ ಇಲ್ಲಿದೆ. ಒಂದು ಕಪ್ ಬೇಸನ್ , ರುಚಿಗೆ ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ. ಸ್ವಲ್ಪ ಅರಿಶಿನ ಪುಡಿ, ಜೀರಿಗೆ ಪುಡಿ, ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ, ತುರಿದ ಶುಂಠಿ ಮತ್ತು ಪುಡಿ ಮಾಡಿದ ಅಜ್ವೈನ್ ಸೇರಿಸಿ. ಸ್ವಲ್ಪ ನೀರು ಹಾಕಿ ದಪ್ಪವಾದ ಹಿಟ್ಟನ್ನು ತಯಾರಿಸಿ. ಹೆಚ್ಚು ನೀರು ಸೇರಿಸಬೇಡಿ. ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅಗತ್ಯವಿದ್ದರೆ ಸ್ವಲ್ಪ ಹೆಚ್ಚು ನೀರು ಸೇರಿಸಿ. ನಂತರ ಹಿಟ್ಟನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಬ್ರೆಡ್ ತೆಗೆದುಕೊಂಡು ಅದರ ಬದಿಗಳನ್ನು ಕತ್ತರಿಸಿ. ಇದಾದ ಬಳಿಕ ಬೆಡ್ ಒಳಗಡೆ ಈಗಾಗಲೇ ಮಾಡಿಟ್ಟ ಈರುಳ್ಳಿ ಮಿಶ್ರಣವನ್ನು ಹಾಕಿ ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಪಕೋಡಗಳನ್ನು ಎರಡೂ ಕಡೆಯಿಂದ ಗೋಲ್ಡನ್ ಬ್ರೌನ್ ರವರೆಗೆ ಹುರಿಯಿರಿ.

ಇದನ್ನು ಓದಿ: ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತೆಂಗಿನಕಾಯಿ ಚಟ್ನಿ ರೆಸಿಪಿ ಇಲ್ಲಿದೆ

ಸ್ಟ್ರೀಟ್-ಸ್ಟೈಲ್ ಪನೀರ್ ರೋಲ್(Street-Style Paneer Roll):

ನಿಮ್ಮ ಮಕ್ಕಳು ಮನೆಯ ಆಹಾರಗಳಿಗಿಂತ ಹೆಚ್ಚಾಗಿ, ಬೀದಿ ಬದಿಯ ಆಹಾರಗಳನ್ನು ಇಷ್ಟಪಡುತ್ತಿದ್ದರೆ, ಮನೆಯಲ್ಲಿಯೇ ಸ್ಟ್ರೀಟ್-ಸ್ಟೈಲ್ ಪನೀರ್ ರೋಲ್ ಮಾಡಿ ಕೊಡಿ. ಮನೆಯಲ್ಲಿಯೇ ಮಾಡಿರುವುದ್ದರಿಂದ ಆರೋಗ್ಯಕ್ಕೂ ಒಳ್ಳೆಯದು. ಇದಕ್ಕಾಗಿ ನೀವು ಸಣ್ಣ ಪನ್ನೀರ್ ತುಂಡುಗಳನ್ನು ಮಸಾಲೆಗಳಲ್ಲಿ ಮಿಶ್ರಣ ಮಾಡಿ ಸ್ವಲ್ಪ ಸಮಯ ಹಾಗೆಯೇ ಇಡಿ ಎಣ್ಣೆ ಹಾಕಿ ಸ್ವಲ್ಪ ಸಮಯ ಬೇಯಸಿ. ನಂತರ ಇದನ್ನು ಪರೋಟ ಅಥವಾ ಚಪಾತಿಯ ಮೇಲೆ ಹಾಕಿ ರೋಲ್ ಮಾಡಿ. ಇದು ಪುದೀನಾ ಚಟ್ನಿಯೊಂದಿಗೆ ಒಂದು ಉತ್ತಮ ರುಚಿಯನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಾಜಾ ಸುದ್ದಿ

TV9 Kannada


Leave a Reply

Your email address will not be published.