ನೀವು ಕ್ರೆಡಿಟ್​ ಕಾರ್ಡ್​ ಬಳಸುತ್ತಿದ್ದೀರಾ..? ಈ ಸ್ಟೋರಿ ಮಿಸ್​ ಮಾಡ್ದೇ ಓದಿ


ಮಂಗಳೂರು: ನಿಷೇಧಿತ ಚೀನಾ ಌಪ್​ ಬಳಸಿ ಕ್ರೆಡಿಟ್​ ಕಾರ್ಡ್ ಕ್ಯಾನ್ಸಲ್​ ಹೆಸರಲ್ಲಿ ಒಟಿಪಿ ಪಡೆದು ಗ್ರಾಹಕರ ಹಣ ಲಪಟಾಯಿಸುತ್ತಿದ್ದ ಇಬ್ಬರು ಟಿಬೆಟಿಯನ್​ಗಳನ್ನ ಮಂಗಳೂರು CEN ಪೊಲೀಸರು ಬಂಧಿಸಿದ್ದಾರೆ.

ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಬಂಧಿತರು. ಮುಂಡಗೋಡು ಟಿಬೇಟಿಯನ್ ಕ್ಯಾಂಪ್ ನಿವಾಸಿಗಳಾದ ಆರೋಪಿಗಳು ಕ್ರೆಡಿಟ್ ಕಾರ್ಡ್ ಕ್ಯಾನ್ಸಲೇಶನ್ ಮಾಡಲು ಬ್ಯಾಂಕ್​​ಗೆ ಮನವಿ ಮಾಡಿದವರ ಖಾತೆಗೆ ಕನ್ನಹಾಕಿ ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.

 

Mobiwik wallet app, Wechat, Redpack ಆಪ್ ಬಳಸಿ ಚೀಟಿಂಗ್ ನಡೆಸುತ್ತಿದ್ದ ಖದೀಮರು, ಕ್ರೆಡಿಟ್ ಕಾರ್ಡ್ ಕ್ಯಾನ್ಸಲೇಷನ್​​ಗೆ ಒಟಿಪಿ ಬರುತ್ತೆ ಅಂತಾ ಒಟಿಪಿ ಪಡೆದು ಹಣ ಎಗರಿಸುತ್ತಿದ್ದರಂತೆ. ಅತ್ತಾವರದ ಅಲೆಕ್ಸಾಂಡರ್ ಎಂಬವರ ಅಕೌಂಟ್ ನಿಂದ 1.12 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡು ಟೋಪಿ ಹಾಕಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಇನ್ನು ಆರೋಪಿಗಳು ಉತ್ತರ ಪ್ರದೇಶ, ಮಹಾರಾಷ್ಟ್ರ ಮೂಲದ ಬಹಳಷ್ಟು ಅಕೌಂಟ್​​ನಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇಂಡಿಯನ್ ಕರೆನ್ಸಿಯನ್ನ ಟಿಬೇಟ್ ಕರೆನ್ಸಿಯನ್ನಾಗಿ ಕನ್ವರ್ಟ್ ಮಾಡಿ ಯಾಮಾರಿಸ್ತಿದ್ದ ಈ ತಂಡದಲ್ಲಿ ಬ್ಯಾಂಕ್​ನ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.

The post ನೀವು ಕ್ರೆಡಿಟ್​ ಕಾರ್ಡ್​ ಬಳಸುತ್ತಿದ್ದೀರಾ..? ಈ ಸ್ಟೋರಿ ಮಿಸ್​ ಮಾಡ್ದೇ ಓದಿ appeared first on News First Kannada.

News First Live Kannada


Leave a Reply

Your email address will not be published.