ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಉಪನೋಂದಣಿ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜಿ.ಪರಮೇಶ್ವರ್ ವೇದಿಕೆ ಹಂಚಿಕೊಂಡಿದ್ದರು.

ವೇದಿಕೆ ಹಂಚಿಕೊಂಡಿದ್ದ ಪರಮೇಶ್ವರ್ ಅವರನ್ನ ಹೊಗಳಿದ ಅಶೋಕ್.. ಇಂದು ಕಚೇರಿ ಉದ್ಘಾಟನೆ ಮಾಡಲು ಬಂದಿದ್ದೇನೆ. 64 ಲಕ್ಷ ವೆಚ್ಚದಲ್ಲಿ ಕಚೇರಿ ಕಟ್ಟಲಾಗಿದೆ. ಕೆಲಸ ಮಾಡಿಸಿದವರು ಪರಮೇಶ್ವರ್.. ನಾನು ಉದ್ಘಾಟನೆ ಮಾಡುತ್ತಿದ್ದೇನೆ ಅಷ್ಟೇ. ಪರಮೇಶ್ವರ್ ಒಂದು ರೀತಿ ಅಜಾತ ಶತ್ರು. ಚಿನ್ನ ಎಲ್ಲೇ ಇದ್ರೂ ಚಿನ್ನಾನೇ.. ರಸ್ತೆಯಲ್ಲಿದ್ರೂ ಚಿನ್ನಾನೇ. ನನಗೆ ಎಮರ್ಜೆನ್ಸಿ ಇತ್ತು ಪರಮೇಶ್ವರ್ಗೋಸ್ಕರ ಬಂದಿದ್ದೇನೆ ಅವರಿಗೆ ಮಾತು ಕೊಟ್ಟಿದ್ದೇನೆ. ಪರಮೇಶ್ವರ್ ಸರಳಸಜ್ಜನಿಕೆ ಇರೋ ವ್ಯಕ್ತಿ ಹಾಗಾಗಿ ಬಂದಿದ್ದೇನೆ ಎಂದು ಹಾಡಿ ಹೊಗಳಿದ್ದಾರೆ.

ಇತ್ತ ಭಾಷಣದ ಕೊನೆಯಲ್ಲಿ ಆರ್. ಅಶೋಕ್​ಗೆ ಒಳ್ಳೆಯದಾಗಲಿ ನಿಮಗೆ ಮತ್ತಷ್ಟು ಶಕ್ತಿ ಬರಲಿ. ಯಾಕೆಂದರೆ ಎಲ್ಲಾ ಪಾರ್ಟಿಯಲ್ಲೂ ಸಿಎಂ ಬಗ್ಗೆ ಚರ್ಚೆ ಆಗ್ತಿದೆ. ಈ ಬಗ್ಗೆ ಹೆಚ್ಚಾಗಿ ಮಾತನಾಡೋದು ಬೇಡ.. ಸರ್ಕಾರದ ಮಟ್ಟದಲ್ಲಿ ಪ್ರಭಾವಿ ಸಚಿವರಾಗಿದ್ದೀರ.. ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಮಗೂ ಸಿಎಂ ಆಗುವ ಶಕ್ತಿ ಇದೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕಾಗಿ 6 ನಾಯಕರು ಟವೆಲ್ ಹಾಕಿದ್ದಾರೆ
ಇದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮುಂದಿನ ಸಿಎಂ ಜಟಾಪಟಿಯ ಕುರಿತು ವ್ಯಂಗ್ಯವಾಡಿದರು. ಕಾಂಗ್ರೆಸ್​ನವರು ಮದುವೆಯನ್ನೇ ಆಗಿಲ್ಲ.. ಮಕ್ಕಳೂ ಆಗಿಲ್ಲ. ಆಗಲೇ ಬಟ್ಟೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರು ತಿರುಕನ ಕನಸು ಕಾಣುತ್ತಾರೆ. ದೇಶದಲ್ಲಿ ಅವರ ನಾಯಕರೇ ಇಲ್ಲ. ರಾಹುಲ್ ಗಾಂಧಿ ಹೆಸರಲ್ಲಿ ನಾಲ್ಕು ವೋಟು ಬೀಳಲ್ಲ ಎಂದಿದ್ದಾರೆ.

ಅಲ್ಲದೇ, ಕರ್ನಾಟಕದಲ್ಲಿ 20ವರ್ಷ ಹೋದ್ರೂ ಕಾಂಗ್ರೆಸ್ ತಲೆ ಎತ್ತಲ್ಲ. ಈಗ ತೃತೀಯ ರಂಗ ಅಂತಾ ಒಂದು ಶುರುವಾಗಿದೆ, ಅದ್ರಲ್ಲಿ ಕಾಂಗ್ರೆಸ್ ನೆಗಲೆಟ್ ಆಗಿದೆ, ಕರ್ನಾಟಕದಲ್ಲೂ ಕೂಡ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಿರೋರೆ ಆರು ಜನ ಇದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಖರ್ಗೆ, ಎಸ್ ಆರ್‌ ಪಾಟೀಲ್ ಆಗಲೇ ಆರು ಆಗಿದೆ. ಹದಿನೈದು ದಿನ ಕಳೆದ್ರೆ 60 ಜನ ಹುಟ್ಟಿಕೊಳ್ತಾರೆ. ಬಸ್ ಸೀಟ್ ಇರೋದೇ ಒಂದು ಮುಂದೆ ಆ ಸೀಟನ್ನೇ ಎತ್ಕೊಂಡು ಹೋಗಿಬಿಡ್ತಾರೆ.

 

ಕಾಂಗ್ರೆಸ್ ನಾಯಕನಿಲ್ಲದ ದೋಣಿ. ರಾಜ್ಯ ಕೇಂದ್ರದಲ್ಲಿ ಇಪ್ಪತ್ತು ವರ್ಷ ಬಿಜೆಪಿ ಸರ್ಕಾರನೇ ಇರೋದು ಬದಲಾಯಿಸೋದಕ್ಕೆ ಸಾಧ್ಯವೇ ಇಲ್ಲ ಎಂದು ಇದೇ ವೇಳೆ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

The post ‘ನೀವು ಚಿನ್ನವಿದ್ದಂತೆ’ ಎಂದ ಆರ್.ಅಶೋಕ್​ಗೆ ‘ನೀವೂ ಸಿಎಂ ಆಗಬಹುದು’ ಅಂತೇಳಿದ್ರಾ ಪರಮೇಶ್ವರ್..? appeared first on News First Kannada.

Source: newsfirstlive.com

Source link