‘ನೀವು ನನ್ನ ಜಗತ್ತನ್ನು ಬೆಳಗಿದಿರಿ’; ಮಹೇಶ್​ ಬಾಬು ಬರ್ತ್​​ಡೇಗೆ ನಮ್ರತಾ ಭಾವನಾತ್ಮಕ ವಿಶ್ | Namrata Shirodkar emotional birthday wish to Husband Mahesh Babu


ಮಹೇಶ್​ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ’; ಮಹೇಶ್​ ಬಾಬು ಬರ್ತ್​​ಡೇಗೆ ನಮ್ರತಾ ಭಾವನಾತ್ಮಕ ವಿಶ್

ನಮ್ರತಾ-ಮಹೇಶ್

ಮಹೇಶ್ ಬಾಬು (Mahesh Babu) ಅವರು ಇಂದು (ಆಗಸ್ಟ್ 9) 47ನೇ ವರ್ಷದ ಬರ್ತ್​​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ. ಮಹೇಶ್ ಬಾಬು ಅವರು ಈ ವಯಸ್ಸಿನಲ್ಲೂ ಯಂಗ್​ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ವರ್ಷ ಕಳೆದಂತೆ ಅವರು ಇನ್ನೂ ಯಂಗ್ ಆಗುತ್ತಿದ್ದಾರೆ. ಮಹೇಶ್ ಬಾಬು ಸ್ಟಾರ್ ಹೀರೋ ಆದರೂ ಅವರಿಗೆ ಕುಟುಂಬವೇ ಜಗತ್ತು. ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಬರ್ತ್​ಡೇ ಅಂಗವಾಗಿ ಅವರ ಪತ್ನಿ ನಮ್ರತಾ ಅವರು ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.

ನಮ್ರತಾ ಹಾಗೂ ಮಹೇಶ್ ಬಾಬು ಅವರದ್ದು ಪ್ರೇಮ ವಿವಾಹ. ಮಹೇಶ್ ಬಾಬು ಅವರಿಗೆ ನಮ್ರತಾ ಬಗ್ಗೆ ಸಾಕಷ್ಟು ಕಾಳಜಿ ಇದೆ. ಮಹೇಶ್​ ಬಾಬು ಅವರಿಗೂ ಅಷ್ಟೇ ನಮ್ರತಾ ಹಾಗೂ ಕುಟುಂಬ ಕಂಡರೆ ಅಪಾರ ಪ್ರೀತಿ. ಮಹೇಶ್​ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ. ಹ್ಯಾಪಿ ಬರ್ತ್​ಡೇ ಎಂಬಿ (ಮಹೇಶ್ ಬಾಬು). ಒಟ್ಟಾಗಿ ಕಳೆಯಲು ಇನ್ನಷ್ಟು ವರ್ಷಗಳು ಇವೆ. ಲವ್​ ಯೂ. ಈಗಲೂ, ಎಂದೆಂದಿಗೂ’ ಎಂದು ನಮ್ರತಾ ಬರೆದುಕೊಂಡಿದ್ದಾರೆ. ಅವರ ಪೋಸ್ಟ್​ಗೆ ನಾನಾ ಸೆಲೆಬ್ರಿಟಿಗಳು ಕಮೆಂಟ್ ಮಾಡಿ, ಮಹೇಶ್ ಬಾಬುಗೆ ಬರ್ತ್​​ಡೇ ವಿಶ್ ತಿಳಿಸಿದ್ದಾರೆ.

ಮಹೇಶ್ ಬಾಬು ಹಾಗೂ ನಮ್ರತಾ 2005, ಫೆಬ್ರವರಿ 10ರಂದು ಮದುವೆ ಆದರು. ಮದುವೆ ಬಳಿಕ ನಮ್ರತಾ ನಟನೆಯಿಂದ ಅಂತರ ಕಾಯ್ದುಕೊಂಡರು. ಈ ದಂಪತಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳು ಇದ್ದಾರೆ.

TV9 Kannada


Leave a Reply

Your email address will not be published. Required fields are marked *