ನೀವು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿತೀರಾ? ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ | Should you start with drinking tea know these tips


ನೀವು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿತೀರಾ? ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಚಹಾ

ಕೆಲವರಿಗೆ ಚಹಾ ಇಲ್ಲದೇ ಬೆಳಗ್ಗಿನ ದಿನಚರಿ ಅಪೂರ್ಣವಾಗಿದೆ. ಬಿಸಿಬಿಸಿ ಚಹಾವನ್ನು ಸುರ್.. ಎಂದು ಕುಡಿದರೆ ಸಣ್ಣಪುಟ್ಟ ತಲೆನೋವಿನ ಸಮಸ್ಯೆಗಳೆಲ್ಲವೂ ಮಾಯವಾಗುತ್ತದೆ. ಅಷ್ಟರ ಮಟ್ಟಿಗೆ ಕೆಲವರು ಚಹಾ ಕುಡಿಯುವುದಕ್ಕೆ ಹೊಂದಿಕೊಂಡಿರುತ್ತಾರೆ. ಏಕೆಂದರೆ ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಜೊತೆಗೆ ದಿನವಿಡೀ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಹಾಗಿರುವಾಗ ಚಹಾ ಸೇವಿಸುವ ಸಮಯವನ್ನು ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಜೊತೆಗೆ ಚಹಾವನ್ನು ಅತಿಯಾಗಿ ಸೇವಿಸುವುದರಿಂದಲೂ ಕೆಲವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನೀವು ಚಹಾ ಪ್ರಿಯರಾಗಿದ್ದರೆ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ನೀವು ಯಾವಾಗ ಚಹಾ ಸೇವಿಸಬೇಕು ಎಂಬುದು ಇಲ್ಲಿದೆ;
*ನೀವು ಎದ್ದ ತಕ್ಷಣ ಮತ್ತು ಮಲಗಲು ಹೋಗುವ ಮುನ್ನ ಚಹಾ ಸೇವನೆಯನ್ನು ತಪ್ಪಿಸಿ
*ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆಯು ಆರೋಗ್ಯಕರವಲ್ಲ. ಇದು ಪಿತ್ತ ರಸದ ಉತ್ಪತ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ
*ಚಹಾವು ಅಸಿಡಿಟಿ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು
*ನೀವು ಖಾಲಿ ಹೊಟ್ಟೆಯಲ್ಲಿ ಸಹಾ ಸೇವಿಸಿದೆ ಹೊಟ್ಟೆಯಲ್ಲಿ ಹುಣ್ಣು ಬೆಳೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ
*ಆಮ್ಲೀಯತೆಯನ್ನು ತಡೆಗಟ್ಟಲು ಲಘು, ತಿಂಡಿಯೊಂದಿಗೆ ಚಹಾವನ್ನು ಕುಡಿಯಿರಿ
*ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಸ್ವತಂತ್ರ ರಾಡಿಕಲ್​ಗಳು ಮತ್ತು ಕ್ಯಾನ್ಸರ್​ಗೆ ಕಾರಣವಾಗುವ ಕೋಶಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿರುತ್ತವೆ
*ಮಧ್ಯಾಹ್ನದ ಊಟದ ತಕ್ಷಣ ಚಹಾ ಕುಡಿಯುವುದು ಅಜೀರ್ಣಕ್ಕೆ ಕಾರಣವಾಗಬಹುದು
*ನೀವು ದಿನಕ್ಕೆ ಎರಡು ಕಪ್​ಗಿಂತ ಹೆಚ್ಚಿನ ಚಹಾ ಕುಡಿಯಬಾರದು

ಚಹಾ ಸೇವಿಸುವ ಮೊದಲು ನೀವು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಇದರಿಂದ ಉಂಟಾಗುವ ಪ್ರಯೋಜನಗಳು;
*ಅಜೀರ್ಣ ಸಮಸ್ಯೆಯಿಂದ ಪರಿಹಾರ
*ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ
*ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

TV9 Kannada


Leave a Reply

Your email address will not be published. Required fields are marked *