ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ಯನ್ನ ಸುಟ್ಟಿದ್ದೀರಿ: ಕಾಂಗ್ರೆಸ್​​ನವರ ವಿರುದ್ಧ ಪ್ರಮೋದ ಮುತಾಲಿಕ್ ಕಿಡಿ | Shame on Savarkar’s photo in Dharwad: Pramoda Muthalik sparks against Congress


ಸಿದ್ದರಾಮಯ್ಯನವರು ಎಲ್ಲ ಕಡೆ ಅಡ್ಡ ನಮಸ್ಕಾರ ಮಾಡುತ್ತಾರೆ. ಇದೆಲ್ಲಾ ಮತಗಳ ದಾಹಕ್ಕಾಗಿ ನಡೆಯುತ್ತಿರುವ ನಾಟಕ. ನಿಮ್ಮ ನಾಟಕ ಬೇಡ, 60 ವರ್ಷದಲ್ಲಿ ನಿಮ್ಮ ಬಣ್ಣ ಬಯಲಾಗಿದೆ.

ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ಯನ್ನ ಸುಟ್ಟಿದ್ದೀರಿ: ಕಾಂಗ್ರೆಸ್​​ನವರ ವಿರುದ್ಧ ಪ್ರಮೋದ ಮುತಾಲಿಕ್ ಕಿಡಿ

ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್

ಧಾರವಾಡ: ನಿನ್ನೆ ಧಾರವಾಡ ನಗರದಲ್ಲಿ ಕಾಂಗ್ರೆಸ್​ನವರು ಸಾವರ್ಕರ್ (veer savarkar) ಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ. ಇದೊಂದು ದೇಶದ್ರೋಹಿ‌ ಕೃತ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದರು. ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ ಸುಟ್ಟಿದ್ದೀರಿ. ಅವರು ತಮ್ಮ ಅರ್ಧ ಜೀವನ ಜೈಲಿನಲ್ಲಿ ಕಳೆದಂಥ ವ್ಯಕ್ತಿ. ನೀವು ಕ್ರಾಂತಿಕಾರಿಯ ಭಾವಚಿತ್ರ ಸುಟ್ಟಿದ್ದೀರಿ. ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮೊಟ್ಟೆ ಒಗೆದಿದ್ದು ತಪ್ಪು. ಇದನ್ನು ಎಲ್ಲರೂ ಹೇಳುತ್ತಿದ್ದಾರೆ. ಇಂಥ ವ್ಯಕ್ತಿಯನ್ನ ಅಪಮಾನ ಮಾಡಿದ್ದು‌ ಸರಿಯಲ್ಲ. ಎಲ್ಲರೂ ಕ್ಷಮೆ ಕೇಳಬೇಕು. ನಿಮ್ಮ ಇಂದಿರಾಗಾಂಧಿ ಸಾರ್ವಕರ್ ಅತ್ಯಂತ ದೇಶದ ಭಕ್ತ ಎಂದು ಲೆಟರ್ ಕೊಟ್ಟಿದ್ದಾರೆ. ಅವರ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

TV9 Kannada


Leave a Reply

Your email address will not be published.