ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯಿಂದ ಜನ ಬೇಸತ್ತು ಹೋಗಿದ್ದಾರೆ. ದಿನೇ ದಿನೇ ಕೊರೊನಾ ಹೆಚ್ಚಳ ಆಗ್ತಾನೇ ಇದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅನ್ನೋದೇ ಎಲ್ಲರ ಮೂಲ ಮಂತ್ರವಾಗಿದೆ. ಇದೀಗ ನಟ ನೀನಾಸಂ ಸತೀಶ್​ ಕೂಡ ಈ ಬಗ್ಗೆ ಎಚ್ಚರಿಗೆ ನೀಡುವ ಸಲುವಾಗಿ ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಸದ್ಯ ಇರುವ ಕೊರೊನಾ ಪರಿಸ್ಥಿತಿಗೆ ನಾವೇ ಕಾರಣ ಅಂದಿರುವ ಸತೀಶ್​, ನೀವೂ ಬದುಕಿ ಇನ್ನೊಬ್ಬರನ್ನೂ ಬದುಕೋದಕ್ಕೆ ಬಿಡಿ ಅಂತ ಕಳಕಳಿಯಿಂದ ಕೇಳಿಕೊಂಡಿದ್ದಾರೆ.

ನಾನು ವಿಡಿಯೋ ಮಾಡಿರುವ ಉದ್ದೇಶ ನಿಮ್ಮೆಲ್ಲರಿಗೂ ಗೊತ್ತಿರುತ್ತೆ. ಎಲ್ಲರೂ ಎಲ್ಲರಿಗೂ ಎಚ್ಚರಿಕೆ ನೀಡ್ತಿದ್ದಾರೆ. ನಮಗೆ ಇವತ್ತು ಈ ಪರಿಸ್ಥಿತಿ ಬಂದಿರೋದಕ್ಕೆ ನಾವೇ ಕಾರಣ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಬಹಳ ಜನ ಹೇಳ್ತಾ ಬಂದ್ರು. ಆದ್ರೆ ಯಾರೂ ಕೂಡ ಅದನ್ನ ಪಾಲಿಸಲೇ ಇಲ್ಲ, ಯಾರೂ ಕೂಡ ಮಾಸ್ಕ್​ ಹಾಕಿಲ್ಲ. ಈಗಿರುವ ಕೊರೊನಾ ರೂಪಾಂತರಗೊಂಡಿರುವ ವೈರಸ್​. ಸೆಕೆಂಡ್​ ವೇವ್​ನಲ್ಲಿ ಬಹಳ ಜನರಲ್ಲಿ ರೋಗ ಲಕ್ಷಣಗಳೇ ಕಾಣಿಸ್ತಿಲ್ಲ.

ಹೊರಗಡೆ ಓಡಾಡುವವರು ಮಾಸ್ಕ್​ ಹಾಕಿಕೊಳ್ಳಿ. ಒಬ್ಬರಲ್ಲ-ಇಬ್ಬರಲ್ಲ ಸಾವಿರಾರು ಜನರ ಗೋಳನ್ನ ನಾವು ನೋಡ್ತಿದ್ದೇವೆ. ಒಂದೊಂದು ಸಲ ಈ ಪರಿಸ್ಥಿತಿಗೆ ನಾವೇ ಹೊಣೆನಾ ಅಂತ ಅನಿಸಿಬಿಡುತ್ತೆ. ಇದಕ್ಕೆ ಮತ್ಯಾರನ್ನೂ ದೂಷಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್​ ಧರಿಸಿಕೊಂಡು, ಸಾಮಾಜಿಕ ಅಂತ ಕಾಯ್ದುಕೊಂಡು ಮತ್ತೊಬ್ಬರಿಗೆ ಹರಡದಂತೆ ನೋಡಿಕೊಳ್ಳೋದರಲ್ಲಿ ದೊಡ್ಡ ಸಹಾಯ ಆಗುತ್ತೆ. ದಯವಿಟ್ಟು ಎಲ್ಲರೂ ಮಾಸ್ಕ್​ ಬಳಸಿ. ನೀವೂ ಬದುಕಿ, ಇನ್ನೊಬ್ಬರನ್ನ ಬದುಕೋದಕ್ಕೆ ಬಿಡಿ.

ನಿನಾಸಂ ಸತೀಶ್​, ನಟ

ಇದು ಸತೀಶ್ ನಿನಾಸಂ ಅವರ ಕಳಕಳಿ ಮತ್ತು ಎಲ್ಲರ ಜವಾಬ್ದಾರಿ ಕೂಡ ಹೌದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ.. ಕೈ ತೊಳೆಯುತ್ತಿರಿ ಮತ್ತು ಮೇ 1 ರಿಂದ 18 ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮೂ್ಕಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ನೀವೂ ಬದುಕಿ, ಇನ್ನೊಬ್ಬರನ್ನ ಬದುಕೋದಕ್ಕೆ ಬಿಡಿ – ನೀನಾಸಂ ಸತೀಶ್​ ಹಿಂಗ್ಯಾಕಂದ್ರು? appeared first on News First Kannada.

Source: newsfirstlive.com

Source link