ಬಾಯಲ್ಲಿ ನೀರೂರಿಸುವ ಖಾದ್ಯಗಳೆಂದರೆ ಯಾರಿಗೆ ತಾನೇ ಇಷ್ಟವಾಗದು ಹೇಳಿ? ತಯಾರಿಸುವ ಆಹಾರ ಮತ್ತು ಸೇವಿಸುವ ಆಹಾರ ಶುಚಿಯಾಗಿ ರುಚಿಯಾಗಿ ಇದ್ದಷ್ಟೂ ನಮಗೆ ಆರೋಗ್ಯವನ್ನು ನೀಡುತ್ತದೆ. ತರಕಾರಿಗಳಲ್ಲಿ ಒಂದಾಗಿರುವ ಬೀಟ್‍ರೂಟ್‍ಅನ್ನು ದೇಹದಲ್ಲಿ ರಕ್ತ ಕಡಿಮೆ ಇದೆ ಎಂದಾಗ  ಸೇವನೆ ಮಾಡುವುದರಿಂದ ರಕ್ತದ ಪೂರೈಕೆ ದೇಹಕ್ಕೆ ದೊರೆಯುತ್ತದೆ.

ಬೇಕಾಗುವ ಸಾಮಗ್ರಿಗಳು:

*ಬೀಟ್ ರೂಟ್ – 1 ಕಪ್
*ಅಕ್ಕಿ – 2 ಕಪ್
*ಹಸಿಮೆಣಸು – 4ರಿಂದ 5
*ಗರಮ್ ಮಸಾಲಾ – 1 ಟೀ ಸ್ಪೂನ್
*ಕೊತ್ತಂಬರಿ ಪುಡಿ- 1 ಟೀ ಸ್ಪೂನ್
*ಕರಿ ಬೇವು – 2
*ಈರುಳ್ಳಿ – 1 ಕಪ್
*ಜೀರಿಗೆ – ಅರ್ಧ ಟೀ ಸ್ಪೂನ್
*ಏಲಕ್ಕಿ – 3 ರಿಂದ 4
*ಕರಿಮೆಣಸು – ಅರ್ಧ ಸ್ಪೂನ್
*ಗೇರುಬೀಜ – 8 ರಿಂದ 10
*ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ

ಮಾಡುವ ವಿಧಾನ:
* ಕುಕ್ಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ, ಕತ್ತರಿಸಿದ ಈರುಳ್ಳಿ, ಕರಿ ಬೇವು , ಜೀರಿಗೆ ಮತ್ತು ಹಸಿಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.

*ಗರಮ್ ಮಸಾಲಾ, ಕೊತ್ತಂಬರಿ ಪುಡಿ, ಏಲಕ್ಕಿ, ಕರಿಮೆಣಸು ಮತ್ತು ಗೇರುಬೀಜವನ್ನು ಹಾಕಿ, ಚೆನ್ನಾಗಿ ಕಲಸಿಕೊಳ್ಳಿ
*ಈಗ ಕತ್ತರಿಸಿದ ಬೀಟ್‍ರೂಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.

*ಸರಿಯಾದ ನೀರಿನ ಅಳತೆಯೊಂದಿಗೆ ಅಕ್ಕಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಎರಡು ವಿಶಲ್ ಆದರೆ ಬೀಟ್‍ರೂಟ್ ಪುಲಾವ್  ಸವಿಯಸಲು ಸಿದ್ಧವಾಗುತ್ತದೆ.

The post ನೀವೂ ಮಾಡಿ ಬೀಟ್‍ರೂಟ್ ಪುಲಾವ್ appeared first on Public TV.

Source: publictv.in

Source link