ನೀವೆಲ್ಲಾ ಕಾತರದಿಂದ ಕಾಯ್ತಿರೋ 5G ಇಂಟರ್​ನೆಟ್ ಅನಾಹುತದ ಸ್ಫೋಟಕ ಮಾಹಿತಿ..!


ಅತೀಯಾದ ವೈಜ್ಞಾನಿಕತೆ ವಿನಾಶಗಳಿಗೆ ದಾರಿ ಮಾಡಿಕೊಡುತ್ತೆ ಅನ್ನೋ ಮಾತುಗಳನ್ನ ನಾವು ಹಿಂದಿನ ಕಾಲದ ಪರಿಣಿತ ವಿಜ್ಞಾನಿಗಳು, ತತ್ವಜ್ಞಾನಿಗಳ ಬಾಯಲ್ಲಿ ಕೇಳಿದ್ದೀವಿ. ಆದ್ರೆ, ಅದನ್ನ ಮನುಷ್ಯ ಮಾತ್ರ ಗಂಭೀರವಾಗಿ ಪರಿಗಣಿಸದೇ ತನ್ನ ಡೇಂಜರಸ್​​ ಸಂಶೋಧನೆಗಳನ್ನ ಮುಂದುವರಿಸಿ ಅದರಿಂದಾಗುವ ಅಪಾಯಗಳಿಗೆ ನೇರ ಕಾರಣವಾಗ್ತಿದ್ದಾನೆ. ಅಂದಹಾಗೇ, ನಾವ್ಯಾಕ್​ ಈಗ ಈ ಮಾತನ್ನ ಹೇಳ್ತಿದ್ದೀವಿ ಅಂತಾ ನೀವೆಲ್ಲಾ ಕೇಳಬಹುದು. ಇದಕ್ಕೆಲ್ಲಾ ಕಾರಣ ನಾವೆಲ್ಲಾ ಕಾತರದಿಂದ ಕಾದು ಕುಳಿತಿರೋ 5ಜಿಯಿಂದ ಆಗುವ ಅನಾಹುತದ ಬಗ್ಗೆ ಸಿಕ್ಕಿರೋ ಮುನ್ಸೂಚನೆ.

ಈಗ ನಾವ್ ಬಳಸ್ತಿರೋ 4ಜಿ ಇಂಟರ್​ನೆಟ್​​ ಅಂತ್ಯಕಾಲ ಸನ್ನಿಹಿತವಾಗ್ತಿದೆ. ಇನ್ಮುಂದೆ ನೆಟ್​ಅಲ್ಲಿ ನೋಡೋ ವಿಡಿಯೋಗಳನ್ನ ಥಟ್ ಅಂತಾ ಡೌನ್​ಲೋಡ್ ಮಾಡೋದೇ, ಏನೇ ಇಂಟರ್​ನೆಟ್​ ವ್ಯವಹಾರವಿದ್ರೂ ಫಟಾಫಟ್ ಅಂತಾ ಮುಗಿಸಿಹಾಕೋದೇ. ಇನ್ನೇನಿದ್ರೂ 5ಜಿ ಜಮಾನ ಸ್ವಾಮಿ ಅಂತಾ ಅತೀ ವೇಗದ ಇಂಟರ್​ನೆಟ್​ ಸೇವೆಯನ್ನ ಬರಮಾಡಿಕೊಳ್ಳೋಕೆ ನೀವೆಲ್ಲಾ ಸಿದ್ಧರಿದ್ರೆ ಅದ್ರಲ್ಲಿ ತಪ್ಪಿಲ್ಲ. ಯಾಕಂದ್ರೆ, ಒಂದ್ ಲೆಕ್ಕದಲ್ಲಿ 5ಜಿ ಇಂಟರ್​​ನೆಟ್ ಸೇವೆಯನ್ನ ಟೆಲಿಕಾಂ ಕ್ಷೇತ್ರದ ಅತೀ ದೊಡ್ಡ ಸಾಧನೆ ಅನ್ನೋದ್ರಲ್ಲಿ ಸಂದೇಹವಿಲ್ಲ.

ಅಮೆರಿಕಾ, ಚೀನಾ, ಸೌತ್​ ಕೊರಿಯಾದಂತಹ ದೇಶಗಳಲ್ಲಿ ಈಗಾಗಲೇ 5ಜಿ ನೆಟ್​​ವರ್ಕ್​ನ ಪ್ರಾಯೋಗಿಕವಾಗಿ ಬಳಕೆ ಮಾಡಲಾಗ್ತಿದೆ. ಹಿಂದೆಂದಿಗಿಂತಲೂ ಪ್ರಬಲ ವೈರ್​ಲೆಸ್​ ಕನೆಕ್ಷನ್​ ಇದಾಗಿದ್ದು, ಈಗಿರುವ 4ಜಿಗಿಂತಲೂ ಸಾವಿರ ಪಟ್ಟು ಹೆಚ್ಚು ಸ್ಪೀಡ್​ನಲ್ಲಿ 5ಜಿ ಕೆಲಸ ಮಾಡುತ್ತೆ. ಇಡೀ ಜಗತ್ತೇ 5ಜಿಯ ಬೆರಳತುದಿಗೆ ಬಂದು ಅಂಟಿಕೊಳ್ಳುತ್ತೆ ಅನ್ನೋ ಕಲ್ಪನೆಗಳೂ ಸತ್ಯವೇ. ಆದ್ರೆ, ಒಂದು ವಿಚಾರ ಗೊತ್ತಿರಲಿ. ಈ 5ಜಿ ಸರ್ವಿಸ್​ನಿಂದ ಎಷ್ಟು ಅನುಕೂಲಗಳಿದೆಯೋ ಅದರ ಎರಡರಷ್ಟು ಅಪಾಯಗಳ ಕಾರ್ಮೋಡ ಈ ಸೇವೆಯ ಸುತ್ತ ಕವಿದಿದೆ.

ನಿಮಗೆಲ್ಲಾ ಗೊತ್ತಿರಬಹುದು, ಯಾವಾಗ ಮೊಬೈಲ್​ ಇಂಟರ್​ನೆಟ್​ ಆರಂಭವಾಯ್ತೋ ಅಲ್ಲಿಂದ ಇಲ್ಲಿಯವರೆಗೂ ಹಲವು ಪ್ರಬೇಧದ ಪಕ್ಷಿಗಳ ಸಾಮೂಹಿಕ ಮಾರಣಹೋಮವಾಗಿದೆ. ಇಂಟರ್​ನೆಟ್​ ಟವರ್​ಗಳ ಕೆಳಗೆ ಮನೆ ಮಾಡಿಕೊಂಡಿರುವವರು ಮಾರಾಣಾಂತಿಕ ರೋಗಗಳಿಗೆ ತುತ್ತಾದರು ಎಂಬ ಮಾಹಿತಿಗಳಿವೆ. ಯಾಕಂದ್ರೆ, ಈ ಇಂಟರ್​ನೆಟ್​ ಟವರ್​ಗಳು ಸೃಷ್ಟಿಸೋ ತರಂಗಗಳು ಜೀವಸಂಕುಲದ ಆರೋಗ್ಯ ದೃಷ್ಟಿಯಲ್ಲಿ ಅಪಾಯಕಾರಿ ಅನ್ನೋದ್ರಲ್ಲಿ ಸಂದೇಹವಿಲ್ಲ. ಆದ್ರೆ, ಜಗತ್ತಿನ ಮುಂದೆ ಬಂದು ಇದನ್ನೆಲ್ಲಾ ಯಾರೂ ಹೇಳುವ ಧೈರ್ಯ ಮಾಡಿಲ್ಲ.. ಈಗ 5ಜಿ ವಿಚಾರದಲ್ಲಿ ಆಗ್ತಿರೋ ತಪ್ಪು ಅದೇ ಆಗಿದ್ದು, ಈ ಹೈ ಸ್ಪೀಡ್​ ಇಂಟರ್​​ನೆಟ್​ ಟೆಕ್ನಾಲಜಿಯಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ.

ಹೌದು.. ಇದನ್ನ ನಾವ್​ ಹೇಳ್ತಿಲ್ಲ. ವಿಶ್ವದ ದೊಡ್ಡಣ್ಣ ಅಂತಲೇ ಕರೆಸಿಕೊಳ್ಳುವ ಅಮೆರಿಕಾದಲ್ಲಿ ಮೊಳಗಿರುವ ವಾರ್ನಿಂಗ್ ಇದು. ಅಂದಹಾಗೇ, ಈ ಸಮಸ್ಯೆಯಾಗ್ತಿರೋದು ಸದ್ಯ ಅಮೆರಿಕಾದಲ್ಲಿಯೇ ಆಗಿರಬಹುದು. ಆದ್ರೆ, ಮುಂದೊಂದು ದಿನ ದುರಂತಗಳು ನಡೆಯೋದನ್ನ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಸಂದೇಶ ರವಾನಿಸದ್ದಾರೆ ಅಮೆರಿಕಾದ ಟಾಪ್​ ಮೋಸ್ಟ್​ ಏವಿಯೇಷನ್ ತಜ್ಞರು..

ಲೋಹದ ಹಕ್ಕಿಗಳಿಗೆ ಕಂಟಕವಾಗಲಿದೆಯಂತೆ 5ಜಿ ​
ವಿಮಾನ ದುರಂತಗಳಾಗುವ ಎಚ್ಚರಿಕೆ ಕೊಟ್ಟ ತಜ್ಞರು!
ಅಮೆರಿಕಾದಲ್ಲಿ 5ಜಿ ಅನಾಹುತದ ಸ್ಫೋಟಕ ಮಾಹಿತಿ!

ಅಮೆರಿಕಾದಲ್ಲಿ ವೆರೈಜಾನ್ ಹಾಗೂ ಎಟಿ & ಟಿ ಟೆಲಿಕಾಂ ಸಂಸ್ಥೆಗಳು ಅಲ್ಲಿ 5ಜಿ ಟವರ್​ಗಳ ಅಳವಡಿಕೆ ಮುಂದಾಗಿದ್ದರು. ಆದ್ರೆ, ಇದರಿಂದ ಅಲ್ಲಿನ ವಿಮಾನಗಳು ಹಾರಾಟ ನಡೆಸುವ ಸಂದರ್ಭದಲ್ಲಿ ಸಮಸ್ಯೆಯಾಗಿರುವ ಅನುಭವ ಉಂಟಾಗಿದೆ. ಅದಷ್ಟೇ ಅಲ್ಲದೇ ಈ ಸಮಸ್ಯೆ ಮುಂದೆ ವಿಮಾನ ಪತನಗಳಂತಹ ಘನಘೋರ ದುರಂತಗಳಿಗೂ ಕಾರಣವಾಗಬಹುದು ಅನ್ನೋ ಎಚ್ಚರಿಕೆ ಸಿಕ್ಕಿದೆ. ಹಾಗಾಗಿ, ಬೋಯಿಂಗ್ ಹಾಗೂ ಏರ್​​ಬಸ್​ ವಿಮಾನಯಾನ ಸಂಸ್ಥೆಗಳು, ಯುಎಸ್ ಟ್ರಾನ್ಸ್​ಪೋರ್ಟ್​ ಸೆಕ್ರಟರಿಗೆ 5ಜಿ ರೋಲ್​ಔಟ್​ ಕೊಂಚ ವಿಳಂಬ ಮಾಡುವಂತೆ ಕೋರಿಕೊಂಡಿವೆ. ಅಷ್ಟಕ್ಕೂ, 5ಜಿ ಟವರ್​ಗಳಿಂದ ವಿಮಾನಗಳಿಗಳಿಗೆ ಆಗುವ ತೊಂದರೆ ಅನ್ನೋದನ್ನ ಹೇಳ್ತೀವಿ ಓದಿ.

ವಿಮಾನ ಪ್ರಯಾಣ ಮಾಡುವಾಗ ಬ್ಯಾಡ್​ ವೆದರ್​ ಅಥವಾ ಲೋ ವಿಸಿಬಿಲಿಟಿ ಅಥವಾ ಯಾವುದೇ ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳಾದಾಗ, ಸೇಫಾಗಿ ಲ್ಯಾಂಡ್​ ಆಗಲು ಪೈಲೆಟ್​ಗಳು ಒಂದು ಟೆಕ್ನಾಲಜಿಯ ಮೊರೆ ಹೋಗ್ತಾರೆ. ಅದೇ ಅಲ್ಟಿಮೀಟರ್​ ರೇಡಿಯೋ ಸಿಗ್ನಲ್​ಗಳು. ಈ ಅಲ್ಟಿಮೀಟರ್​ ರೇಡಿಯೋ ಸಿಗ್ನಲ್​ನಿಂದಾಗಿ ವಿಮಾನವು ಹಾರಾಡುವ ಸ್ಥಳದಲ್ಲಿ ನೆಲದಿಂದ ನೇರವಾಗಿ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಅಳೆದು ಪೈಲೆಟ್​ಗಳಿಗೆ ತೋರಿಸುತ್ತದೆ. ಇದರಿಂದ ವಿಮಾನವನ್ನು ಸೇಫ್​ ಆಗಿ ಲ್ಯಾಂಡ್​ ಮಾಡಲು ಚಾಲಕರಿಗೆ ನೆರವಾಗುತ್ತದೆ. ಆದ್ರೆ, 5ಜಿ ಟವರ್​ಗಳಿದ್ರೆ ಆ ಸಿಗ್ನಲ್​ಗಳು ಸರಿಯಾದ ಮಾಹಿತಿಗಳನ್ನು ಪೈಲೆಟ್​ಗಳಿಗೆ ನೀಡಲಾಗುವುದಿಲ್ಲ. ಅಲ್ಲದೇ, ಟವರ್​ನಿಂದ ಹೊರಬರುವ ತರಂಗಗಳು ಇದಕ್ಕೆ ಅಡ್ಡಿಯನ್ನುಂಟುಮಾಡಿ ವಿಮಾನಗಳ ದಾರಿತಪ್ಪಬಹುದು ಮತ್ತು ಪತನಗಳಂತಹ ದುರಂತಗಳು ಸಂಭವಿಸಬುದು ಅಂತಾ ಏವಿಯೇಷನ್ ಎಕ್ಸ್​ಪರ್ಟ್​ಗಳ ಎಚ್ಚರಿಕೆ.

ಇನ್ನು, ಅಪ್​ಗ್ರೇಡೆಡ್ 5ಜಿ ಟವರ್​ಗಳ ಅಳವಡಿಕೆಗೆ ಟೆಲಿಕಾಂ ಸಂಸ್ಥೆಗಳು ಮುಂದಾದ 36 ಗಂಟೆಗಳ ಒಳಗೆ ಈ ರೀತಿಯ ವಾರ್ನಿಂಗ್​ ಬಂದಿದೆ. ವಿಮಾನಯಾನಕ್ಕೆ ಯಾವುದೇ ಸಮಸ್ಯೆಗಳಿಲ್ಲ ಎಂಬ ಖಚಿತ ಮಾಹಿತಿ ಬಂದ ಮೇಲಷ್ಟೇ ನಾವು ಹಾರಾಟ ನಡೆಸೋದಾಗಿ ಅಮೆರಿಕನ್ ಏರ್​ಲೈನ್ಸ್, ಡೆಲ್ಟಾ ಏರ್​ಲೈನ್ಸ್​, ಯುನೈಟೆಡ್ ಏರ್​ಲೈನ್ಸ್​, ಸೌತ್​ವೆಸ್ಟ್​ ಏರ್​ಲೈನ್ಸ್​ನಂತಹ ದೈತ್ಯ ವಿಮಾನಯಾನ ಸಂಸ್ಥೆಗಳು ಪಟ್ಟು ಹಿಡಿದು ಕುಳಿತಿವೆ.

ಕಳೆದ ತಿಂಗಳೇ ವಿಮಾನಗಳಿಗಾಗುವ ತೊಂದರೆಯ ಮಾಹಿತಿ
ಗಂಭೀರವಾಗಿ ಪರಿಗಣಿಸದೇ 5ಜಿ ಟವರ್​ಗಳ ಅಳವಡಿಕೆ

ಇನ್ನು, 5ಜಿಯಿಂದ ವಿಮಾನಗಳಿಗಾಗುವ ಸಮಸ್ಯೆಗಳ ಬಗ್ಗೆ ಕಳೆದ ತಿಂಗಳೇ ಮಾಹಿತಿ ನೀಡಲಾಗಿತ್ತು. ಕ್ಯಾಲಿಫೋರ್ನಿಯಾ, ಚಿಕಾಗೋ, ದಲ್ಲಾಸ್, ಫ್ಲೋರಿಡಾ, ನ್ಯೂಯಾರ್ಕ್​ನಂತಹ ದೊಡ್ಡ ದೊಡ್ಡ ರಾಜ್ಯಗಳಲ್ಲಿರುವ ಏರ್​ಪೋರ್ಟ್​ಗಳಿಗೇ ಇದರಿಂದ ಹೆಚ್ಚು ತೊಂದರೆಯಾಗುವ ಬಗ್ಗೆಯೂ ತಿಳಿಸಲಾಗಿತ್ತು. ಆದ್ರೆ, ಅದನ್ನ ಗಂಭೀರವಾಗಿ ಪರಿಗಣಿಸದೇ 5ಜಿ ರೋಲ್​ ಔಟ್​ಗೆ ಅಮೆರಿಕಾ ಮುಂದಾಗಿದೆ.

ಇನ್ನು, ಅಮೆರಿಕಾದ ಎಫ್​ಎಎ ಅಂದ್ರೆ, ಫೇಡರೇಷನ್ ಆಫ್​ ಏವಿಯೇಷನ್ ಅಸೋಷಿಯನ್ ಪೈಲೆಟ್​ಗಳಿಗೆ ಅಲ್ಟಿಮೀಟರ್​​ನ ಬಳಸದಂತೆ ಸೂಚನೆ ನೀಡಿದ್ದರು. ಆದ್ರೆ, ನಿನ್ನೆ ಒಂದೇ ದಿನದಲ್ಲಿ 1,100ಕ್ಕೂ ಹೆಚ್ಚು ವಿಮಾನಗಳು 5ಜಿ ಟವರ್​ಗಳ ತರಂಗಗಳ ಪರಿಣಾಮ ಪರದಾಟ ನಡೆಸಿದ್ದು, ಕೆಲವು ಕ್ಯಾನ್ಸಲ್​ ಆದ್ರೆ ಮತ್ತೆ ಕೆಲವು ಡೈವರ್ಟ್​ ಆಗಿವೆಯಂತೆ.. ಇನ್ನೂ ಕೆಲವು ವಿಮಾನಗಳು ವಿಳಂಬವಾಗಿಯಂತೆ. ಇದರಿಂದ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ದಿಕ್ಕು ತೋಚದಂತಾಗಿದ್ದರು ಅಂತಾ ಖುದ್ದು ಅಮೆರಿಕಾದ ಮಾಧ್ಯಮಗಳೇ ವರದಿ ಮಾಡಿವೆ.

5ಜಿ ವಿಚಾರದಲ್ಲಿ ಏರ್​ಲೈನ್ಸ್​, ಟೆಲಿಕಾಂ ಕಂಪನಿಗಳ ಕುಸ್ತಿ
5ಜಿಯಿಂದ ಪ್ರತೀ ವರ್ಷ 3,50,000 ಫ್ಲೈಟ್​ಗಳ ವಿಳಂಬ

5ಜಿ ಕ್ರಾಂತಿಯ ಬಗ್ಗೆ ಈಗಾಗಲೇ ಸಾಕಷ್ಟು ವಿಚಾರಗಳನ್ನ ಜನತೆಗೆ ತಿಳಿಸುವ ಪ್ರಯತ್ನವಾಗ್ತಿದೆ. 5ಜಿ ಬಂದ್ಮೇಲೆ ಹೈಸ್ಪೀಡ್ ಇಂಟರ್​ನೆಟ್​ನಿಂದ ಹಿಡಿದು ಡ್ರೈವರ್​ಲೆಸ್​ ಕಾರ್​ವರೆಗೂ ಸಿಗುವ ಸೌಲಭ್ಯಗಳ ಬಗ್ಗೆ ಕನಸು ಕಟ್ಟಿಕೊಳ್ಳಲಾಗ್ತಿದೆ. ಆದ್ರೆ, 5ಜಿ ವಿಚಾರದಲ್ಲಿ ಅಮೆರಿಕಾದಂತಹ ಮುಂದುವರಿದ ರಾಷ್ಟ್ರದಲ್ಲಿಯೇ ಭರ್ಜರಿ ಕಾಳಗ ನಡೀತಿದೆ. ಏರ್​ಲೈನ್ಸ್​ ಹಾಗೂ ಟೆಲಿಕಾಂ ಕಂಪನಿಗಳ ನಡುವೆ ಸಮರ ಹಲವು ತಿಂಗಳುಗಳಿಂದ ಜೋರಾಗಿಯೇ ಇದೆ. ಬೋಯಿಂಗ್ ಹಾಗೂ ಏರ್​ಬಸ್ ವಿಮಾನಯಾನ ಸಂಸ್ಥೆಗಳು 5ಜಿ ಅಳವಡಿಕೆಯನ್ನ ಸುತಾರಾಮ್ ಒಪ್ಪುತ್ತಿಲ್ಲ ಅಂದ್ರೆ ತಪ್ಪಾಗಲ್ಲ.

ಎಟಿ&ಟಿ ಹಾಗೂ ವೆರೈಜಾನ್ ಸಂಸ್ಥೆಗಳ ವಿರುದ್ಧ ಸಿಡಿದಿರುವ ಎರಡೂ ಸಂಸ್ಥೆಗಳೂ 5ಜಿ ಫ್ರೀಕ್ವೆನ್ಸಿ ವಿಮಾನಗಳ ವಿಳಂಬ, ಡೈವರ್ಸನ್​ಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೇ ಅನ್ನೋ ವಾದವನ್ನ ಮುಂದಿಡುತ್ತಲೇ ಬಂದಿದೆ. ಅಲ್ಲದೇ. ಇದರಿಂದಾಗಿ, ವಾರ್ಷಿಕವಾಗಿ ಬರೋಬ್ಬರಿ 3 ಲಕ್ಷದ 50 ಸಾವಿರ ಫ್ಲೈಟ್​ಗಳು ಪ್ರಯಾಣದಲ್ಲಿ ಡಿಲೇ ಅನುಭವಿಸುವ ಸಾಧ್ಯತೆಗಳಿವೆ ಅಂತಲೂ ಎಚ್ಚರಿಸಿವೆ. ಅಲ್ಲದೇ. ಈ ಹೈ ಸ್ಪೀಡ್ ಇಂಟರ್​ನೆಟ್​ ಸೇವೆ ವಿಮಾನಪತನಗಳಂತಹ ದುರಂತಗಳನ್ನೂ ತಂದಿಟ್ಟರೆ ಅಚ್ಚರಿಯಿಲ್ಲ ಅನ್ನೋದನ್ನ ಏವಿಯೇಷನ್ ತಜ್ಞರೂ ತಿಳಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.

ಆದ್ರೆ, ಟೆಲಿಕಾಮ್ ಸಂಸ್ಥೆಗಳ ವಾದವೇ ಬೇರೆಯಾಗಿತ್ತು, ಪೈಲೆಟ್​ಗಳ ಕಾಕ್​ಪಿಟ್​ನಲ್ಲಿರುವ ರೇಡಿಯೋ ಸಿಗ್ನಲ್ ಡಿವೈಸ್​ಗೂ ಹಾಗೂ ಅವರು ಅಳವಡಿಸಲು ಮುಂದಾಗಿರುವ 5ಜಿ ಸೇವೆ ಕಲ್ಪಿಸೋ ಸಿ ಬ್ಯಾಂಡ್​ಗೂ ಕನೆಕ್ಷನ್ನೇ ಇಲ್ಲ ಅಂತಾ ವಾದಿಸುತ್ತಿದ್ದು ಇಬ್ಬರ ನಡುವೆ ಕಾನೂನು ಸಮರಕ್ಕೂ ವೇದಿಕೆ ಕಲ್ಪಿಸಿಕೊಟ್ಟಿದೆ. ಈಗ ಏರ್​ಲೈನ್ಸ್ ಸಂಸ್ಥೆಗಳು 5ಜಿ ಟವರ್​ಗಳಿಂದ ಫ್ಲೈಟ್​ಗಳಿಗೆ ತೊಂದರೆಯಾಗುತ್ತೆ ಅನ್ನೋದನ್ನ ಸಾಬೀತುಪಡಿಸಬೇಕಾಗಿದ್ರೆ, 5ಜಿಯಿಂದ ಏನೂ ತೊಂದರೆಯಾಗೋದಿಲ್ಲ ಅನ್ನೋದನ್ನ ಟೆಲಿಕಾಂ ಸಂಸ್ಥೆಗಳು ಪ್ರೂವ್​ ಮಾಡಬೇಕಿದೆ. ಒಟ್ಟಾರೆ, ಇಬ್ಬರ ನಡುವಿನ ಹಗ್ಗಜಗ್ಗಾಟ ಯಾರಿಗೆ ಲಾಭ ಯಾರಿಗೆ ನಷ್ಟವೋ ಗೊತ್ತಿಲ್ಲ ಬಟ್​ 5ಜಿಯಿಂದ ವಿಮಾನಗಳಲ್ಲಿ ಪ್ರಯಾಣಿಸೋ ಜನಸಾಮಾನ್ಯರಿಗೆ ಏನೂ ತೊಂದರೆಯಾಗದಿದ್ರೆ ಸಾಕು.

5ಜಿ ಇಂಟರ್​ನೆಟ್​ ಭಾರತದಲ್ಲಿ ಯಾವಾಗ ಬರುತ್ತೆ ಅಂತಾ ಜನರು ಕಾತರದಿಂದ ಕಾಯ್ತಿದ್ದಾರೆ. ಆದ್ರೆ, ಟೆಕ್ನಾಲಜಿ ವಿಚಾರದಲ್ಲಿ ದೈತ್ಯನಾಗಿರೋ ಅಮೆರಿಕಾದಂತಹ ರಾಷ್ಟ್ರವೇ ಈಗ 5ಜಿಯಿಂದ ಕೊಂಚ ಶೇಕ್ ಆಗಿರೋ ಹಾಗೇ ಕಾಣ್ತಿದೆ. ಭಾರತವೂ ಈ ಸೇವೆಯನ್ನ ದೇಶಕ್ಕೆ ಕರೆತರೋಮೊದಲು ಎಲ್ಲಾ ರೀತಿಯ ಮುಂದಾಲೋಚನೆಯನ್ನ ಇದೇ ರೀತಿ ಮಾಡಿದ್ರೆ ಒಳಿತು..

ವಿಶೇಷ ಬರಹ : ಸುಧಾಕರ್ ಬಿ.ಎಸ್​.

News First Live Kannada


Leave a Reply

Your email address will not be published. Required fields are marked *