ಮಡಿಕೇರಿ: ಜಿಲ್ಲೆಯಲ್ಲಿ ಹಲ್ಕಾ ಕೆಲಸ ಮಾಡ್ತೀರೇನ್ರೀ ಎಂದು ಸಚಿವ ಸೋಮಣ್ಣ ಅವರು ಜಿಲ್ಲೆಯ ಎಡಿಸಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆಯಿತು.

ಇಂದು ಜಿಲ್ಲೆಯ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಕರೆಯಲಾಗಿತ್ತು. ಆದರೆ ಕಳೆದ ತಿಂಗಳು ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದ್ದ ಪ್ರೊಸೀಡಿಂಗ್ಸ್ ಗಳನ್ನು ಎಡಿಸಿ ರಾಜು ಮೊಗವೀರ ಅವರು ಜಾರಿ ಮಾಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸಚಿವರು ಸಭೆಯಲ್ಲಿ ಅಧಿಕಾರಿಗೆ ಬಿಸಿ ಮುಟ್ಟಿಸಿದರು. ಜಿಲ್ಲೆಯಲ್ಲಿ ಹಲ್ಕಾ ಕೆಲಸ ಮಾಡ್ತೀರೇನ್ರೀ? ಎಡಿಸಿ ಅಂದ್ರೆ ಏನು ಹೇಳಿ? ನೀವೇನೂ ಕತ್ತೆ ಕೆಲಸ ಮಾಡ್ತಾ ಇದ್ದೀರಾ..? ಎಂದು ಕ್ಲಾಸ್ ತೆಗೆದುಕೊಂಡರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಡಿಸಿ ರಾಜುಗೆ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದನ್ನು ಸಮರ್ಥಿಸಿಕೊಂಡರು. ಜನರ ಪರವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದ್ದೇನೆ. ನಮಗೆ 40 ವರ್ಷಗಳ ಅನುಭವವಿದೆ. ನಮ್ಮೆಲ್ಲರ ಸಲಹೆ ಸೂಚನೆಗಳನ್ನ ಪ್ರೊಸೀಡಿಂಗ್ಸ್ ಮಾಡಬೇಕು. ಅದನ್ನು ಮಾಡಲಿಲ್ಲ ಎಂದರೇ ನಾನೇಕೆ 40 ವರ್ಷ ರಾಜಕಾರಣ ಮಾಡಬೇಕು. ಕೊಡಗಿನ ಜನ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಜನ ಸಂಕಷ್ಟದಿಂದ ಹೊರಬರಬೇಕು. ಅದಕ್ಕಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಹಾಗಾಗಿ ಎಡಿಸಿಗೆ ಕ್ಲಾಸ್ ತೆಗೆದುಕೊಂಡಿದ್ದೇನೆ ಎಂದರು.

The post ನೀವೇನೂ ಕತ್ತೆ ಕೆಲಸ ಮಾಡ್ತಾ ಇದ್ದೀರಾ..? – ಕೊಡಗು ಎಡಿಸಿಗೆ ಸೋಮಣ್ಣ ಕ್ಲಾಸ್ appeared first on News First Kannada.

Source: newsfirstlive.com

Source link