ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್​, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು – Viral Video Adorable Pup Refusing To Eat Veggies Is Too Relatable To Miss


Pup Refusing To Eat Veggies : ‘ನೋಡಿ, ತಿನ್ನೋ ವಿಷಯದಲ್ಲಿ ನನಗೂ ನನ್ನದೇ ಆದ ಆಯ್ಕೆ ಅಂತ ಇದೆ. ನಿಮ್ಮ ಸೋಮಾರಿತನಕ್ಕೆ ನನಗೆ ಸೊಪ್ಪುಸೆದೆ ತಿನ್ನಿಸಿ ಹಾಳು ಮಾಡಬೇಡಿ. ಫಿಶ್ಶು, ಚಿಕನ್ನೂ ಈ ಶಬ್ದಗಳ ಪರಿಚಯವುಂಟೋ?’

ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್​, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು

Adorable Pup Refusing To Eat Veggies Is Too Relatable To Miss

Viral Video : ಚೀಸ್​ ಬೇಕೇನೋ? ಯೆಸ್. ಕ್ಯಾರೆಟ್​ ಬೇಕೇನೋ? ಊಂಹೂ. ಬ್ರೊಕೋಲಿ ಬೇಕೇನೋ? ಊಂಹೂ. ಮಕ್ಕಳಂತೆ ಅಡ್ಡಡ್ಡ ತಲೆ ಅಲ್ಲಾಡಿಸಿ ಬೇಡ ಎಂದರೆ ಬೇಡ ಎಂದು ಹೇಳುತ್ತಿದೆ ಈ ನಾಯಿಮುದ್ದು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ನಮ್ಮಂತೆಯೇ ಪ್ರಾಣಿಗಳಿಗೂ ಅವುಗಳಿಗೆ ಇಷ್ಟವಾದ ಆಹಾರ ಬೇಕೆನ್ನಿಸುತ್ತದೆ. ಹಾಗಾಗಿ ಅವುಗಳು ಹೀಗೆ ನೇರವಾಗಿ ನಿರಾಕರಿಸುವುದು ತಪ್ಪು ಅಲ್ಲವೇ ಅಲ್ಲ!

ಕೇವಲ 19 ಸೆಕೆಂಡಿನ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಈಗಾಗಲೇ 1.8 ಮಿಲಿಯನ್ ಜನರು ನೋಡಿದ್ದಾರೆ. 87,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾಕಷ್ಟು ಜನರು ತಮ್ಮ ತಮ್ಮ ಮುದ್ದಿನ ನಾಯಿಗಳು ಹೀಗೆ ತಮಗಿಷ್ಟವಾದ ಆಹಾರವನ್ನು ಬಯಸುವ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ.

ಬಹುಶಃ ಮನುಷ್ಯರು ಕೂಡ ತಮಗೆ ಬೇಡವಾಗಿದ್ದನ್ನು ಬೇಡ ಎಂದು ಹೇಳುವಲ್ಲಿ ಹಿಂಜರಿಯುವರೇನೋ. ಆದರೆ ಈ ನಾಯಿ ಮಾತ್ರ! ಅಬ್ಬಾ ಎಂಥ ನೇರ, ನಿಖರತೆ, ನಿರ್ಭಿಡೆ.

ಬದುಕಿದರೆ ಹೀಗೇ ಬದುಕಬೇಕು. ಬೇಡವಾಗಿದ್ದನ್ನು ಬೇಡ ಎಂದು ನೇರ ಹೇಳಲು ಕಲಿಯಬೇಕು ಎಂದು ಒಬ್ಬರು ಹೇಳಿದ್ದಾರೆ. ಯಾರು ನಿನಗೆ ಹೀಗೆಲ್ಲ ಹೇಳಿಕೊಟ್ಟಿದ್ದು? ಎಂದು ಮತ್ತೊಬ್ಬರು ಕೇಳಿದ್ದಾರೆ.

ನಿಮ್ಮ ಮನೆಯ ನಾಯಿಯೂ ಹೀಗೆಯೇ ಮಾಡುತ್ತದೆಯಾ?

TV9 Kannada


Leave a Reply

Your email address will not be published.