‘ನೀವೊಬ್ಬ ಗುಜರಿ ಗಿರಾಕಿ’.. ಜಮೀರ್​ಗೆ ರೇಣುಕಾಚಾರ್ಯ ಹೀಗಂದಿದ್ದೇಕೆ..?

‘ನೀವೊಬ್ಬ ಗುಜರಿ ಗಿರಾಕಿ’.. ಜಮೀರ್​ಗೆ ರೇಣುಕಾಚಾರ್ಯ ಹೀಗಂದಿದ್ದೇಕೆ..?

ದಾವಣಗೆರೆ: ಸಿದ್ದರಾಮಯ್ಯ ಮಾಜಿ ಸಿಎಂ ಅಲ್ಲ ಭಾವಿ ಸಿಎಂ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರೇಣುಕಾಚಾರ್ಯ ನೀವೊಬ್ಬ ಗುಜರಿ ಗಿರಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಮೀರ್ ಅಹ್ಮದ್ ತಿರುಕನ ಕನಸು ಕಾಣುತಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದರೆ ಅವರ ಮನೆ ವಾಚ್ ಮನ್ ಆಗ್ತೀನಿ ಅಂತ ಹೇಳಿದ್ದೆ.. ಮೊದಲು ಆ ಕೆಲಸವನ್ನ ಮಾಡು.. ನಂತರ ರಾಜಕೀಯ ಮಾತಾಡು. ರಾಜ್ಯದಲ್ಲಿ ಸಿಎಂ ಚೇರ್ ಖಾಲಿಯಿಲ್ಲ. ಎರಡು ವರ್ಷ ಬಿಎಸ್​ವೈ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯಲ್ಲಿಯೂ ಕೂಡ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ನಿಮಗೆ  ಪ್ರತಿಪಕ್ಷ ಸ್ಥಾನ ಕೂಡ ಸಿಕ್ಕಿಲ್ಲ. ನಿಮ್ಮ ಕ್ಷೇತ್ರದಲ್ಲಿ ಮುಂದೆ ಗೆಲ್ತಿರೋ ಇಲ್ವೋ ಗೊತ್ತಿಲ್ಲ. ನೀವೊಬ್ಬ ಗುಜರಿ ಗಿರಾಕಿ ಅಂತ  ದಾಣಗೆರೆಯ ಹೊನ್ನಾಳಿಯಲ್ಲಿ ಜಮೀರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

The post ‘ನೀವೊಬ್ಬ ಗುಜರಿ ಗಿರಾಕಿ’.. ಜಮೀರ್​ಗೆ ರೇಣುಕಾಚಾರ್ಯ ಹೀಗಂದಿದ್ದೇಕೆ..? appeared first on News First Kannada.

Source: newsfirstlive.com

Source link