ನಟಿ, ಟಿಎಂಸಿ ಸಂಸದೆ ನುಸ್ರತ್​ ಜಹಾನ್​ ಕಳೆದ ಒಂದೆರಡು ವಾರಗಳಿಂದ ಬಹಳ ಸುದ್ದಿಯಲ್ಲಿದ್ದಾರೆ. ಒಂದೆಡೆ ಪತಿ ನಿಖಿಲ್​ ಜೈನ್​ರಿಂದ ದೂರವಾಗಿ ತಮ್ಮಿಬ್ಬರ ಮದುವೆ ಭಾರತದಲ್ಲಿ ಮದುವೆಯೇ ಅಲ್ಲ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ನುಸ್ರತ್​​ ಸದ್ಯ ಆರು ತಿಂಗಳ ಗರ್ಭಿಣಿ ಅನ್ನೋ ಗಾಳಿ ಸುದ್ದಿ ಹರಿದಾಡ್ತಿದ್ದಂತೆಯೇ ನಿಖಿಲ್​ ಜೈನ್​ ತಾವು ಈ ಮಗುವಿನ ತಂದೆಯಲ್ಲ ಅಂತ ಆಗಲೇ ಘೋಷಣೆ ಮಾಡಿದ್ದಾರೆ. ನುಸ್ರತ್​ ಜಹಾನ್​ ತಾವು ಗರ್ಭಿಣಿಯಾಗಿರುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಇದೀಗ ವೈರಲ್​ ಆಗಿರುವ ನುಸ್ರತ್​ ಹೊಸ ಫೋಟೋಗಳು ಆ ಸುದ್ದಿಗೆ ಪೂರಕವಾಗಿ ಬೇರೆಯದ್ದೇ ಕಥೆ ಹೇಳ್ತಿದೆ.

ಇದನ್ನೂ ಓದಿ: ಇದೇನಿದು ಟಿಎಂಸಿ ಎಂಪಿ ನುಸ್ರತ್ ಬಾಳಲ್ಲಿ ಬಿರುಗಾಳಿ; ನಟಿ ಹೊಟ್ಟೆಯಲ್ಲಿರೋ ಮಗು ನಂದಲ್ಲ ಎಂದ ಪತಿ

ಹೌದು.. ಇತ್ತೀಚೆಗೆ ನುಸ್ರತ್​ ತಮ್ಮ ಸ್ನೇಹಿತೆಯರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳಲ್ಲಿ ನುಸ್ರತ್​ ಬೇಬಿ ಬಂಪ್​ ಸ್ಪಷ್ಟವಾಗಿ ಕಾಣಿಸುತ್ತಿದೆ. ನುಸ್ರತ್​ ಹಾಗೂ ಪತಿ ನಿಖಿಲ್​ ಜೈನ್​ ಬಹಳ ತಿಂಗಳ ಹಿಂದೆಯೇ ದೂರವಾಗಿದ್ದು ಇದು ತಮ್ಮ ಮಗುವಲ್ಲ ಅಂತ ನಿಖಿಲ್​ ಸಾರಿ ಸಾರಿ ಹೇಳ್ತಿದ್ದಾರೆ. ಆದ್ರೆ ಈ ಬಗ್ಗೆ ನುಸ್ರತ್​ ಸದ್ಯ ಯಾವುದೇ ಪ್ರತಿಯುತ್ತರವಾಗಲೀ, ಅಥವಾ ತಾವು ಗರ್ಭಿಣಿಯಾಗಿರುವ ಬಗ್ಗೆಯಾಗಲೀ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಸದ್ಯ ಈ ಫೋಟೋಗಳು ವೈರಲ್​ ಆಗಿದ್ದು, ಇನ್ನಾದ್ರೂ ಈ ಬಗ್ಗೆ ತುಟಿ ಬಿಚ್ತಾರಾ ನೋಡ್ಬೇಕು.

ಇದನ್ನೂ ಓದಿ: ಯಶ್ ಕಾರಣದಿಂದಲೇ ಪತಿಯಿಂದ ದೂರಾದ್ರಾ ಟಿಎಂಸಿ ಸಂಸದೆ ನುಸ್ರತ್ ಜಹಾನ್..?

ಇನ್ನು ನಿಖಿಲ್​ ಜೈನ್​ರಿಂದ ದೂರವಾದ ನುಸ್ರತ್​​, ನಟ-ರಾಜಕಾರಣಿ ಯಶ್​ ದಾಸ್​ಗುಪ್ತಾ ಜೊತೆ ವಾಸವಾಗಿದ್ದಾರೆ ಅನ್ನೋ ಸುದ್ದಿಯೂ ಇದೆ. ಹಾಗಾಗಿ ನುಸ್ರತ್​​ ಹೊಟ್ಟೆಯಲ್ಲಿರೋದು ಯಶ್​ ಮಗುನಾ ಅನ್ನೋ ಸಂದೇಹ ಮೂಡೋದು ಸಹಜ. ಅಷ್ಟೇ ಅಲ್ಲದೇ, ಎಲ್ಲೋ ಒಂದು ಕಡೆ ನುಸ್ರತ್​​ ಹಾಗೂ ನಿಖಿಲ್​ ದೂರವಾಗೋದಕ್ಕೂ ಯಶ್​ ಕಾರಣನಾ ಅನ್ನೋ ಪ್ರಶ್ನೆಗಳೂ ಎದ್ದಿವೆ. ಆದ್ರೆ ಇದೆಲ್ಲದಕ್ಕೂ ಖುದ್ದು ನಟಿ ನುಸ್ರತ್​​ ಉತ್ತರ ಕೊಡೋವರೆಗೂ ಕಾಯಲೇಬೇಕು.

ಇದನ್ನೂ ಓದಿ: ಸಂಬಂಧ ಹೇಗೆ ಬೆಳೆಯಿತು? ಹೇಗೆ ಹಳಸಿತು..? ನುಸ್ರತ್​ ಪತಿ ಸ್ಫೋಟಕ ಕೌಂಟರ್​​

The post ನುಸ್ರತ್​ ಜಹಾನ್​ ಬೇಬಿ ಬಂಪ್​ ಫೋಟೋ ವೈರಲ್​; ಇನ್ನಾದ್ರೂ ಬಹಿರಂಗ ಪಡಿಸ್ತಾರಾ ಸೀಕ್ರೆಟ್​​.? appeared first on News First Kannada.

Source: newsfirstlive.com

Source link