ವಿಶ್ವಕಪ್ ಟೂರ್ನಿಯೊಂದಿಗೆ ರವಿ ಶಾಸ್ತ್ರಿಯ ಟೀಮ್ ಇಂಡಿಯಾ ಮುಖ್ಯ ಕೋಚ್ ಅಧಿಕಾರ ಅವಧಿ ಅಂತ್ಯಗೊಂಡಿದೆ. ಈ ನಾಲ್ಕು ವರ್ಷಗಳ ತಮ್ಮ ಪಯಣವನ್ನ ನಿರ್ಗಮಿತ ಕೋಚ್ ಶಾಸ್ತ್ರಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿ.. ಟೀಂ ಇಂಡಿಯಾವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯ ದ್ರಾವಿಡ್ಗೆ ಇದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತದ ಈ ತಂಡ ಮತ್ತೊಂದು ಹಂತಕ್ಕೇರಲಿದೆ. ದ್ರಾವಿಡ್ ಅವರಲ್ಲಿನ ಅನುಭವ ತಂಡಕ್ಕೆ ವರದಾನವಾಗಲಿದೆ ಎಂದು ತಿಳಿಸಿದ್ದಾರೆ.
ಕೊಹ್ಲಿ ಬಗ್ಗೆ ಮಾತನಾಡಿರುವ ಶಾಸ್ತ್ರಿ, ನಾಯಕನಾಗಿ ವಿರಾಟ್ ಅದ್ಭುತ ಕೆಲಸ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಸರ್ವಶ್ರೇಷ್ಠ ರಾಯಭಾರಿ ಆತ. ಯಶಸ್ಸಿನ ಶ್ರೇಯಸ್ಸು ಆತನಿಗೂ ಸಲ್ಲುತ್ತದೆ ಎಂದಿದ್ದಾರೆ. ಇದು ಅದ್ಭುತ ಪಯಣ. ನಾನು ಈ ಕೆಲಸ ಕೈಗೆತ್ತಿಕೊಂಡಾಗ ತಂಡ ಇದ್ದ ಸ್ಥಿತಿಗೂ ಈಗಿರುವ ಸ್ಥಿತಿಗೂ ದೊಡ್ಡ ವ್ಯತ್ಯಾಸವಿದೆ. ತಂಡದಲ್ಲಿ ಪರಿಣಾಮಕಾರಿ ಬದಲಾವಣೆ ತರಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಇದರಲ್ಲಿ ಯಶಸ್ಸು ಕಂಡಿದ್ದೇನೆ ಅಂತಾ ತಿಳಿಸಿದ್ದಾರೆ.