ನೂತನ ಜಿಲ್ಲೆ ವಿಜಯನಗರದಲ್ಲಿ ಕೋತಿಗಳ ಕಾಟ: ಹೈರಾಣಾದ ಜನತೆ

ವಿಜಯನಗರ: ಕೋತಿಗಳಿಗೆ ಆಟ ಮನುಷ್ಯರಿಗೆ ಸಂಕಟ ಎಂಬ ಮಾತು ಅಕ್ಷರಶಃ ಇಲ್ಲಿ ಸತ್ಯವಾಗುತ್ತಿದೆ. ಜಿಲ್ಲೆಯ ಕೊಟ್ಟೂರು ತಾಲೂಕಿನ ಗಜಾಪುರ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಕೋತಿಗಳ ಮಂಗಾಟಕ್ಕೆ ಸ್ಥಳೀಯರು ಹೈರಾಣಾಗಿದ್ದಾರೆ.

ರಸ್ತೆಯಲ್ಲಿ ಓಡಾಡುತ್ತಿರೋ ಜನರ ಮೇಲೆ ಮನಸೋ ಇಚ್ಛೆ ದಾಳಿ ಮಾಡುತ್ತಿರುವ ಕೋತಿಗಳ ದಾಳಿಗೆ ಜನರು ಭಯಭೀತರಾಗಿದ್ದು, ಪರಿಣಾಮ 15 ಕ್ಕೂ ಹೆಚ್ಚು ಜನರಿಗೆ ದಾಳಿ ಮಾಡಿ ಭೀತಿ ಹುಟ್ಟಿಸಿದೆ.

ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕೋತಿಗಳ ಹಿಂಡು ಬೈಕ್ ಸವಾರರು ಹಾಗೂ ಟ್ಯಾಕ್ಟರ್ ಚಾಲಕರ ಮೇಲೆ ದಾಳಿ ಮಾಡುತ್ತಿವೆ. ಈಗಾಗ್ಲೇ 15 ಕ್ಕೂ ಹೆಚ್ಚು ಜನರಿಗೆ ದಾಳಿ ಮಾಡಿರುವ ಕೋತಿಗಳ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಕೋತಿಗಳು ಗ್ರಾಮದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸುತ್ತಿದ್ದರೂ ಸಹ ಅರಣ್ಯಾಧಿಕಾರಿಗಳು ಮಾತ್ರ ಕೋತಿಗಳನ್ನು ಹಿಡಿಯುವ ಯಾವುದೇ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *