ನೂತನ ನಾಯಕನಿಗೆ ಪಂಜಾಬ್​ ಹುಡುಕಾಟ -ಮಯಾಂಕ್​ಗೆ ಸಿಗಲ್ವಾ ನಾಯಕನ ಪಟ್ಟ..?


ಪಂಜಾಬ್​ ಕಿಂಗ್ಸ್ ತಂಡವನ್ನ ನಾಯಕನಾಗಿದ್ದ ರಾಹುಲ್​ ತೊರೆದ ಬೆನ್ನಲ್ಲೇ ಮಯಾಂಕ್​ ಅಗರ್​ವಾಲ್​ರನ್ನ ಫ್ರಾಂಚೈಸಿ ರಿಟೈನ್​ ಮಾಡಿಕೊಂಡಿತ್ತು. ಅದರ ಬೆನ್ನಲ್ಲೇ ಮಯಾಂಕ್​ ತಂಡವನ್ನ ಮುನ್ನಡೆಸ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದ್ರೆ, ಇದೀಗ ಫ್ರಾಂಚೈಸಿ ಮೂಲದಿಂದ ಹೊಸ ಸುದ್ದಿ ಹೊರ ಬಿದ್ದಿದ್ದು, ಮಯಾಂಕ್​ ನಾಯಕನ ಆಯ್ಕೆಯೇ ಅಲ್ವಂತೆ.!

ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಆಕ್ಷನ್​ಗೆ ದಿನಗಣನೆ ಆರಂಭವಾಗಿದೆ. ಹರಾಜಿನ ದಿನ ಹತ್ತಿರವಾದಂತೆ ಫ್ರಾಂಚೈಸಿಗಳ ಲೆಕ್ಕಾಚಾರಗಳೂ ಜೋರಾಗಿದೆ. ತಮಗೆ ಬೇಕಾದ ಆಟಗಾರರನ್ನ ಟಾರ್ಗೆಟ್​​​ ಮಾಡಿರೋ ಫ್ರಾಂಚೈಸಿಗಳು, ಖರೀದಿ ವಿಚಾರದಲ್ಲೂ ಸ್ಟಾರ್ಟಜಿ ರೂಪಿಸ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪಂಜಾಬ್​ ಕಿಂಗ್ಸ್​​ ಫ್ರಾಂಚೈಸಿ ಕೂಡ ವಿಶೇಷ ಪ್ಲಾನ್​ನೊಂದಿಗೆ ಹರಾಜಿನ ಕಣಕ್ಕಿಳಿಯಲು ನಿರ್ಧರಿಸಿದೆ.

ಕ್ಯಾಪ್ಟನ್​ ಹುಡುಕಾಟದಲ್ಲಿದ್ಯಂತೆ ಪಂಜಾಬ್​ ಕಿಂಗ್ಸ್​.!

ಕೆಎಲ್​ ರಾಹುಲ್​ ಪಂಜಾಬ್​ ಕಿಂಗ್ಸ್​​​ ತಂಡವನ್ನ ತೊರೆದ ಬೆನ್ನಲ್ಲೇ, ಅಚ್ಚರಿಯ ರೀತಿಯಲ್ಲಿ ಫ್ರಾಂಚೈಸಿ ಮಯಾಂಕ್​ ಅಗರ್​ವಾಲ್​ರನ್ನ ರಿಟೈನ್​ ಮಾಡಿಕೊಂಡಿತ್ತು. ಪಂಜಾಬ್​ ರಿಟೈನ್​ ನಿರ್ಧಾರ ತಿಳಿಸಿದ ಬೆನ್ನಲ್ಲೇ, ಮಯಾಂಕ್​ ಅಗರ್​ವಾಲೇ ನೂತನ ನಾಯಕ ಎಂಬ ಸುದ್ದಿ ಹಬ್ಬಿತ್ತು. ಯಾಕಂದ್ರೆ, ರಾಹುಲ್​ ಅಲಭ್ಯತೆಯಲ್ಲಿ ಕಳೆದ ಆವೃತ್ತಿಯಲ್ಲಿ ಮಯಾಂಕ್​ ತಂಡವನ್ನ ಮುನ್ನಡೆಸಿದ್ರು. ಆದ್ರೆ, ಇದೀಗ ಈ ಬಗ್ಗೆ ಒಂದು ಸುದ್ದಿ ಹೊರ ಬಿದ್ದಿದ್ದು, ಮಯಾಂಕ್​ ಫ್ರಾಂಚೈಸಿಯ ಮೊದಲ ಆಯ್ಕೆಯ ನಾಯಕ ಅಲ್ವಂತೆ.

‘ಹರಾಜಿನ ಬಳಿಕ ನಿರ್ಧಾರ’

‘ನಮ್ಮ ಬಳಿ ಸಾಕಷ್ಟು ಸಮಯ ಉಳಿದಿದೆ. ನಾಯಕನನ್ನ ಘೋಷಣೆ ಮಾಡುವ ಯಾವುದೇ ಅವಸರ ಈಗಿಲ್ಲ. ನಾವು ಆಕ್ಷನ್​ ಹೇಗೆ ಸಾಗುತ್ತೆ ಅದರ ಆಧಾರದಲ್ಲಿ ನಿರ್ಧಾರವನ್ನ ಕೈಗೊಳ್ಳುತ್ತೇವೆ. ಮಯಾಂಕ್​ ಯಾವಾಗಲೂ ಒಂದು ಆಯ್ಕೆಯಾಗಿದ್ದಾರೆ. ಉಳಿದವರಿಗಿಂತ ನಮ್ಮಲ್ಲಿ ಹೆಚ್ಚು ಹಣ ಉಳಿದಿದ್ದು, ನಾವು ಈಗಾಗಲೇ ಕೆಲವೊಂದು ಹೆಸರನ್ನ ಶಾರ್ಟ್​ಲಿಸ್ಟ್​ ಮಾಡಿಕೊಂಡಿದ್ದೇವೆ. ಕಾದು ನೋಡೋಣ ಏನಾಗುತ್ತೆ ಅಂತಾ’

ಪಂಜಾಬ್​ ಕಿಂಗ್ಸ್​ ಅಧಿಕಾರಿ

ಮಯಾಂಕ್​ಗೆ ನಾಯಕನ ಪಟ್ಟ ಸಿಗೋದು ಡೌಟ್​.!

ಪಂಜಾಬ್​ ಪಡೆಯನ್ನ ರಾಹುಲ್​ ಅಲಭ್ಯತೆಯಲ್ಲಿ ಮುನ್ನಡೆಸಿದ್ರೂ, ಮಯಾಂಕ್​ಗೆ ನಾಯಕತ್ವ ನೀಡದಿರಲು ಕಾರಣಗಳಿವೆ. ಮುನ್ನಡೆಸಿದ ಪಂದ್ಯದಲ್ಲಿ ಸೋತಿದ್ದು ಒಂದೆಡೆಯಾದ್ರೆ, ದೇಶಿ ಮಟ್ಟದಲ್ಲೂ ಕ್ಯಾಪ್ಟನ್ಸಿ ಜವಾಬ್ಧಾರಿಯನ್ನೇ ಮಯಾಂಕ್​ ನಿರ್ವಹಿಸಿಲ್ಲ. ಇದರಿಂದಾಗಿ ಒಬ್ಬ ಆಟಗಾರನಾಗಿ ಮಯಾಂಕ್​ ಮೇಲಿರುವಷ್ಟು ನಂಬಿಕೆ ಫ್ರಾಂಚೈಸಿಗೆ ನಾಯಕನಾಗಿ ಮಯಾಂಕ್​ ಮೇಲಿಲ್ಲ. ಇದು ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿ ಬೇರೊಬ್ಬ ಆಟಗಾರರನ ಹುಡುಕಾಟ ನಡೆಸ್ತಿರೋದಕ್ಕೆ ಕಾರಣವಾಗಿರೋ ಅಂಶವಾಗಿದೆ.

ಮೂಲಗಳ ಪ್ರಕಾರ ಆ್ಯರೋನ್​ ಫಿಂಚ್​, ಇಯಾನ್​ ಮಾರ್ಗನ್​, ಡೇವಿಡ್​ ವಾರ್ನರ್​ ಹಾಗೂ ಶ್ರೇಯಸ್​​ ಅಯ್ಯರ್​ರನ್ನ ತಂಡ ನಾಯಕನ ಸ್ಥಾನಕ್ಕೆ ಟಾರ್ಗೆಟ್​ ಮಾಡಿದ್ಯಂತೆ. ಆದ್ರೆ, ಇವರ ಪಂಜಾಬ್​ ಜೊತೆ ಜೊತೆಗೆ ಆರ್​ಸಿಬಿ, ಕೆಕೆಆರ್​ ತಂಡಗಳೂ ಇದೇ ಆಟಗಾರರನ್ನ ನಾಯಕನನ್ನಾಗಿಸಲು ಟಾರ್ಗೆಟ್​ ಮಾಡಿವೆ. ಹೀಗಾಗಿ ನಾಯಕನ ಹುಡುಕಾಟದಲ್ಲಿರೋ ಫ್ರಾಂಚೈಸಿಗಳಿಗೆ ಅಂತಿಮವಾಗಿ ಹರಾಜಿನಲ್ಲಿ ಯಾವ ಆಟಗಾರ ಸಿಗ್ತಾನೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

News First Live Kannada


Leave a Reply

Your email address will not be published.