ನೂತನ ಶಾಸಕ ಪ್ರಮಾಣ ವಚನ: ಸ್ಪೀಕರ್ ವಿಶ್ವೇಶ್ವರ ಕಾಗೇರಿಗಾಗಿ ಕಾಯುತ್ತಿರುವ ಶ್ರೀನಿವಾಸ ಮಾನೆ, ಡಿಕೆ ಶಿವಕುಮಾರ್ | Hangal new mla srinivas mane waits for speaker vishweshwar hegde kageri to take oath in vidhana soudha


ನೂತನ ಶಾಸಕ ಪ್ರಮಾಣ ವಚನ: ಸ್ಪೀಕರ್ ವಿಶ್ವೇಶ್ವರ ಕಾಗೇರಿಗಾಗಿ ಕಾಯುತ್ತಿರುವ ಶ್ರೀನಿವಾಸ ಮಾನೆ, ಡಿಕೆ ಶಿವಕುಮಾರ್

ಶ್ರೀನಿವಾಸ ಮಾನೆ

ಬೆಂಗಳೂರು: ಇತ್ತೀಚೆಗೆ ಹಾನಗಲ್ ಅಸೆಂಬ್ಲಿ ಬೈ ಎಲೆಕ್ಷನ್​​ನಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್​ನ ಶ್ರೀನಿವಾಸ ಮಾನೆ ಅವರು ತಮ್ಮ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮುಖ್ಯ ಸಚೇತಕ ಸಲೀಂ ಅಹಮದ್ ಅವರೊಡಗೂಡಿ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗಾಗಿ ಕಾದುಕುಳಿತಿರುವ ಪ್ರಸಂಗ ನಡೆದಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಕಚೇರಿಗೆ ಬಂದು ಪ್ರಮಾಣ ವಚನ ಸ್ವೀಕರಿಸುವಂತೆ ಶ್ರೀನಿವಾಸ ಮಾನೆ ಅವರಿಗೆ ತಾಕೀತು ಮಾಡಿದ್ದಾರೆ. ಹಾಗಾಗಿ ವಿಧಾನಸೌಧದ ಸ್ಪೀಕರ್ ಚೇಂಬರ್ ಬಳಿ 11.30 ಕ್ಕೆ ತಮ್ಮ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಲೀಂ ಅಹಮದ್ ಜೊತೆಗೂಡಿ ಶ್ರೀನಿವಾಸ ಮಾನೆ ಬಂದಿದ್ದಾರೆ. ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಇನ್ನೂ ತಮ್ಮ ಚೇಂಬರ್ ಗೆ ಆಗಮಿಸಿಲ್ಲ. ಕಾಗೇರಿ ಅವರು ಸಭಾಪತಿ ಭೇಟಿಗೆ ತೆರಳಿದ್ದಾರೆ.

ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದೆ ಕಾರಿಡಾರ್ ನಲ್ಲಿಯೇ ಡಿಕೆಶಿವಕುಮಾರ್ ಮತ್ತು ಉಳಿದ ನಾಯಕರು ಕಾಯುತ್ತ ನಿಂತಿದ್ದಾರೆ. ಈ ಮಧ್ಯೆ, ಅನಿವಾರ್ಯವಾಗಿ ಕಾಂಗ್ರೆಸ್ ಮುಖ್ಯ ಸಚೇತಕರ ಕೊಠಡಿಗೆ ತೆರಳಿ ಅಲ್ಲಿ ಕಾಯುತ್ತಾ ಕುಳಿತಿದ್ದಾರೆ.

(hangal new mla srinivas mane waits for speaker vishweshwar hegde kageri to take oath in vidhana soudha)

TV9 Kannada


Leave a Reply

Your email address will not be published. Required fields are marked *