ನೂರಕ್ಕೆ ನೂರರಷ್ಟು ತೀರ್ಪು ನಮ್ಮ ಪರವಾಗಿಯೇ ಬರುತ್ತೆ-ಜಮೀರ್​​


ಹುಬ್ಬಳ್ಳಿ: ನಾಳೆ ಹೈಕೋರ್ಟ್​ನಲ್ಲಿ ಹಿಜಾಬ್​ ಕುರಿತ ತೀರ್ಪು, ನೂರಕ್ಕೆ ನೂರರಷ್ಟು ನಮ್ಮ ಪರವಾಗಿ ಬರುತ್ತೆ ಎಂದು ಮಾಜಿ ಸಚಿವ ಜಮೀರ್​ ಅಹ್ಮದ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಿ ಮಾತನಾಡಿದ ಜಮೀರ್​ ಅಹ್ಮದ್​, ಹಿಜಾಬ್​ ವಿವಾದದ ಕುರಿತಂತೆ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ಕಾದು ನೋಡೋಣ ಯಾಕಂದ್ರೆ ಸ್ವಾತಂತ್ರ್ಯ ಬರುವ ಮುನ್ನವೇ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರ್ತಿದ್ದಾರೆ. ಸದ್ಯ ಕೆಲವರು ಮಕ್ಕಳಲ್ಲಿ ಜಾತಿ ಬೀಜ ಹಾಕಿ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ತೀರ್ಪು ನೂರಕ್ಕೆ ನೂರರಷ್ಟು ನಮ್ಮ ಪರವಾಗಿ ಬರುತ್ತದೆ ಎಂದು ಜಮೀರ್​ ಅಹ್ಮದ್​ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅವರು ರಾಜಕೀಯ ಲಾಭಕ್ಕೆ ಈ ರೀತಿ ಮಾಡುತ್ತಿದ್ದಾರೆ ಅಷ್ಟೇ. ಹಿಜಾಬ್ ಹಾಕೋದು ಅವರ ರೈಟ್ಸ್, ನೂರಾರು ವರ್ಷದಿಂದ ಹಾಕಿಕೊಂಡು ಬರ್ತಿದ್ದಾರೆ. ಇನ್ನು ಈ ರಾಮಮಂದಿರವೇ ಬೇರೆ ಹಿಜಾಬ್​ ವಿವಾದವೇ ಬೇರೆ. ಇನ್ನು ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಈಗ ನಾನು ರಾಜ್ಯ ಪ್ರವಾಸ ಮಾಡ್ತಿದ್ದೀವಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾತ್ರ ಜನರಿಗೆ ಒಳ್ಳೆದಾಗುತ್ತೆ ಎಂದು ಜಮೀರ್​ ಹೇಳಿದ್ದಾರೆ.

News First Live Kannada


Leave a Reply

Your email address will not be published.