ನೂರಾರು ಪ್ರಯಾಣಿಕರಿದ್ದ ಅಮರನಾಥ್ ಎಕ್ಸ್ ಪ್ರೆಸ್ ರೈಲು ಹಾದಿ ಬಿಟ್ಟು ಬೇರೊಂದು ಟ್ರ್ಯಾಕ್​ನಲ್ಲಿ 3 ಕಿಮೀ ಸಂಚರಿಸಿತು! ಆಮೇಲೇನಾಯ್ತು? | Amarnath Express train mismatches the track in Bihar and runs on different track but passnegers are safe


ಬಿಹಾರದಲ್ಲಿ ಪ್ರಯಾಣಿಕರ ರೈಲು ತನ್ನ ರೆಗ್ಯುಲರ್ ಹಳಿ ಮೇಲೆ ಚಲಿಸದೆ, ದಾರಿ ಮರೆತಂತೆ ಬೇರೊಂದು ಮಾರ್ಗದಲ್ಲಿ ಚಲಿಸಿದೆ. ರೈಲ್ವೆ ಇಲಾಖೆಯ ಈ ನಿರ್ಲಕ್ಷ್ಯದಿಂದ ನೂರಾರು ಪ್ರಯಾಣಿಕರ ಜೀವ ಅಪಾಯಕ್ಕೆ ಸಿಲುಕಿತ್ತು. ಆದರೆ ಆಮೇಲೇನಾಯ್ತು? ಈ ಸ್ಟೋರಿ  ಓದಿ

ನೂರಾರು ಪ್ರಯಾಣಿಕರಿದ್ದ ಅಮರನಾಥ್ ಎಕ್ಸ್ ಪ್ರೆಸ್ ರೈಲು ಹಾದಿ ಬಿಟ್ಟು ಬೇರೊಂದು ಟ್ರ್ಯಾಕ್​ನಲ್ಲಿ 3 ಕಿಮೀ ಸಂಚರಿಸಿತು! ಆಮೇಲೇನಾಯ್ತು?

ನೂರಾರು ಪ್ರಯಾಣಿಕರಿದ್ದ ಅಮರನಾಥ್ ಎಕ್ಸ್ ಪ್ರೆಸ್ ರೈಲು ಹಾದಿ ಬಿಟ್ಟು ಬೇರೊಂದು ಟ್ರ್ಯಾಕ್​ನಲ್ಲಿ 3 ಕಿಮೀ ಸಂಚರಿಸಿತು! ಆಮೇಲೇನಾಯ್ತು?

ಬಿಹಾರದಲ್ಲಿ ಪ್ರಯಾಣಿಕರ ರೈಲು ತನ್ನ ರೆಗ್ಯುಲರ್ ಹಳಿ ಮೇಲೆ ಚಲಿಸದೆ, ದಾರಿ ಮರೆತಂತೆ ಬೇರೊಂದು ಮಾರ್ಗದಲ್ಲಿ ಚಲಿಸಿದೆ. ರೈಲ್ವೆ ಇಲಾಖೆಯ ಈ ನಿರ್ಲಕ್ಷ್ಯದಿಂದ ನೂರಾರು ಪ್ರಯಾಣಿಕರ ಜೀವ ಅಪಾಯಕ್ಕೆ ಸಿಲುಕಿತ್ತು. ಆದರೆ ಆಮೇಲೇನಾಯ್ತು? ಈ ಸ್ಟೋರಿ  ಓದಿ

ಬಿಹಾರದಲ್ಲಿ ಪ್ರಯಾಣಿಕರ ರೈಲು ತನ್ನ ರೆಗ್ಯುಲರ್ ಹಳಿ ಮೇಲೆ ಚಲಿಸದೆ, ದಾರಿ ಮರೆತಂತೆ ಬೇರೊಂದು ಮಾರ್ಗದಲ್ಲಿ ಚಲಿಸಿದೆ. ಈ ಅಮರನಾಥ್ ಎಕ್ಸ್‌ಪ್ರೆಸ್ ರೈಲು ಬರೌನಿಯಿಂದ ಹೊರಟು ಸಮಸ್ತಿಪುರಕ್ಕೆ ತಲುಪಬೇಕಿತ್ತು. ಆದರೆ ರೈಲು ವಿದ್ಯಾಪತಿನಗರ ತಲುಪಿದೆ! ಇದರ ನಂತರ ಸೋನ್‌ಪುರ ರೈಲ್ವೆ ವಿಭಾಗದ ಅಧಿಕಾರಿಗಳಲ್ಲಿ ಕೋಲಾಹಲ ಉಂಟಾಗಿದೆ. ರೈಲು ದಾರಿ ಮರೆತು, ಗಮ್ಯ ತಲುಪಬೇಕಾದ ಜಾಗಕ್ಕೆ ಹೋಗದೆ ಬೇರೆ ಕಡೆಗೆ ಹೋಗಿರುವ ಘಟನೆ ಗುರುವಾರ ನಡೆದಿದೆ.

ಬಿಹಾರದ ಬೇಗುಸರಾಯ್ ಜಿಲ್ಲೆಯ ಬಛವಾಡಾದಲ್ಲಿ ಪ್ರಕರಣ ನಡೆದಿದೆ. ಗುವಾಹಟಿಯಿಂದ ಜಮ್ಮುತವಿ ನಡುವೆ ಓಡಾಡುವ ಅಮರನಾಥ ಎಕ್ಸ್‌ಪ್ರೆಸ್ ರೈಲು ಬಛವಾಡಾ ರೈಲ್ವೆ ಜಂಕ್ಷನ್‌ ಬಳಿಕ ಸಮಸ್ತಿಪುರಕ್ಕೆ ಹೊರಡಬೇಕಿತ್ತು. ಆದರೆ ರೈಲು ಹಾಜಿಪುರ ಮಾರ್ಗದಲ್ಲಿ ಸುಮಾರು ಮೂರು ಕಿಲೋಮೀಟರ್ ನಡೆದು ವಿದ್ಯಾಪತಿನಗರ ತಲುಪಿತು. ರೈಲು ತನ್ನ ನಿಗದಿತ ಹಳಿಯಲ್ಲಿ ಸಂಚರಿಸದೆ ಬೇರೆ ಮಾರ್ಗದಲ್ಲಿ ಹೋಗುತ್ತಿರುವುದನ್ನು ರೈಲು ಚಾಲಕ ಸಕಾಲದಲ್ಲಿ ಗಮನಿಸಿದ್ದಾರೆ. ಇಲ್ಲವಾದಲ್ಲಿ ನೂರಾರು ಪ್ರಯಾಣಿಕರು ಗಂಡಾಂತರಕ್ಕೆ ಸಿಲುಕುವ ಸಾಧ್ಯತೆ ಇತ್ತು.

ಪ್ರಯಾಣಿಕರ ಪ್ರಾಣ ಉಳಿಸಿದ್ದು ರೈಲು ಚಾಲಕ:

ಅಮರನಾಥ್ ಎಕ್ಸ್ ಪ್ರೆಸ್ ರೈಲನ್ನು ಚಲಾಯಿಸುತ್ತಿದ್ದ ಚಾಲಕ ತನ್ನ ರೈಲು ರಾಂಗ್ ರೂಟ್ ನಲ್ಲಿ ಹೋಗುತ್ತಿರುವುದನ್ನು ಕಂಡ ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ತಕ್ಷಣ ಬಛವಾಡಾ ನಿಲ್ದಾಣವನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗ ರೈಲು ರಾಂಗ್ ರೂಟ್ ನಲ್ಲಿ ಹೋಗುತ್ತಿರುವುದು ಪತ್ತೆಯಾಗಿದೆ. ವಾಸ್ತವವಾಗಿ ಈ ರೈಲು ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬಛವಾಡಾ ಜಂಕ್ಷನ್‌ನ ಲೈನ್ ಸಂಖ್ಯೆ-8 ಮೂಲಕ ಸಂಚರಿಸಬೇಕಿತ್ತು.

ರೈಲು ರಾಂಗ್ ರೂಟ್ ಹಿಡಿದಿದ್ದು ಹೇಗೆ?

ರೈಲ್ವೆ ಮಾಹಿತಿಯ ಪ್ರಕಾರ ಅಮರನಾಥ ಎಕ್ಸ್‌ಪ್ರೆಸ್ ಬರೌನಿಯಿಂದ ಬೆಳಗ್ಗೆ 4.45ಕ್ಕೆ ಹೊರಟಿದೆ. ಆ ಬಳಿಕ ನೇರವಾಗಿ ಸಮತಿಪುರದಲ್ಲಿ ನಿಲುಗಡೆಯಾಗಬೇಕಿತ್ತು. ಆದರೆ ಇದು ಬೆಳಿಗ್ಗೆ 5.15 ಕ್ಕೆ ಬಛವಾಡಾದ ಮೂಲಕ ಹಾದುಹೋಗಿದೆ. ಅಲ್ಲಿ ಬಛವಾಡಾ ಜಂಕ್ಷನ್‌ನಲ್ಲಿ ಅಮರನಾಥ್ ಎಕ್ಸ್‌ಪ್ರೆಸ್ ಅನ್ನು ಲೈನ್ ಸಂಖ್ಯೆ 4 ರ ಬದಲಿಗೆ ಲೈನ್ ಸಂಖ್ಯೆ 8 ಕ್ಕೆ ಬದಲಾಯಿಸಲಾಗಿದೆ. ಆದರೆ ಬಛವಾಡಾ-ಹಾಜಿಪುರ ಮಾರ್ಗದ ರೈಲುಗಳು ಬಛವಾಡಾ ಜಂಕ್ಷನ್‌ನ ಲೈನ್ ಸಂಖ್ಯೆ 7 ಮತ್ತು 8 ರಿಂದ ಮಾತ್ರ ಕಾರ್ಯನಿರ್ವಹಿಸುತ್ತವೆ. ಲೈನ್ ಸಂಖ್ಯೆ 8 ರ PAT ರಚನೆಯಿಂದಾಗಿ, ರೈಲು ಬರೌನಿ ಸಮಸ್ತಿಪುರ್ ಮಾರ್ಗದ ಬದಲಿಗೆ ಬಛವಾಡಾ-ಹಾಜಿಪುರ ರೈಲು ವಿಭಾಗದಲ್ಲಿ ಚಲಿಸಿದೆ.

To read in Hindi Click here

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *