‘ನೂರು ಜನ್ಮಕ್ಕೂ..’ ಪತ್ನಿ ದೀಪಿಕಾ ಗೋಸ್ಕರ ರಣ್​ವೀರ್ ಸಿಂಗ್ ಉಪವಾಸ..!

ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಕರ್ವಾ ಚೌಥ್ ಹಬ್ಬವನ್ನು ಉತ್ತರ ಭಾರತದ ಮಂದಿ ಆಚರಿಸುತ್ತಾರೆ. ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬಾಲಿವುಡ್​ ಮಂದಿ ಕರ್ವಾ ಚೌಥ್ ಹಬ್ಬವನ್ನೂ ಜೋರಾಗಿಯೇ ಆಚರಿಸುತ್ತಾರೆ. ಈ ಹಬ್ಬದಂದು ಪತ್ನಿಯರು ತಮ್ಮ ಪತಿಗೊಸ್ಕರ ಉಪವಾಸವಿದ್ದು, ರಾತ್ರಿ ಪೂಜೆ ಬಳಿಕ ಚಂದ್ರನನ್ನು ನೋಡಿ ನಂತರ ಆಹಾರ ಸೇವಿಸಬೇಕು.

ಇನ್ನು ಬಾಲಿವುಡ್​ನ ಖ್ಯಾತ ​ ದಂಪತಿಗಳು ಈ ಹಬ್ಬವನ್ನು ಆಚರಿಸುತ್ತಾರೆ. ಆದರಂತೆ ಬಾಲಿವುಡ್​ ಸ್ಟಾರ್​ ದಂಪತಿ ನಟಿ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್​ ಕೂಡ ಈ ಹಬ್ಬವನ್ನು ಆಚರಿಸಿದ್ದಾರೆ. ಆದರೆ ವಿಶೇಷ ಅಂದರೆ ದೀಪಿಕಾ ಬದಲು ರಣ್​ವೀರ್​ ಉಪವಾಸ ಮಾಡುತ್ತಾರಂತೆ.

ಹೌದು, ನಟ ರಣ್​ವೀರ್​ ಸಿಂಗ್​ ಕರ್ವಾ ಚೌಥ್ ಹಬ್ಬದಂದು ತಮ್ಮ ಪತ್ನಿ ದೀಪಿಕಾಗಾಗಿ ಉಪವಾಸ ಮಾಡುತ್ತಾರೆ ಅಂತ ರಣ್​ವೀರ್​ ಸಿಂಗ್​ ತಾವು ನಡೆಸಿಕೊಡುವ ಶೋ ವೊಂದರಲ್ಲಿ ಹೇಳಿದ್ದಾರೆ. ಏಳೇಳು ಜನ್ಮಕ್ಕೂ ದೀಪಿಕಾರನ್ನೆ ನನ್ನ ಪತ್ನಿಯಾಗಬೇಕು ಎಂಬ ಕಾರಣಕ್ಕೆ ನಾನು ದೀಪಿಕಾಗಾಗಿ ಉಪವಾಸ ಮಾಡುತ್ತೇನೆ ಅಂತ ರಣ್​ವೀರ್​ ಸಿಂಗ್​ ಹೇಳಿದ್ದಾರೆ.

News First Live Kannada

Leave a comment

Your email address will not be published. Required fields are marked *