ಲಕ್ನೋ: ನೆರೆಮನೆಯ ಗಂಡ, ಹೆಂಡತಿ ಜಗಳ ಬಿಡಿಸಲು ಹೋದ ಯುವಕನೊಬ್ಬ ಅನ್ಯಾಯವಾಗಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಪ್ರೇಮನಗರದಲ್ಲಿ ನಡೆದಿದೆ.

ಅರ್ಜುನ್(24) ಮೃತನಾಗಿದ್ದಾನೆ. ನವೀನ್ ಕುಮಾರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಕೆಲಸ ಕಳೆದುಕೊಂಡಿದ್ದ ನವೀನ್ ಕುಮಾರ್ ತನ್ನ ಹೆಂಡತಿ ದೀಪಮಾಲಾ ಜೊತೆಗೆ ಜಗಳವಾಡುತ್ತಿದ್ದನು. ಅವರ ಜಗಳ ಬಿಡಿಸಲು ಅರ್ಜುನ್ ಹೋಗಿದ್ದಾನೆ. ಆದರೆ ಈ ವೇಳೆ ನವೀನ್ ಕುಮಾರ್ ಅರ್ಜುನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅರ್ಜುನ್‍ಗೆ ತೀವ್ರ ರಕ್ತಸ್ರಾವವಾಗಿದೆ.

ಗಾಯಗೊಂಡಿರುವ ಅರ್ಜುನ್‍ನನ್ನು ಅವರ ಕುಟುಂಬ ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ಯಿತು. ದೂರು ನೀಡಿದ ನಂತರ, ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅರ್ಜುನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಆರೋಪಿ ನವೀನ್‍ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತಲೆಗೆ ಪೆಟ್ಟಾಗಿ ಮೃತಪಟ್ಟಿರುವುದು ಕಂಡುಬರುತ್ತದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಎಂದು ಬರೇಲಿ ಎಸ್‍ಎಸ್‍ಪಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.

The post ನೆರೆಮನೆ ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ appeared first on Public TV.

Source: publictv.in

Source link