ತಿರುವನಂತಪುರಂ: ನೆರೆಮನೆ ಮಗುವಿನ ಪ್ರಾಣವನ್ನು ಕಾಪಾಡಲು ಹೋಗಿ ತನ್ನ ಪ್ರಾಣವನ್ನು ಯುವತಿ ಕಳೆದುಕೊಂಡಿರುವ ಘಟನೆ ಕೇರಳದ ಮಟ್ಟನೂರ್ ನಲ್ಲಿ ನಡೆದಿದೆ.

ಅಮೃತಾ(25) ಮೃತಳಾಗಿದ್ದಾಳೆ. ನಿನ್ನೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನೆರೆಮನೆಯ ಮಗುವಿನ ಪ್ರಾಣ ಉಳಿಸಲು ಹೋಗಿ ಅಮೃತಾ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ.

ನದಿಗೆ ನೆರೆಮನೆಯ ಮಗು ಬಿದ್ದಿದೆ. ಇದನ್ನು ಕಂಡ ಅಮೃತಾ ನೀರಿಗೆ ಹಾರಿದ್ದಾಳೆ. ಆದರೆ ಸುಳಿಗೆ ಸಿಲುಕಿ ಪ್ರಾಣವನ್ನು ಬಿಟ್ಟಿದ್ದಾಳೆ. ಅದೃಷ್ಟವಶಾತ್ ಮಗು ಪ್ರಾಣಾಪಯಾದಿಂದ ಪಾರಾಗಿದೆ. ಅಮೃತಾ ಮುಂಡೇರಿ ಪ್ರೌಢಶಾಲೆಯ ಲ್ಯಾಬ್ ಸಹಾಯಕ ಸಿ ಬಾಲಕೃಷ್ಣನ್ ಅವರ ಪುತ್ರಿಯಾಗಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

The post ನೆರೆಮನೆ ಮಗುವಿನ ಪ್ರಾಣ ಉಳಿಸಿ ಪ್ರಾಣ ಬಿಟ್ಟ ಯುವತಿ appeared first on Public TV.

Source: publictv.in

Source link