ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟನಾಗಿ, ಬಹುತೇಕ ಎಲ್ಲಾ ಭಾಷೆಗಳಲ್ಲಿ ಮಿಂಚಿದ ಸೂಪರ್ ಸ್ಟಾರ್ ಪ್ರಕಾಶ್ ರೈ. ನಮ್ಮ ಕನ್ನಡದ ಸೊಗಡು, ಸೊಬಗಿನ ರಂಗಕರ್ಮಿ ಹೀಗೆ ನ್ಯಾಷನಲ್ ಲೆವೆಲ್ನಲ್ಲಿ ಮಿಂಚ್ತಿರೋದು ನಿಜಕ್ಕೂ ಖುಷಿಯ ವಿಚಾರ. ಸದ್ಯ ಆಂಧ್ರ, ಚೆನ್ನೈ ಹಾಗೂ ಕರ್ನಾಟಕ ಮೂರೂ ಕಡೆ ಮನೆ ಮಾಡಿ, ಚಿತ್ರರಂಗದ ಶಕ್ತಿಯಾಗಿರೋ ರೈ, ಆಂಧ್ರದಲ್ಲೇ ಹತ್ತಾರು ಸಾಮಾಜಿಕ ಕಾರ್ಯಗಳನ್ನೂ ಮಾಡಿದ್ರು. ಶಾಲೆಗಳನ್ನ ದತ್ತು ತೆಗೆದುಕೊಂಡಿದ್ರು. ಇದೀಗ, ಪ್ರಕಾಶ್ ರೈ ಪಕ್ಕದ ಆಂಧ್ರದಲ್ಲಿ ಚುನಾವಣಾ ಅಖಾಡಕ್ಕೆ ನಿಲ್ಲಲು ಸಜ್ಜಾಗಿದ್ದಾರೆ.

ಕನ್ನಡ ರೈ ಅವ್ರಿಗೆ ಮೆಗಾಸ್ಟಾರ್ ಚಿರಂಜೀವಿ ಕೂಡ ಸಾಥ್ ಕೊಡ್ತಿರೋದು ಟಾಕ್ ಆಫ್ ದ ಟೌನ್ ಆಗಿದೆ. ಅರೇ.. ಪ್ರಕಾಶ್ ರೈ ಆಂಧ್ರ ಪಾಲಿಟಿಕ್ಸ್​​ಗೆ ಕಾಲಿಡ್ತಿದ್ದಾರಾ..? ಅದಕ್ಕೆ ಮೆಗಾ ಫ್ಯಾಮಿಲಿ ಬೆನ್ನೆಲುಬಾಗಿ ನಿಲ್ತಿದೆಯಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಅದು ಫಿಲ್ಮ್ ಪಾಲಿಟಿಕ್ಸ್.

ಬೆಂಗಳೂರಿನಲ್ಲಿ ಠೇವಣಿ ಕಳೆದುಕೊಂಡಿದ್ದ ರೈ

ಕಳೆದ ಕರ್ನಾಟಕ ಲೋಕಸಭಾ ಎಲೆಕ್ಷನ್ನಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಹುಭಾಷಾ ನಟ ಪ್ರಕಾಶ್ ರೈ, ಸೋಲು ಕಂಡಿದ್ರು. ಹಣ ಖರ್ಚು ಮಾಡಿ, ಎಲೆಕ್ಷನ್ ಕ್ಯಾಂಪೇನ್ ಮಾಡಿದ್ದ ರೈಗೆ 2.41 ಪರ್ಸೆಂಟ್ ವೋಟ್ಗಳಷ್ಟೇ ಬಂದಿದ್ವು..‘ಮೂವಿ ಆರ್ಟಿಸ್ಟ್ ಅಸೋಸಿಯೇಷನ್’ನ ‘ಮಾ’ಗೆ ಚುನಾವಣೆ ನಡೆಯಲಿದ್ದು, ಅದ್ರ ಅಧ್ಯಕ್ಷ ಸ್ಥಾನಕ್ಕೆ ರೈ ನಿಲ್ಲೋದು ಪಕ್ಕಾ ಆಗಿದೆ. ಇನ್ನು ಪ್ರಕಾಶ್ ರೈಗೆ ಮೋಹನ್ ಬಾಬು ಪುತ್ರ ಮಂಚು ವಿಷ್ಣು ವಿರೋಧವಾಗಿ ಸ್ಫರ್ಧಿಸುತ್ತಿದ್ದಾರೆ. ರಾಜಕೀಯ ಚುನಾವಣೆಗಿಂತ ಹೆಚ್ಚು ರಂಗೇರಲಿದೆ ಈ ‘‘ಮಾ’’ ಎಲೆಕ್ಷನ್ಸ್..

ಅಂದಹಾಗೆ ತೆಲುಗು ಚಿತ್ರರಂಗದಿಂದ ಸುಮಾರು ಆರು ಬಾರಿ ಬ್ಯಾನ್ ಆಗಿ, ಭಾರೀ ಮುಖಭಂಗ ಎದುರಿಸಿದ್ದ ಪ್ರಕಾಶ್ ರೈ, ಇದೀಗ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆಯ ಚುನಾವಣಾ ಅಖಾಡದಲ್ಲಿರೋದು ವಿಶೇಷ. ಪವನ್ ಕಲ್ಯಾಣ್ರ ಜಲ್ಸಾ, ಜೂನಿಯರ್ ಎನ್ಟಿಆರ್ ಜೊತೆಗಿನ ಕಂತ್ರಿ ಹಾಗೂ ಅಲ್ಲು ಅರ್ಜುನ್ ಜೊತೆಗಿನ ಪೊಗರು ಚಿತ್ರಗಳ ಶೂಟಿಂಗ್ ಸಮಯದಲ್ಲಿ ಆದ ಬೆಳವಣಿಗೆಗಳು ಇವ್ರನ್ನ ಬ್ಯಾನ್ ಮಾಡುವಂತೆ ಮಾಡಿತ್ತು.

ಇನ್ನು ಕಾಂಟ್ರವರ್ಸಿಗಳಲ್ಲೇ ಬೆಳೆದು ಬಂದ ರೈ, ಸದಾ ಮೋದಿಯ ಐಡಿಯಾಲಜಿಯನ್ನ ತೆಗಳುತ್ತಲೇ ಬಂದರು. ಗೌರಿ ಲಂಕೇಶ್ ಹತ್ಯೆಯ ಬಳಿಕ ಜಸ್ಟ್ ಆಸ್ಕಿಂಗ್ ಅನ್ನೋ ಹೆಸ್ರಲ್ಲಿ ಪ್ರಶ್ನೆ ಮಾಡೋ ಅಭಿಯಾನ ಶುರು ಮಾಡಿದ್ರು. ಇವ್ರ ಕೊಡುಗೆ ಚಿತ್ರರಂಗದ ನಿರೀಕ್ಷೆಗೂ ಮೀರಿದ್ದು. ಹಾಗಾಗಿ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ ಸೂಕ್ತ ವ್ಯಕ್ತಿಯಾಗಿದ್ದು, ಅಲ್ಲಿನ ಎಲೆಕ್ಷನ್ನಲ್ಲಿ ಗೆದ್ದು, ತೆಲುಗು ಇಂಡಸ್ಟ್ರಿಯ ಏಳಿಗೆಗೆ ಮತ್ತಷ್ಟು ಶ್ರಮಿಸಲಿ ಅನ್ನೋದು ಎಲ್ಲರ ಆಶಯ

The post ನೆರೆಯ ಆಂಧ್ರದಲ್ಲಿ ಎಲೆಕ್ಷನ್​​​ ಅಖಾಡಕ್ಕೆ ಪ್ರಕಾಶ್ ರೈ..! ಸಾಥ್ ಕೊಡ್ತಾರಾ ಮೆಗಾಸ್ಟಾರ್? appeared first on News First Kannada.

Source: newsfirstlive.com

Source link