ನೆರೆ ಪ್ರದೇಶಗಳಿಗೆ ಸಿಎಂ ನಂತ್ರ ಸಿದ್ದರಾಮಯ್ಯ ಭೇಟಿ.. ಕ್ರೆಡಿಟ್ ಪೈಪೋಟಿಗೆ ಬಿದ್ರಾ ಜನನಾಯಕರು?


ಬೆಂಗಳೂರು: ರಾಜ್ಯದಲ್ಲಿ ವರುಣ ಆರ್ಭಟಿಸಿ ಈಗ ಸ್ವಲ್ಪ ಬಿಡುವು ಕೊಟ್ಟಿದ್ದಾನೆ. ಆದ್ರೆ, ಮಳೆಯ ಅಬ್ಬರದಿಂದ ಉಂಟಾಗಿರೋ ಹಾನಿ ಮಾತ್ರ ಕಣ್ಣೀರಿನ ಕಹಾನಿ ಹೇಳುತ್ತಿದೆ. ಈ ಮಧ್ಯೆ ಇಷ್ಟು ದಿನ ಯಾತ್ರೆಗಳ ರಾಜಕೀಯದಲ್ಲಿ ಮುಳುಗಿದ್ದ ಸರ್ಕಾರ, ವಿಪಕ್ಷಗಳು ದಿಢೀರ್ ಅಂತ ಫೀಲ್ಡಿಗಿಳಿದಿವೆ. ಪರಿಷತ್ ಚುನಾವಣೆಯ ವೇಳೆ ಮತಬ್ಯಾಂಕ್‌ಗಾಗಿ ಪೈಪೋಟಿಗೆ ಇಳಿದಿದ್ದಾರೆ.

ಚುನಾವಣೆ ಹೊತ್ತಲ್ಲೇ ವರುಣ ಆರ್ಭಟದಿಂದ ಜನ ತತ್ತರ
ಮಳೆಯಿಂದ ಹಾನಿಗೀಡಾದ ಪ್ರದೇಶದಲ್ಲಿದ್ಯಾ ಮತ​​ಬ್ಯಾಂಕ್?
ಕುಂಭದ್ರೋಣ ಮಳೆಗೆ ರಾಜ್ಯವೇ ನಲುಗಿ ಹೋಗಿದೆ.. ಬೆಳೆಗಳೆಲ್ಲಾ ನಾಶವಾಗಿ ಅನ್ನದಾತ ಪರಿತಪಿಸುತ್ತಿದ್ದಾನೆ. ವರ್ಷದಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಇಷ್ಟು ದಿನ ರೈತರ ಗೋಳನ್ನ ಆಲಿಸದ ಜನಪ್ರತಿನಿಧಿಗಳು ಪರಿಷತ್‌ ಚುನಾವಣೆ ಬೆನ್ನಲ್ಲೇ ಪ್ರವಾಹ ಸ್ಥಳಗಳಿಗೆ ಲಗ್ಗೆ ಇಡ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಸ್ಥಳಗಳು ರಾಜಕಾರಣಿಗಳ ಪಿಕ್​​ನಿಕ್​​​ ಸ್ಪಾಟ್​​ಗಳಾದಗಿ ಪರಿವರ್ತನೆ ಆಗ್ತಿವೆ. ಜೊತೆಗೆ ಮಿನಿ ಪರಿಷತ್ ಫೈಟ್‌ನ ಸಮಯದಲ್ಲೇ ಜನರ ಕಷ್ಟಗಳನ್ನೇ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಲು ಪಕ್ಷಗಳು ಪೈಪೋಟಿಗೆ ಇಳಿದಿವೆ.

ಸಿಎಂ ಬಳಿಕ ಸಿದ್ದು ರೌಂಡ್ಸ್​​
ಚಿಕ್ಕಬಳ್ಳಾಪುರ, ಕೋಲಾರದ ಮಳೆ ಹಾನಿ ಪ್ರದೇಶಗಳಿಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟಿದ್ದಾರೆ. ವಿಪಕ್ಷಗಳ ಟೀಕೆಗೆ ಎಚ್ಚೆತ್ತ ನೆರೆ ಪ್ರದೇಶಕ್ಕೆ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಮಳೆ ಹಾನಿ ಪ್ರದೇಶಗಳ ವೀಕ್ಷಣೆ ತೆರಳಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನ ಸ್ವೀಕರಿಸುತ್ತಿದ್ದಾರೆ.

ಇನ್ನು ಮಳೆ ಆರ್ಭಟಿಸುತ್ತಿರೋ ಹೊತ್ತಿನಲ್ಲೇ ರಾಜ್ಯದಲ್ಲಿ ಪರಿಷತ್ ಮಿನಿ ವಾರ್ ಕೂಡಾ ಆರಂಭವಾಗಿದೆ. ಹೀಗಾಗಿ ಇದೇ ಸಂದರ್ಭವನ್ನ ಬಳಸಿಕೊಂಡು ಎಲೆಕ್ಷನ್‌ನಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಿಗೆ ಬಿದ್ದಿವೆ. ಅಷ್ಟಕ್ಕೂ ಕೈ-ಕಮಲದ ಈ ಪೈಪೋಟಿಗೆ ಕಾರಣವೇನು ಅಂತಾ ನೋಡೋದಾದ್ರೆ,

ಪೈಪೋಟಿಗೆ ಬಿದ್ದಿದ್ದೇಕೆ ನಾಯಕರು?

  • ಕಾರಣ 1 : ಪರಿಷತ್ ಚುನಾವಣೆ ಅಷ್ಟೇ ಮುಖ್ಯ ಅಲ್ಲ, ಜನರ ಜೀವನ ಮುಖ್ಯ
  • ಕಾರಣ 2 : ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಜನಹಿತ ಮುಖ್ಯ ಎಂಬ ಸಂದೇಶ
  • ಕಾರಣ 3 : ಪರಿಷತ್ ಚುನಾವಣೆ ವೇಳೆ ಹಿನ್ನಡೆ ಆಗೋದು ಬೇಡ ಎಂಬ ಲೆಕ್ಕ
  • ಕಾರಣ 4 : ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮತದಾರರ ಮನಗೆಲ್ಲಬೇಕು
  • ಕಾರಣ 5 : ಇಂಥ ಸೂಕ್ಷ್ಮ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಪಕ್ಷಗಳು ನಿರ್ಧಾರ ಮಾಡಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡ್ತಿವೆ ಎನ್ನಲಾಗಿದೆ.

ಒಟ್ಟಾರೆ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡೋ ನಾಯಕರು ಪ್ರಾಮಾಣಿಕವಾಗಿ ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಅದನ್ನ ಬಿಟ್ಟು ಮತಬ್ಯಾಂಕ್ ರಾಜಕಾರಣ ಮಾಡಿದ್ದೇ ಆದ್ರೆ, ಅದಕ್ಕೆ ಪರಿಷತ್ ಚುನಾವಣೆಯಲ್ಲಿ ಮತದಾರ ತಕ್ಕ ಪಾಠವನ್ನ ಕಲಿಸೋದಂತೂ ಪಕ್ಕ.

ವಿಶೇಷ ವರದಿ: ಶಿವಪ್ರಸಾದ್, ನ್ಯೂಸ್‌ಫಸ್ಟ್‌, ಬೆಂಗಳೂರು

News First Live Kannada


Leave a Reply

Your email address will not be published. Required fields are marked *