ನೆಲಮಂಗಲ: ಅಂತ್ಯಸಂಸ್ಕಾರ ವ್ಯವಸ್ಥೆಯಲ್ಲೂ ಬಿಜೆಪಿ ಶೋಕಿಗೆ ಇಳಿದಿದೆ. ಕೋವಿಡ್‍ನಿಂದ ಮೃತಪಟ್ಟವರ ಉಚಿತ ಅಂತ್ಯಸಂಸ್ಕಾರಕ್ಕೆ ಗಿಡ್ಡೇನಹಳ್ಳಿಯಲ್ಲಿ ಸ್ಮಶಾನ ನಿರ್ಮಿಸಲಾಗಿದೆ.

ಈ ಸ್ಮಶಾನಕ್ಕೆ ಹೋಗುವ ದಾರಿಯ ಮಾರ್ಗವನ್ನ ಸೂಚಿಸುವ ಫ್ಲೆಕ್ಸ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್ ಅಶೋಕ್, ಬಿಡಿಎ ಅಧ್ಯಕ್ಷ ಎಸ್. ಆರ್ ವಿಶ್ವನಾಥ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಫೋಟೊ ಹಾಕಲಾಗಿತ್ತು. ಅಲ್ಲದೆ ಕೊರೊನಾ ಶವಸಂಸ್ಕಾರಕ್ಕೆ ಬರುವ ಸಂಬಂಧಿಕರು, ಅಂಬುಲೆನ್ಸ್ ಚಾಲಕರು ಹಾಗೂ ಶವಸಂಸ್ಕಾರ ಮಾಡುವ ಸಿಬ್ಬಂದಿಗೆ ಚಿತಾಗಾರದ ಬಳಿ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಬರೆಯಲಾಗಿತ್ತು.

ಅಮಯಾಕರ ಪ್ರಾಣ ಉಳಿಸಲಾಗದ ಸರ್ಕಾರಕ್ಕೆ, ಈ ಶೋಕಿ ಯಾಕೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಹಿಗ್ಗಾಮುಗ್ಗ ಝಾಡಿಸಿದ್ದಾರೆ. ಈ ಫೋಟೋ ವೈರಲ್ ಆದ ಬೆನ್ನಲ್ಲೇ ಫ್ಲೆಕ್ಸ್ ಅನ್ನು ತೆರವು ಮಾಡಲಾಗಿದೆ.

The post ನೆಲಮಂಗಲ ಬಳಿ ಬಿಜೆಪಿಯ ಪೋಸ್ಟರ್ ಶೋಕಿ- ಫೋಟೋ ವೈರಲ್ ಆಗ್ತಿದ್ದಂತೆ ಫ್ಲೆಕ್ಸ್ ತೆರವು appeared first on Public TV.

Source: publictv.in

Source link