ಹೈದರಾಬಾದ್​: ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂಗೆ ಸೇರಿದ ಆನಂದಯ್ಯ ಕೊರೊನಾ ಔಷಧಿಗೆ ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ. ಕಣ್ಣಿಗೆ ಹಾಕುವ ಡ್ರಾಪ್ಸ್​ ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಔಷಧಿಗಳಿಗೆ ಅನುಮತಿ ನೀಡಲಾಗಿದೆ. ಆನಂದಯ್ಯ ಅವರು ನೀಡುವ ಪಿ, ಎಲ್​​​, ಎಫ್​​ ಔಷಧಿಗೆ ಅನುಮತಿ ನೀಡಿದ ಸರ್ಕಾರ ‘ಕೆ’ ಎಂಬ ಔಷಧಿಯನ್ನು ಕಮಿಟಿ ಎದುರು ತೋರಿಸಿದ ಕಾರಣ ಅನುಮತಿಯನ್ನು ನಿರಾಕರಿಸಲಾಗಿದೆ.

ಆಯುಷ್ ಇಲಾಖೆಯ ಸಿಸಿಆರ್​ಎಎಸ್ ವರದಿ ಅನ್ವಯ ಆಂಧ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಈ ಔಷಧಿಗಳಿಂದ ಸೋಂಕು ಕಡಿಮೆಯಾಗೋ ಗ್ಯಾರಂಟಿ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಹೀಗಾಗಿ ಈ ಔಷಧಿಗಳ ಜೊತೆ ವೈದ್ಯರು ನೀಡುವ ಔಷಧಿಗಳನ್ನು ಬಳಸುವಂತೆ ಸರ್ಕಾರ ಸೂಚನೆ ನೀಡಿದೆ.

ಕಣ್ಣಿಗೆ ಹಾಕುವ ಔಷಧಿಯ ಬಗ್ಗೆ ವರದಿ ಬರುವುದು ಇನ್ನೂ ಬಾಕಿ ಇದೆ ಎಂದು ಸರ್ಕಾರ ಹೇಳಿದೆ. ಈ ವರದಿ ಬರಲು 2 ರಿಂದ 3 ವಾರಗಳ ಸಮಯ ಆಗಲಿದೆ ಎಂದು ವಿವರಿಸಿದೆ. ಇದೇ ವೇಳೆ ಆನಂದಯ್ಯ ಅವರ ಔಷಧಿ ಪಡೆಯಲು ಕೊರೊನಾ ಪಾಸಿಟಿವ್ ಇರುವ ರೋಗಿಗಳು ಕೃಷ್ಣ ಪಟ್ಟಣಂಗೆ ಬರುವುದು ಬೇಡ. ರೋಗಿಗಳ ಬದಲಾಗಿ ಅವರ ಕುಟುಂಬ ಸದಸ್ಯರು, ಇತರರು ಬಂದು ಔಷಧಿ ಪಡೆದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ. ಔಷಧಿ ಪಡೆಯುವ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಸೂಚಿಸಿದೆ.

The post ನೆಲ್ಲೂರು ಆನಂದಯ್ಯನ ಆಯುರ್ವೇದ ಔಷಧಿಗೆ ಜಗನ್​ ಸರ್ಕಾರದ ಗ್ರೀನ್​​ ಸಿಗ್ನಲ್​ appeared first on News First Kannada.

Source: newsfirstlive.com

Source link