ಹೊಸ ಹೊಸ ಅವತಾರಗಳನ್ನೆತ್ತಿ ಜಗತ್ತನ್ನ ಕಾಡ್ತಿರೋ ಕೊರೊನಾ ಚಿಕಿತ್ಸೆಗೆ ಆಲೋಪತಿ ಔಷಧಿಗಳು, ಲಸಿಕೆಗಳನ್ನಷ್ಟೇ ಬಳಸಲಾಗ್ತಿವೆ. ಆದ್ರೆ ಆಯುರ್ವೇದದಲ್ಲೂ ಚಿಕಿತ್ಸೆ ನೀಡಬಹುದು ಅನ್ನೋ ಬಗ್ಗೆ ವಾದ ನಡೀತಾನೇ ಇದೆ. ಇಷ್ಟಾದ್ರೂ ಇದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಆದ್ರೆ ನಾಟಕೀಯ ಬೆಳವಣಿಗೆ ಅನ್ನೋ ರೀತಿ ಆಂಧ್ರ ಸರ್ಕಾರ ನಾಟಿ ವೈದ್ಯ ಆನಂದಯ್ಯ ಅನ್ನೋರ ಆಯುರ್ವೇದ ಔಷಧಿಗೆ ಪರ್ಮಿಷನ್‌ ನೀಡಿದೆ.

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ಕೃಷ್ಣಪಟ್ಟಣಂ ಗ್ರಾಮದ ಆನಂದಯ್ಯ ಎಂಬುವವರು, ಕೊರೊನಾಗೆ ಆಯುರ್ವೇದದ ಔಷಧಿ ನೀಡ್ತಿದ್ದರು. ಇದನ್ನ ಪಡೆಯೋದಕ್ಕಾಗಿಯೇ ಜನ ದಿನವೀಡಿ ಕ್ಯೂನಲ್ಲಿ ನಿಲ್ಲುತ್ತಿದ್ರು. ಈ ನಡುವೆ ಈ ಬಗ್ಗೆ ದೊಡ್ಡ ಸದ್ದಾಗಿ ಔಷಧಿ ನೀಡೋದನ್ನ ನಿಲ್ಲಿಸೋದಕ್ಕೂ ಆದೇಶವಾಗಿತ್ತು. ಇದೀಗ ಅಚ್ಚರಿ ಎಂಬಂತೆ ಜಗನ್​ ಸರ್ಕಾರ ರಾಜ್ಯದಲ್ಲಿ ಆನಂದಯ್ಯರ ಆಯುರ್ವೇದ ಔಷಧಿ ಬಳಕೆಗೆ ಗ್ರೀನ್​ ಸಿಗ್ನಲ್ ಕೊಟ್ಟಿದೆ.

ಆನಂದಯ್ಯ ನೀಡ್ತಿದ್ದ ಆಯುರ್ವೇದದ ಔಷಧಿಯ ಪರೀಕ್ಷೆ ನಡೆಸಲು ಐಸಿಎಂಆರ್​ಗೆ ಕಳಿಸಲಾಗಿತ್ತು. ಈ ಬೆನ್ನಲ್ಲೇ ಆನಂದಯ್ಯರ ಮೆಡಿಸನ್​ ಬಳಸೋದಕ್ಕೆ ಜಗನ್ ಸರ್ಕಾರ ಅಧಿಕೃತ ಅನುಮತಿ ನೀಡಿದೆ.  ಪಿ.ಎಲ್.ಎಫ್ ಮಾದರಿಯ ಔಷಧಿಯನ್ನ ಬಳಸೋದಕ್ಕಷ್ಟೇ ಒಪ್ಪಿಗೆ ನೀಡಲಾಗಿದ್ದು,  ಆಯುಷ್ ಇಲಾಖೆಯ ಸಿಸಿಆರ್​ಎಎಸ್ ವರದಿ ಆಧರಿಸಿ ಆಂಧ್ರ ಸರ್ಕಾರ ಸದ್ಯ ಪರ್ಮಿಷನ್ ನೀಡಿದೆ.  ಇನ್ನು,  ಈ ಔಷಧಿಗಳಿಂದ ಸೋಂಕು ವಾಸಿಯಾಗೋ ಗ್ಯಾರಂಟಿ ಇಲ್ಲ, ಹೀಗಾಗಿ ಇದರ ಜೊತೆ ಇತರೆ ಔಷಧಿಗಳನ್ನೂ ಬಳಸಬೇಕಾಗುತ್ತೆ ಅಂತಾ ವರದಿಯಲ್ಲಿ ಸೂಚಿಸಲಾಗಿದೆ.

ಇನ್ನು, ಆನಂದಯ್ಯ ಕೊರೊನಾಗೆ ನೀಡೋ ಆಯುರ್ವೇದದ ಔಷಧಿಯನ್ನ ಪ್ರತ್ಯೇಕವಾಗಿ ತಯಾರಿಸಲಾಗುತ್ತೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಗಿಡಮೂಲಿಕೆಗಳನ್ನ ಔಷಧಿಯಲ್ಲಿ ಯಥೇಚ್ಛವಾಗಿ ಬಳಸಲಾಗಿದೆ.

ಆನಂದಯ್ಯ ಫಾರ್ಮುಲಾ

 • ಶುಂಠಿ, ತಾಟಿ ಬೆಲ್ಲ, ಜೇನು, ಅಮೃತ ಬಳ್ಳಿ,
 • ಕಪ್ಪು ಜೀರಿಗೆ, ಕರಿಮೆಣಸು, ಲವಂಗ, ಬೇವು,
 • ನೆರಳೆ ಚಿಗುರು, ಮಾವಿನ ಚಿಗುರು, ನೆಲನೆಲ್ಲಿ
 • ಕೊಂಡ ಪಲ್ಯ ಚೆಟ್ಟು, ಬುಡ್ಡ ಗುಡುಗಲ ಆಕುಲು.

ಕೊರೊನಾ ಕಂಟ್ರೋಲ್​​ಗೆ ಆನಂದಯ್ಯ ನೀಡೋ ಔಷಧಿಯಲ್ಲಿ  ಶುಂಠಿ, ತಾಟಿ ಬೆಲ್ಲ, ಜೇನು, ಹಾಗೂ ಅಮೃತ ಬಳ್ಳಿಯನ್ನ ಪ್ರಮುಖವಾಗಿ ಬಳಸಲಾಗುತ್ತೆ. ಇನ್ನು, ಕಪ್ಪು ಜೀರಿಗೆ, ಕರಿಮೆಣಸು,  ಲವಂಗ, ಹಾಗೂ ಬೇವನ್ನೂ ಅಗತ್ಯ ಪ್ರಮಾಣದಲ್ಲಿ ಬೆರಸಲಾಗುತ್ತೆ. ನೆರಳೆ ಚಿಗುರು, ಮಾವಿನ ಚಿಗುರು ಹಾಗೂ ನೆಲನೆಲ್ಲಿಯನ್ನ ಬಳಸಿರೋದ್ರಿಂದ ದೇಹದಲ್ಲಿ ಸಹಜವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತೆ. ಇನ್ನು, ಕೊಂಡ ಪಲ್ಯ ಚೆಟ್ಟು ಹಾಗೂ ಬುಡ್ಡ ಗುಡುಗಲ ಆಕುಲು ಅನ್ನೋ ಗಿಡಮೂಲಿಕೆಗಳನ್ನೂ ಈ ಆಯುರ್ವೇದದ ಔಷಧಿಯಲ್ಲಿ ಬಳಸಲಾಗುತ್ತೆ,

ಹೀಗೆ ಸಾಕಷ್ಟು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಪಿ.ಎಲ್.ಎಫ್ ಹಾಗೂ ಕೆ ಮಾದರಿಯ 4 ಔಷಧಗಳನ್ನ ಆನಂದಯ್ಯ ತಯಾರಿಸ್ತಾರೆ. ಇದರಲ್ಲಿ ಪಿ.ಎಲ್.ಎಫ್ ಎಂಬ ಮೂರು ಮಾದರಿಗಷ್ಟೇ ಸರ್ಕಾರ ಅನುಮತಿ ನೀಡಿದ್ದು, ಎಷ್ಟು ಪ್ರಮಾಣದಲ್ಲಿ ಬಳಸಬೇಕು ಅನ್ನೋದನ್ನೂ ಸೂಚಿಸಲಾಗಿದೆ.

ಎಷ್ಟು ಪ್ರಮಾಣದಲ್ಲಿ, ಹೇಗೆ ಬಳಸಬೇಕು?

 ‘ಪಿ’ ಮಾದರಿಯ ಔಷಧಿ

 1. ಶ್ವಾಸಕೋಶದ ಶುದ್ಧತೆಗಾಗಿ ಪಿ ಮಾದರಿಯ ಔಷಧಿಯ ಬಳಕೆ
 2. ಸೋಂಕಿತರಿಗೆ ದಿನಕ್ಕೆ ಎರಡರಂತೆ 3 ದಿನಗಳ ಕಾಲ ನೀಡಬೇಕು
 3. ಸೋಂಕು ಕಾಣಿಸಿಕೊಳ್ಳದವರು ದಿನಕ್ಕೆ 2 ಬಾರಿ ಬಳಸಬಹುದು
 4. ಹುರುಳಿ, ಅರಿಶಿನ, ಕಪ್ಪು ಜೀರಿಗೆ, ಮೆಣಸು ಸೇರಿ ಇತರೆ ಬಳಕೆ
 5.  4 ಗಂಟೆ ಜೇನುತುಪ್ಪದೊಂದಿಗೆ ಕುದಿಸಿ. ಮಿಶ್ರಣ ಮಾಡಿ ಬಳಕೆ

 ‘ಎಫ್’ ಮಾದರಿಯ ಔಷಧಿ

 1. ಕೊರೊನಾ ​ ದೃಢಪಟ್ಟವರಿಗೆ ನೀಡಲಾಗುವ ‘ಎಫ್’ ಔಷಧಿ
 2. ಸೋಂಕಿತರಿಗೆ ದಿನಕ್ಕೆ ಎರಡರಂತೆ 3 ದಿನಗಳ ಕಾಲ ನೀಡಬೇಕು
 3. ಒಂದು ಬಕೆಟ್ ಪರಾಗ ಎಲೆ, ಮೆಣಸು, ಕಪ್ಪು ಜೀರಿಗೆ, ಪಟ್ಟಾ,
 4. ಅರಿಶಿನ, ಕೆಂಪುಮೆಣಸು, ಜಾಯಿಕಾಯಿ, 2-3 ಕೆ.ಜಿ ಜೇನುತುಪ್ಪ
 5. ಎಲ್ಲವನ್ನ ಬೆರೆಸಿ ಪುಡಿಮಾಡಿ ಔಷಧಿಯಾಗಿ ನೀಡಲಾಗುತ್ತೆ

 ‘ಎಲ್​’ ಮಾದರಿಯ ಔಷಧಿ

 1. ಸೋಂಕಿತರಿಗೆ ನೀಡಲಾಗುವ  ‘ಎಲ್​’ ಮಾದರಿ ಔಷಧಿ
 2. ದಿನಕ್ಕೆ ಒಮ್ಮೆಯಂತೆ ಎರಡು ದಿನ ಔಷಧಿ ಸೇವಿಸಬೇಕು
 3. ಎಫ್ ಮಾದರಿ ಜೊತೆಗೆ ಎಲ್​​ ಮಾದರಿ ಬಳಸಬೇಕು
 4. ಒಂದು ಬಕೆಟ್ ನೆಲನೆಲ್ಲಿ, ಕರಿಮೆಣಸು, ಪಟ್ಟಾ,
 5. ಕಪ್ಪು ಜೀರಿಗೆ, ಅರಿಶಿನ, ಪಪ್ಪಾಯಿ, ಜಾಯಿಕಾಯಿ
 6. 2-3 ಕೆ.ಜಿ ಜೇನುತುಪ್ಪ ಬೆರೆಸಿ ಪುಡಿಮಾಡಿ ನೀಡಲಾಗುತ್ತೆ

ಹೀಗೆ ಅನುಮತಿ ನೀಡಲಾಗಿರೋ ಆಯುರ್ವೇದದ ಔಷಧಿಯನ್ನ ಪಡೆಯಲು ಈ ವಿಧಾನಗಳನ್ನ ಅನುಸರಿಸಬೇಕಾಗುತ್ತೆ.  ಇದು ಕಡ್ಡಾಯವಲ್ಲ. ಆದ್ರೆ ವೈದ್ಯರು ನೀಡೋ ಇತರೆ ಮೆಡಿಸಿನ್ಸ್​ಗಳ ಜೊತೆಗೆ ಇದನ್ನೂ ನೀಡಬಹುದು. ಇದರಿಂದ ಸೋಂಕಿತರು ಗುಣಮುಖರಾಗುವ ಪ್ರಮಾಣ ಹೆಚ್ಚಾಗುತ್ತೆ. ಇಷ್ಟಾದ್ರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗೋರಿಗೆ ಈ ಔಷಧಿಯನ್ನ ಬಳಕೆ ಮಾಡೋ ನಿರ್ಧಾರವನ್ನ ಆಂಧ್ರ ಸರ್ಕಾರ ವೈದ್ಯರಿಗೆ ಬಿಟ್ಟಿರೋದು ಗಮನಾರ್ಹ.

 

The post ನೆಲ್ಲೂರು ಆನಂದಯ್ಯನ ನಾಟಿ ಔಷಧಿಯ ಸೀಕ್ರೆಟ್ ಏನು..? ಅನುಮತಿ ಸಿಕ್ಕಿದ್ದು ಹೇಗೆ..? appeared first on News First Kannada.

Source: newsfirstlive.com

Source link

Leave a comment