ದಾವಣಗೆರೆ: ಇಷ್ಟುದಿನ ಕೊರೊನಾ ಸೋಂಕಿತರ ಸಹಾಯದ ವಿಚಾರದಲ್ಲಿ ಸುದ್ದಿಯಾಗುತ್ತಿದ್ದ ಶಾಸಕ ರೇಣುಕಾಚಾರ್ಯ ಇದೀಗ ನೇಗಿಲು ಹಿಡಿದ್ದಾರೆ.

ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದ ರೈತ ರಂಗನಾಥ್ ಹೊಲದಲ್ಲಿ ನೇಗಿಲು ಹಿಡಿದು ಬಿತ್ತನೆ ಮಾಡಿದ್ದಾರೆ. ಕೋವಿಡ್​ನಿಂದ ಲಾಕ್​​ಡೌನ್​​ ಜಾರಿಯಾದ ಬಳಿಕ ರಂಗನಾಥ್ ಬೆಂಗಳೂರು ಬಿಟ್ಟು ಊರಿಗೆ ಬಂದಿದ್ದ.
ಬೆಂಗಳೂರು ಜೀವನ ಬೇಸರವಾಗಿ ತಮ್ಮೂರಲ್ಲೇ ಕೃಷಿಯಲ್ಲಿ ತೊಡಗಿದ್ದ ರಂಗನಾಥ್​ರನ್ನ ಇಂದು ರೇಣುಕಾಚಾರ್ಯ ಹುರಿದುಂಬಿಸಿದರು.

ಜಮೀನಿನ ಪಕ್ಕದಲ್ಲಿ ಶಾಸಕರು ತೆರಳುವಾಗ ಶಾಸಕರನ್ನ ನಿಲ್ಲಿಸಿ ಶಾಸಕರಿಂದ ರೈತ ಬಿತ್ತನೆ ಮಾಡಲು ಬರುವಂತೆ ಮನವಿ ಮಾಡಿಕೊಂಡಿದ್ದಾನೆ. ರೈತನ ಮಾತಿಗೆ ನೇಗಿಲು ಹಿಡಿದು ಹೊಲ ಊಳಿ ಮೆಕ್ಕೆ ಜೋಳವನ್ನ ಬಿತ್ತನೆ ಮಾಡಿದ್ದಾರೆ.

The post ನೇಗಿಲು ಹಿಡಿದು ಬಿತ್ತನೆಗೂ ಸೈ ಎಂದ ಶಾಸಕ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link