ನೇಣು ಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ; ಬಿಜೆಪಿ ಶಾಸಕನೇ ಸಾವಿಗೆ ಕಾರಣವೆಂದು ಸೂಸೈಡ್ ನೋಟ್​​ನಲ್ಲಿ ಆರೋಪ | Crime News Seer kills self in Rajasthan Jalore accuses BJP MLA in suicide note


ರವಿನಾಥ್ ಅವರ ಸೂಸೈಡ್ ನೋಟ್​​ನಲ್ಲಿ ಜಮೀನು ವಿವಾದದಿಂದ ಈ ರೀತಿ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತನ್ನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದಂತೆ ಆಡಳಿತಕ್ಕೆ ಸೂಸೈಡ್ ನೋಟ್​​ನಲ್ಲಿ ಮನವಿ ಮಾಡಿದ್ದಾರೆ.

ನೇಣು ಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ; ಬಿಜೆಪಿ ಶಾಸಕನೇ ಸಾವಿಗೆ ಕಾರಣವೆಂದು ಸೂಸೈಡ್ ನೋಟ್​​ನಲ್ಲಿ ಆರೋಪ

ರವಿನಾಥ್

Image Credit source: India Today

ಜೈಪುರ: ಜಮೀನು ವಿವಾದದ ಹಿನ್ನೆಲೆಯಲ್ಲಿ ರವಿನಾಥ್ ಎಂಬ 60 ವರ್ಷದ ಸ್ವಾಮೀಜಿ ಗುರುವಾರ ರಾತ್ರಿ ಆತ್ಮಹತ್ಯೆ (Suicide)  ಮಾಡಿಕೊಂಡಿದ್ದಾರೆ. ಭಿನ್ಮಾಲ್ ಶಾಸಕ ಪೂರ ರಾಮ್ ಚೌಧರಿ (Poora Ram Choudhary) ಅವರಿಂದಲೇ ಆ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರವಿನಾಥ್ (Ravinath) ಅವರಿದ್ದ ಆಶ್ರಮದ ದರ್ಶಕರು ಆರೋಪಿಸಿದ್ದಾರೆ. ನನ್ನ ಆತ್ಮಹತ್ಯೆಗೆ ಬಿಜೆಪಿ ಶಾಸಕ ಪೂರ ರಾಮ್ ಚೌಧರಿ ಅವರೇ ಕಾರಣ ಎಂದು ರವಿನಾಥ್ ಸೂಸೈಡ್ ನೋಟ್ ಬರೆದಿಟ್ಟಿದ್ದಾರೆ.

ರವಿನಾಥ್ ಅವರ ಸೂಸೈಡ್ ನೋಟ್​​ನಲ್ಲಿ ಜಮೀನು ವಿವಾದದಿಂದ ಈ ರೀತಿ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತನ್ನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದಂತೆ ಆಡಳಿತಕ್ಕೆ ಸೂಸೈಡ್ ನೋಟ್​​ನಲ್ಲಿ ಮನವಿ ಮಾಡಿದ್ದಾರೆ.

ರಾಜಪುರ ಗ್ರಾಮದ ಸುಂಧಾ ಮಾತಾ ದೇವಸ್ಥಾನದ ತಪ್ಪಲಿನಲ್ಲಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸನ್ಯಾಸಿಯ ಶವ ಪತ್ತೆಯಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆಶ್ರಮದ ಬಳಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *