ಬೆಂಗಳೂರು: ಫಲಾನುಭವಿಗಳಿಗೆ ಅನುಕೂಲ ಆಗುವಂತೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡುವ ಯೋಜನೆಯ ಮೊಬೈಲ್​ ಆಪ್​​ಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ.

ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅಡಿ ಲಾಭ ಪಡೆದ ಫಲಾನುಭವಿಗಳಿಗೆ ಡಿ.ಬಿ.ಟಿ ಮೊಬೈಲ್ ಆಪ್​ಅನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ಡೌನ್​ ಲೋಡ್​​ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಲು ಆಪ್ ಸಹಕಾರಿಯಾಗಲಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದೆ.

ಡಿ.ಬಿ.ಟಿ ಮೊಬೈಲ್ ಆಪ್​​ನ ವೈಶಿಷ್ಟ್ಯತೆಗಳು

  • ಆಧಾರ್- ಕೆವೈಸಿ ಮೂಲಕ ನೋಂದಣಿ
  • ಆಧಾರ್​-ಬ್ಯಾಂಕ್​ ಖಾತೆ ಸೀಡಿಂಗ್​ ವಿವರಗಳ ವೀಕ್ಷಣೆಗೆ ಸೌಲಭ್ಯ
  • ಸರ್ಕಾರದ ವಿವಿಧ ಯೋಜನೆಗಳಡಿ ಪಾವತಿಸಿದ ಮೊತ್ತ, ದಿನಾಂಕ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಫಲಾನುಭವಿಗಳಿಗೆ ವೀಕ್ಷಿಸಲು ಅವಕಾಶ
  • ಡಿಬಿಟಿ ಆಪ್ ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ಲಭ್ಯವಿದೆ
  • ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಆಪ್ ಕಾರ್ಯನಿರ್ವಹಿಸುತ್ತದೆ

 

The post ನೇರ ನಗದು ವರ್ಗಾವಣೆ ಅಪ್ಲಿಕೇಶನ್‌ಗೆ ಸಿಎಂ ಚಾಲನೆ- ಏನಿದರ ವಿಶೇಷತೆ? appeared first on News First Kannada.

Source: newsfirstlive.com

Source link